ಬಂಗಾಳದಲ್ಲಿ ಬಾಬ್ರಿ ಮಸೀದಿ ಕಟ್ಟೇ ಕಟ್ಟುತ್ತೇನೆ: ಹುಮಾಯೂನ್​ ಕಬೀರ್​ 
ದೇಶ

ಬಂಗಾಳದಲ್ಲಿ ಬಾಬ್ರಿ ಕಟ್ಟೇ ಕಟ್ಟುತ್ತೇನೆ: ತಾಕತ್ತಿದ್ದರೆ ತಡೆಯಿರಿ; ಹುಮಾಯೂನ್​ ಕಬೀರ್​ ವಿವಾದಾತ್ಮಕ ಹೇಳಿಕೆ!Humayun Kabir on Babri Masjid

ಪ್ರಮುಖ ಮುಖ್ಯಾಂಶಗಳು

  • ಏಪ್ರಿಲ್​ 23 ಮತ್ತು 25 ರಂದು ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ
  • ಬಂಗಾಳದಲ್ಲಿ ಬಾಬ್ರಿ ಮಸೀದಿ ಕಟ್ಟೇ ಕಟ್ಟುತ್ತೇನೆ: ಹುಮಾಯೂನ್​ ಕಬೀರ್​
  • ಬಂಗಾಳದಲ್ಲಿ ಶೇ. 37 ರಷ್ಟು ಮುಸ್ಲಿಮರಿದ್ದಾರೆ ಅವರ ಗೌರವಕ್ಕಾಗಿ ನಾನು ಈ ಕೆಲಸ ಮಾಡಲಿದ್ದೇನೆ
ಕಲ್ಕತ್ತಾ: ಇನ್ನೇನು ಕೆಲವೇ ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಭಾರಿ ಚುನಾವಣಾ ಕಣದಲ್ಲಿರುವ ಆಮ್​ ಜನತಾ ಉನ್ನಿಯನ್​ ಪಾರ್ಟಿ ಸ್ಥಾಪಕ ಹುಮಾಯೂನ್​ ಕಬೀರ್​ (Humayun Kabir on Babri Masjid) ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಬಂಗಾಳದಲ್ಲಿ ಬಾಬ್ರಿ ಕಟ್ಟೇ ಕಟ್ಟುತ್ತೇನೆ!

ಬುಧವಾರ (ಏ.15) ಖಾಸಗಿ ಮಾಧ್ಯಮ ಸಂಸ್ಥರಯೊಂದರಲ್ಲಿ ಮಾತನಾಡಿದ ಹುಮಾಯೂನ್​ ಕಬೀರ್​, ನಾನು ಬಿಜೆಪಿಯಿಂದ 1000 ಕೋಟಿ ತೆಗೆದುಕೊಂಡಿದ್ದೆನೆ ಎನ್ನುವುದು ಸುಳ್ಳು ಆರೋಪವಾಗಿದೆ. ಹಾಗೆಯೇ ನಾನು ಮುಂದಿನ ಎರಡು ವರ್ಷದಲ್ಲಿ ಬಂಗಾಳದಲ್ಲಿ ಬಾಬ್ರಿ ಮಸೀದಿಯನ್ನು ಕಟ್ಟುತ್ತೇನೆ, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ನಿಮಗೆ ಬಾಬ್ರಿ ಮಸೀದಿಯನ್ನು ಕಟ್ಟಲೇ ಬೇಕಿದ್ದರೆ ಹೋಗಿ ಉತ್ತರ ಪ್ರದೇಶದಲ್ಲಿಯೇ ಕಟ್ಟಿ ಎಂದು ನಿರೂಪಕ ಕೇಳಿದಾಗ, ಬಂಗಾಳದಲ್ಲಿ ಶೇ.37 ರಷ್ಟು ಜನ ಮುಸ್ಲಿಮರಿದ್ದಾರೆ, ಹಾಗೆಯೇ ಶೇ. 70 ರಷ್ಟು ಮುಸ್ಲಿಮರು ಮುರ್​ಷಿದಾಬಾದ್​ನಲ್ಲಿದ್ದಾರೆ. ಹೀಗಾಗಿ ನಾನು ಬಾಬ್ರಿ ಮಸೀದಿಯನ್ನು ಇಲ್ಲಿಯೇ ಕಟ್ಟುವ ಮೂಲಕ ಇಸ್ಲಾಂ ಮತ್ತು ಖುರಾನ್​ಗೆ ಬೆಂಬಲ ಸೂಚಿಸುತ್ತಿದ್ದೆನೆ ಎಂದು ಹುಮಾಯೂನ್​ ಕಬೀರ್​ ಹೇಳಿದ್ದಾರೆ.

ಓವೈಸಿ ಜೊತೆ ಮುರಿದು ಬಿದ್ದ ಮೈತ್ರಿ!

294 ಸ್ಥಾನಗಳಿಗೆ ನಡೆಯಲಿರುವ ಬಂಗಾಳ ಚುನಾವಣೆಯಲ್ಲಿ, ಆಮ್​ ಜನತಾ ಉನ್ನಿಯನ್​ ಪಾರ್ಟಿ ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಲಿವೆ ಎಂದು ಹೇಳಲಾಗುತ್ತಿತ್ತು. ಹಾಗೆಯೇ ಹುಮಾಯೂನ್​ ಮತ್ತು ಅಸಾದುದ್ದೀನ್​ ಓವೈಸಿ ಜಂಟಿ ಸುದ್ದಿಗೋಷ್ಠಿ ನಡೆಸಿ ಒಟ್ಟಾಗಿ ಕಣಕ್ಕಿಳಿಯುವುದಾಗಿ ತಿಳಿಸಿದ್ದರು. ಆದರೆ ಕೆಲ ಕಾಲದ ನಂತರ ಇಬ್ಬರಲ್ಲಿ ಮನಸ್ಥಾಪ ಉಂಟಾದ ಹಿನ್ನಲೆ ಈ ಮೈತ್ರಿ ತುಂಡಾಯಿತು, (ಏಜನ್ಸೀಸ್​).