ನಟಿ ಶಕೀಲಾ ಇತ್ತೀಚೆಗೆ ಕುತ್ತಿಗೆಗೆ ಶಸ್ತ್ರಚಿಕಿತ್ಸೆ  
ದೇಶ

ಗಂಟೆಗಟ್ಟಲೆ ಮೊಬೈಲ್ ಬಳಕೆ; ಶಕೀಲಾ ಕುತ್ತಿಗೆಗೆ ಶಸ್ತ್ರಚಿಕಿತ್ಸೆ- ‘ಟೆಕ್ ನೆಕ್’ಬಗ್ಗೆ ಎಚ್ಚರ! | Shakeela neck surgery

ಪ್ರಮುಖ ಮುಖ್ಯಾಂಶಗಳು

  • ಕುತ್ತಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಟಿ ಶಕೀಲಾ
  • ಗಂಟೆಗಟ್ಟಲೆ ಮೊಬೈಲ್ ಬಳಸಿದ್ದಕ್ಕೆ ‘ಟೆಕ್ ನೆಕ್’ ಸಮಸ್ಯೆ
  • ಅತಿಯಾಗಿ ಮೊಬೈಲ್ ನೋಡಿದ್ದೇ ಸಮಸ್ಯೆ ಕಾರಣ ಎಂದ ನಟಿ
Shakeela neck surgery: ದಕ್ಷಿಣ ಭಾರತದ ಜನಪ್ರಿಯ ನಟಿ ಶಕೀಲಾ ಇತ್ತೀಚೆಗೆ ಕುತ್ತಿಗೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಸರ್ವೈಕಲ್ ಸ್ಪೈನ್ ಸಮಸ್ಯೆಯಿಂದಾಗಿ ಈ ಆಪರೆಷನ್​ ಮಾಡಲಾಗಿದ್ದು, ಇದಕ್ಕೆ ಸುಮಾರು 3 ಲಕ್ಷ ರೂಪಾಯಿ ಖರ್ಚಾಗಿದೆ ಎಂದು ವರದಿಯಾಗಿದೆ.
ಆಸ್ಪತ್ರೆಯಿಂದ ಮನೆಗೆ ಹೋದ ಬಳಿಕ ಅವರು ಕುತ್ತಿಗೆಗೆ ಕಾಲರ್ ಹಾಕಿಕೊಂಡಿರುವ ವಿಡಿಯೋವನ್ನು ಸೋಷಿಯಲ್​ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಗಂಟೆಗಟ್ಟಲೆ ಮೊಬೈಲ್ ಬಳಸುತ್ತಿದ್ದರಿಂದ ಅವರಿಗೆ ಈ ಸಮಸ್ಯೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. ವಿಶೇಷವಾಗಿ ಗೇಮ್ ಆಡುವುದು, ಯೂಟ್ಯೂಬ್ ಹಾಗೂ ಇನ್‌ಸ್ಟಾಗ್ರಾಂ ರೀಲ್ಸ್ ನೋಡುವ ಗೀಳಿನಿಂದಾಗಿ ಒಂದೇ ಭಂಗಿಯಲ್ಲಿ ನಾಲ್ಕು ಗಂಟೆ ಮೊಬೈಲ್ ಬಳಸುತ್ತಿದ್ದೆ ಎಂದಿದ್ದಾರೆ.

ಮೊಬೈಲ್‌ನಿಂದ ಕುತ್ತಿಗೆ ಸಮಸ್ಯೆ ಹೇಗೆ?

ಸದಾ ತಲೆ ಬಗ್ಗಿಸಿಕೊಂಡು ಬಹಳ ಹೊತ್ತು ಮೊಬೈಲ್ ನೋಡುವುದರಿಂದ ಕುತ್ತಿಗೆಯ ಸ್ನಾಯುಗಳು ಹಾಗೂ ಸರ್ವೈಕಲ್ ಸ್ಪೈನ್ ಮೇಲೆ ಹೆಚ್ಚಿನ ಒತ್ತಡ ಬೀಳಬಹುದು. ಇದರಿಂದ ಕುತ್ತಿಗೆ ನೋವು, ಬಿಗಿತ, ಭುಜ ನೋವು, ಸ್ನಾಯುಗಳ ಆಯಾಸ ಮತ್ತು ತಲೆನೋವು ಕಾಣಿಸಿಕೊಳ್ಳಬಹುದು ಎಂಬುದು ತಜ್ಱರ ಅಭಿಪ್ರಾಯ.

ಕುತ್ತಿಗೆಯನ್ನು ಹೇಗೆ ಕಾಪಾಡಿಕೊಳ್ಳಬೇಕು?

ಇನ್ನು, ಮೊಬೈಲ್ ಪೋನ್​ ಅನ್ನು ಕಣ್ಣಿನ ಮಟ್ಟಕ್ಕೆ ಹಿಡಿದು ಬಳಸುವುದು, ಮಧ್ಯೆ ಮಧ್ಯೆ ವಿರಾಮ ತೆಗೆದುಕೊಳ್ಳುವುದು ಹಾಗೂ ಮೊಬೈಲ್ ನೋಡುವ ಭಂಗಿಯನ್ನು ಬದಲಾಯಿಸುವುದು ಒಳ್ಳೆಯದು. ಮಲಗಿಕೊಂಡು ಗಂಟೆಗಟ್ಟಲೆ ಮೊಬೈಲ್ ಬಳಸುವುದನ್ನು ಬಿಡಬೇಕು. ಕುತ್ತಿಗೆ ನೋವು ನಿರಂತರವಾಗಿದ್ದರೆ, ಕೈಗಳಲ್ಲಿ ಜುಮ್ಮೆನಿಸುವುದು, ಮರಗಟ್ಟುವುದು ಅಥವಾ ಭುಜ-ಕೈಗಳಲ್ಲಿ ನೋವು ಕಾಣಿಸಿಕೊಂಡರೆ ತಕ್ಷಣ ಡಾಕ್ಟರ್​ ಬಳಿ ಹೋಗುವುದು ಉತ್ತಮ,(ಏಜೆನ್ಸೀಸ್​).