ಸಾಂದರ್ಭಿಕ ಚಿತ್ರ 
ದೇಶ

ಶೀಲ ಶಂಕಿಸಿ ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿ! 35 ವರ್ಷದ ಮಹಿಳೆ ಸಾವು | Husband sets wife on fire

ಪ್ರಮುಖ ಮುಖ್ಯಾಂಶಗಳು

  • ಮಲಗಿದ್ದ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿ
  • ಸುಮಾರು 15 ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿ
  • ಪತಿಯ ಕಿರುಕುಳಕ್ಕೆ ಬೇಸತ್ತು ತವರು ಸೇರಿದ್ದ ಮಹಿಳೆ

ರಾಜಸ್ಥಾನ

ಮೃತ ಮಹಿಳೆಯನ್ನು ಪೂಜಾ (35) ಎಂದು ಗುರುತಿಸಲಾಗಿದ್ದು, ಆಕೆಯ ಪತಿ ಸುಲ್ತಾನ್ ರಾಮ್ (40) ಕೃತ್ಯ ಎಸಗಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. 15 ವರ್ಷಗಳ ಹಿಂದೆ ವಿವಾಹವಾಗಿದ್ದ, ಪೂಜಾ-ಸುಲ್ತಾನ್ ರಾಮ್‌ಗೆ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಪತಿ-ಪತ್ನಿ ನಡುವೆ ಪದೇಪದೇ ಜಗಳ ನಡೆಯುತ್ತಿತ್ತು. ಹಿರಿಯರು ಎಷ್ಟೋ ಸಲ ರಾಜಿ-ಸಂಧಾನಗಳನ್ನು ನಡೆಸಿದ್ದರು.
ಇತ್ತಿಚೀಗೆ, ಪತಿ ಕಿರುಕುಳ ತಾಳದೆ ಪೂಜಾ ಕಳೆದ ಮೂರು ತಿಂಗಳಿಂದ ತವರು ಮನೆ ಸೆರಿದ್ದಳು. ಆದರೆ ಸೋಮವಾರ ಮುಂಜಾನೆ ಸುಲ್ತಾನ್ ರಾಮ್ ಪತ್ನಿಯ ತವರು ಮನೆಗೆ ಹೋಗಿದ್ದ. ಮನೆಯ ಟೆರೇಸ್ ಮೂಲಕ ಒಳಗೆ ಹೋಗಿ, ಕೋಣೆಯಲ್ಲಿ ಮಲಗಿದ್ದ ಪೂಜಾ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿಕಿತ್ಸೆ ಫಲಿಸದೆ ಮಹಿಳೆ ಸಾವು

ಇತ್ತ, ಕಿರುಚಾಟ ಕೇಳಿದ ಕುಟುಂಬಸ್ಥರು ಓಡಿಹೋಗಿ ಬೆಂಕಿ ನಂದಿಸಿದ್ದಾರೆ. ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಪೂಲಾಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ದೇಹದ ಶೇ.80ಕ್ಕೂ ಹೆಚ್ಚು ಭಾಗ ಸುಟ್ಟು ಹೋಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬಿಕಾನೇರ್‌ನ ಪಿಬಿಎಂ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗಮಧ್ಯೆಯೇ ಪೂಜಾ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿಯ ಶೀಲ ಶಂಕಿ ಕೃತ್ಯ

ಘಟನೆಯಲ್ಲಿ ಆರೋಪಿ ಸುಲ್ತಾನ್ ರಾಮ್ ಕೂಡ ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.  ಘಟನಾ ಸ್ಥಳದಲ್ಲಿದ್ದ ಐದು ಲೀಟರ್ ಪೆಟ್ರೋಲ್ ಕ್ಯಾನ್ ಅನ್ನು ವಶಪಡಿಸಿಕೊಂಡಿದ್ದಾರೆ. ಪತಿ ಆಗಾಗ್ಗೆ ಪೂಜಾ ಮೇಲೆ ಹಲ್ಲೆ ನಡೆಸುತ್ತಿದ್ದ. ಅಲ್ಲದೆ, ಆಕೆಗೆ ವಿವಾಹೇತರ ಸಂಬಂಧವಿದೆ ಎಂದು ಶೀಲ ಶಂಕಿಸುತ್ತಿದ್ದ ಎಂದು ಮೃತಳ  ಕುಟುಂಬಸ್ಥರು ಆರೋಪಿಸಿದ್ದಾರೆ.
ಇನ್ನು, ಮೃತ ಪೂಜಾ ಸಹೋದರ ನೀಡಿದ ದೂರಿನ ಮೇಲೆ ಸದರ್ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ಪೂಜಾ ಮೃತಪಟ್ಟ ಬಳಿಕ ಕೊಲೆ ಕೇಸ್​ ಎಂದು ಎಫ್ಐಆರ್​ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿ ವಿರುದ್ಧ ಕಾನೂನು ಕಠಿಣ ಕ್ರಮ ಕೈಗೊಳ್ಳಿ ಎಂದು ಪೂಜಾ ಪೋಷಕರು ಆಗ್ರಹಿಸಿದ್ದಾರೆ, (ಏಜೆನ್ಸೀಸ್​).