ಪತ್ನಿಯನ್ನು ರೆಡ್ಹ್ಯಾಂಡ್ ಆಗಿ ಹಿಡಿದ ಗಂಡ
- ತನ್ನ ಪ್ರಿಯಕರನೊಂದಿಗೆ ಹೊರಗೆ ಸುತ್ತಾಡಲು ಹೋಗಿದ್ದ ಮಹಿಳೆ
- ಜಿಪಿಎಸ್ ಟ್ರ್ಯಾಕರ್ ಸಹಾಯದಿಂದ ರೆಡ್ಹ್ಯಾಂಡ್ ಆಗಿ ಹಿಡಿದ ಗಂಡ
- ಪಂಜಾಬ್ನ ಅಮೃತಸರದಲ್ಲಿ ನಡೆದ ಘಟನೆ
- ವಿಡಿಯೋ ಹರಿಬಿಟ್ಟು ಕಣ್ಣೀರಿಟ್ಟ ಮಹಿಳೆಯ ಗಂಡ
ಅಮೃತಸರ: ಮದುವೆ ಆಗಿದ್ದರೂ ತನ್ನ ಪ್ರಿಯಕರನೊಂದಿಗೆ ಹೊರಗೆ ಸುತ್ತಾಡಲು ಹೋಗಿದ್ದ ಮಹಿಳೆಯನ್ನು ಆಕೆಯ ಪತಿ ಜಿಪಿಎಸ್ ಟ್ರ್ಯಾಕರ್ ಸಹಾಯದಿಂದ ರೆಡ್ಹ್ಯಾಂಡ್ ಆಗಿ ಹಿಡಿದ ( Husband Caught Wife ) ಘಟನೆ ಪಂಜಾಬ್ನ ಅಮೃತಸರದಲ್ಲಿ ನಡೆದಿದೆ.
ತನ್ನ ಪತ್ನಿಗೆ ಹಲವು ಬಾರಿ ಕರೆ ಮಾಡಿದರೂ ಆಕೆ ಫೋನ್ ರಿಸೀವ್ ಮಾಡದೇ ಇದ್ದಾಗ ಪತಿ, ತನ್ನ ಸ್ಕೂಟರ್‌ನ ಜಿಪಿಎಸ್ ಟ್ರ್ಯಾಕರ್ ಸಹಾಯದಿಂದ ಪತ್ನಿ ಇರುವ ಜಾಗವನ್ನು ಪತ್ತೆಹಚ್ಚಿ, ಲವರ್ ಜತೆ ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾನೆ.
ರವಿ ಗುಲಾಟಿ ಮತ್ತು ಮಹಿಳೆ 15 ವರ್ಷಗಳ ಹಿಂದೆ ವಿವಾಹವಾದರು. ಇತ್ತೀಚೆಗೆ ರವಿ ಅವರು ಸಂಜೆ ಹೊತ್ತು ತಮ್ಮ ಪತ್ನಿಗೆ ಫೋನ್ ಮಾಡಿದರು. ಎಷ್ಟೇ ಕರೆ ಮಾಡಿದರೂ ಪತ್ನಿಯಿಂದ ಮಾತ್ರ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಸುಮಾರು ಹತ್ತರಿಂದ ಹದಿನೈದು ಬಾರಿ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗಲಿಲ್ಲ. ಬಳಿಕ ಸ್ಕೂಟರ್‌ನಲ್ಲಿರುವ ಜಿಪಿಎಸ್ ಟ್ರ್ಯಾಕರ್ ಬಳಸಿ ತನ್ನ ಹೆಂಡತಿಯನ್ನು ಹುಡುಕಬಹುದು ಅನ್ನೋದು ರವಿಗೆ ಅರಿವಾಯಿತು. ತಕ್ಷಣ ಆತ ಟ್ರ್ಯಾಕರ್ ಆನ್ ಮಾಡಿ ಅದನ್ನು ಹಿಂಬಾಲಿಸಿದನು. ಸ್ಕೂಟರ್ ಒಂದು ಹೋಟೆಲ್‌ನ ಪಾರ್ಕಿಂಗ್ ಸ್ಥಳದಲ್ಲಿತ್ತು. ಬಳಿಕ ಹೋಟೆಲ್ನಲ್ಲಿ ಹೋಗಿ ವಿಚಾರಿಸಿದಾಗ ರವಿ ತನ್ನ ಹೆಂಡತಿಯನ್ನು ಆಕೆಯ ಪ್ರೇಮಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಹಿಡಿದುಕೊಂಡನು.
