(ಚಿತ್ರ X) 
ದೇಶ

ಬಣ್ಣ ಹಾಕಿದ್ದೇ ತಪ್ಪಾಯ್ತಾ?: ಕ್ಷಣಿಕ ಸಿಟ್ಟಿಗೆ ಮೊಮ್ಮಗನ ಜೀವನದ ಜೊತೆ ಚೆಲ್ಲಾಟವಾಡಿದ ಅಜ್ಜಿ! Hot Water

ಪ್ರಮುಖ ಮುಖ್ಯಾಂಶಗಳು

  • ಹೋಳಿ ಸಂಭ್ರಮದಲ್ಲಿ ಆಡವಾಡುತ್ತಿದ್ದು ನಾಲ್ಕು ವರ್ಷದ ಬಾಲಕನ ಮೇಲೆ ಕುದಿಯುವ ನೀರು ಎರಚಿದ ಅಜ್ಜಿ
  • ಪೊಲೀಸರ ಮಾಹಿತಿ ಪ್ರಕಾರ, ಬುಧವಾರ ಮಗು ಮನೆಯ ಆವರಣದಲ್ಲಿ ಹೋಳಿ ಹಬ್ಬವನ್ನು ಆಚರಿಸುತ್ತಿತ್ತು
  • ಈ ವೇಳೆ ಆಕಸ್ಮಿಕವಾಗಿ ಅಜ್ಜಿಯ ಮೇಲೆ ಬಣ್ಣವನ್ನು ಎರಚಿದ್ದರಿಂದ ಕೋಪಗೊಂಡ ಅಜ್ಜಿ ಕುದಿಯುವ ನೀರನ್ನು ಎರಚಿದ್ದಾಳೆ
  • ಕುದಿಯುವ ನೀರು ಮೈಮೇಲೆ ಬಿದ್ದ ತಕ್ಷಣ ಮಗುವಿನ ಮೈಯಲ್ಲಿ ತೀವ್ರತರವಾದ ಸುಟ್ಟ ಗಾಯಗಳಾಗಿವೆ
ಮಹಾರಾಷ್ಟ್ರ: ಹೋಳಿ ಹಬ್ಬದ ಸಂಭ್ರಮದಲ್ಲಿ ಆಡವಾಡುತ್ತಿದ್ದು ನಾಲ್ಕು ವರ್ಷದ ಬಾಲಕನ ಮೇಲೆ ಕುದಿಯುವ ನೀರನ್ನು(Hot Water)  ಆತನ ಸ್ವಂತ ಅಜ್ಜಿಯೇ ಸುರಿದು ವಿಕೃತಿ ಮೆರೆದಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಪೊಲೀಸರ ಮಾಹಿತಿ ಪ್ರಕಾರ, ಬುಧವಾರ (ಮಾ.04) ಮಗು ಮನೆಯ ಆವರಣದಲ್ಲಿ ಹೋಳಿ ಹಬ್ಬವನ್ನು ಆಚರಿಸುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಅಜ್ಜಿಯ ಮೇಲೆ ಬಣ್ಣದ ನೀರನ್ನು ಎರಚಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆಯು ತನ್ನ ಕೈಯಲ್ಲಿದ್ದ ಕುದಿಯುವ ನೀರನ್ನು ನೇರವಾಗಿ ಮಗುವಿನ ಮೇಲೆ ಎರಚಿದ್ದಾಳೆ.
ಕುದಿಯುವ ನೀರು ಮೈಮೇಲೆ ಬಿದ್ದ ತಕ್ಷಣ ಮಗುವಿನ ಮೈಯಲ್ಲಿ ತೀವ್ರತರವಾದ ಸುಟ್ಟ ಗಾಯಗಳಾಗಿವೆ. ಮಗುವಿನ ಕಿರುಚಾಟವನ್ನು ಕೇಳಿ ಓಡಿಬಂದ ತಾಯಿ ಮತ್ತು ನೆರೆಹೊರೆಯವರು ಮಗುವನ್ನು ಆಸ್ಪತ್ರಗೆ ಕರೆದುಕೊಂಡು ಹೋಗಿದ್ದಾರೆ.

ವೈದ್ಯರ ಪ್ರತಿಕ್ರಿಯೆ

ಬಾಲಕನ ದೇಹದಲ್ಲಿ  ಶೇ. 45 ರಷ್ಟು ತೀವ್ರ ಸುಟ್ಟಗಾಯಗಳಾಗಿರುವುದಾಗಿ ಅಂದಾಜಿಸಲಾಗಿದೆ ಎಂದು ನಾಗ್ಪುರದ ಖಾಸಗಿ ವೈದ್ಯರು ತಿಳಿಸಿದ್ದಾರೆ. ಆದಾಗ್ಯೂ, ಮಹಿಳೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಈ ಘಟನೆ ಸ್ಥಳೀಯ ಸಿಸಿಟಿಯಲ್ಲಿ ಸೆರೆಯಾಗಿದ್ದು, ಅದರಲ್ಲಿ ಅಜ್ಜಿ ಕಪ್ಪು ಸೀರೆಯುಟ್ಟ ಬಕೆಟ್‌ನಲ್ಲಿ ನೀರು ತುಂಬಿಸಿಕೊಂಡು ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸಲಾಗಿದೆ. ಈ ವೇಳೆ ಮಗು ಆಟವಾಡುತ್ತಾ ಬಂದು ಆಕೆಗೆ ಬಣ್ಣವನ್ನು ಎರಚಿದ್ದಾನೆ. ಕೋಪಗೊಂಡು ತನ್ನ ಕೈಯಲ್ಲಿದ್ದ ಬಿಸಿ ನೀರನ್ನು ಬಾಲಕನ ಮೇಲೆ ಎರಚಿದ್ದಾಳೆ. ನಂತರ ಪಕ್ಕದಲ್ಲೇ ಹೋಗುತ್ತಿದ್ದ ಮತ್ತೊಂದು ಮಹಿಳೆ ಬಾಲಕನ ಮೈಯನ್ನು ಉರಿಯಿಂದ ರಕ್ಷಿಸಲು ತಣ್ಣೀರನ್ನು ಹಾಕುತ್ತಿರುವುದನ್ನು ಈ ವಿಡಿಯೋ ತೋರಿಸುತ್ತದೆ (ಏಜೆನ್ಸೀಸ್​).