2018ರಲ್ಲೇ ರವಿ, ತನ್ನ ಹೆಂಡತಿಗೆ ಮತ್ತೊಂದು ಸಂಬಂಧ ಇದ್ದಿದ್ದನ್ನು ಕಂಡುಕೊಂಡಿದ್ದನು. ಆ ಬಗ್ಗೆ ಪತ್ನಿಯ ಪಾಲಕರಿಗೆ ದೂರು ನೀಡಿದ್ದನು. ಅಲ್ಲದೆ, ತನ್ನ ಮಕ್ಕಳ ಮೇಲಿನ ಪ್ರೀತಿಯಿಂದಾಗಿ ಪತ್ನಿಯನ್ನು ಕ್ಷಮಿಸಿದ್ದನು. ಆದರೂ, ಅಂದಿನಿಂದ ರವಿಗೆ ತನ್ನ ಹೆಂಡತಿಯ ಮೇಲೆ ಅನುಮಾನ ಹಾಗೇ ಉಳಿದಿತ್ತು. ಇದೇ ಅನುಮಾನದಿಂದ ರವಿ, ತನ್ನ ಹೆಂಡತಿಯ ಸ್ಕೂಟರ್‌ನಲ್ಲಿ ಜಿಪಿಎಸ್ ಅಳವಡಿಸಿದನು.
ಇತ್ತೀಚೆಗೆ ತನ್ನ ಪತ್ನಿ ಫೋನ್ ಕರೆಯನ್ನು ಸ್ವೀಕರಿಸದೇ ಇದ್ದಾಗ ಜಿಪಿಎಸ್ ಟ್ರ್ಯಾಕರ್ ಆನ್ ಮಾಡಿ ಸ್ಕೂಟರ್ ಲೊಕೇಶನ್ ಪತ್ತೆಹಚ್ಚಿದನು. ಹೋಟೆಲ್ನಲ್ಲಿ ತನ್ನ ಪ್ರಿಯಕರನೊಂದಿಗೆ ಪತ್ನಿ ಇರುವುದನ್ನು ನೋಡಿ ಗಂಡನಿಗೆ ಆಘಾತವಾಯಿತು. ಅಲ್ಲದೇ ಕೋಪವು ಉಕ್ಕಿತು. ಅದೇ ಕೋಪದಲ್ಲಿ ರವಿ ತನ್ನ ಪತ್ನಿ ಮತ್ತು ಆಕೆಯ ಪ್ರಿಯಕರನ ಜೊತೆ ಜಗಳ ಆಡಿದನು. ಈ ವೇಳೆ ಮಹಿಳೆ ತನ್ನ ಪತಿಯೊಂದಿಗೆ ಹೋಗಲು ಇಷ್ಟವಿಲ್ಲ ಎಂದು ಹೇಳಿದಳು. ಹೀಗಾಗಿ ಮಹಿಳೆ ಇದೀಗ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಾಳೆ. ಈ ಘಟನೆಯ ಕುರಿತು ಪತಿ ಮಾತನಾಡಿರುವ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪತ್ರಕರ್ತೆ ಮತ್ತು ನಿರ್ದೇಶಕಿ ದೀಪಿಕಾ ನಾರಾಯಣ್ ಭಾರದ್ವಾಜ್ ಅವರು ಈ ವಿಡಿಯೋವನ್ನು ತಮ್ಮ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ಈಗ ನೋಡಿ ಆಕೆ ತನ್ನ ಗಂಡನ ವಿರುದ್ಧ ಮಾತ್ರವಲ್ಲದೆ ಆತನ ಇಡೀ ಕುಟುಂಬದ ವಿರುದ್ಧವೂ ನಕಲಿ ವರದಕ್ಷಿಣೆ ಪ್ರಕರಣ ದಾಖಲಿಸುತ್ತಾಳೆ. ಪೊಲೀಸರು ಖುಷಿ ಖುಷಿಯಾಗಿ ಪ್ರಕರಣ ದಾಖಲಿಸುತ್ತಾರೆ. ನ್ಯಾಯಾಲಯ ಕೂಡ ಆಕೆಗೆ ಜೀವನಾಂಶ ನೀಡುತ್ತದೆ. ಏಕೆಂದರೆ, ಆಕೆ ದುರ್ಬಲ ಮಹಿಳೆ. ಈ ವ್ಯಭಿಚಾರವು ಆಕೆಯ ಜೀವನಾಂಶದ ಹಕ್ಕನ್ನು ಮಾತ್ರ ಕಸಿದುಕೊಳ್ಳುವುದಿಲ್ಲ ಎಂದು ದೀಪಿಕಾ ನಾರಾಯಣ್ ವಿಡಿಯೋವನ್ನು ಹಂಚಿಕೊಳ್ಳುವಾಗ ಪೋಸ್ಟ್‌ನಲ್ಲಿ ಬರೆದಿದ್ದಾರೆ, (ಏಜೆನ್ಸೀಸ್).