ಘಟನೆಯ ಸ್ಥಳ 
ದೇಶ

ಭೀಕರ ರಸ್ತೆ ಅಪಘಾತ; ಸಾರಿಗೆ ಬಸ್ ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿ; ಆರು ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ | Accident

ಚೆನ್ನೈ: ತಮಿಳುನಾಡಿನ ಮಧುರೈನಲ್ಲಿ ಸೋಮವಾರ(ಜು. 13) ಮುಂಜಾನೆ ಸರ್ಕಾರಿ ಬಸ್ ಮತ್ತು ಖಾಸಗಿ ಬಸ್ ಪರಸ್ಪರ ಮುಖಾಮುಖಿ ಡಿಕ್ಕಿ ಹೊಡೆದು ಭೀಕರ ಅಪಘಾತ(Accident) ಸಂಭವಿಸಿದ್ದು, ಘಟನೆಯಲ್ಲಿ ಮಹಿಳೆ ಸೇರಿದಂತೆ ಆರು ಜನ ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಮಧುರೈ ಜಿಲ್ಲೆಯ ತಿರುಚ್ಚಿ-ಮಧುರೈ ರಾಷ್ಟ್ರೀಯ ಹೆದ್ದಾರಿಯ ವಾಂಚಿನಗರಂ ಬಸ್ ನಿಲ್ದಾಣದ ಬಳಿ ಅಪಘಾತ ನಡೆದಿದೆ. ಮುಂಜಾನೆ 3.30ರ ಸುಮಾರಿಗೆ ಚೆನ್ನೈನಿಂದ ಕನ್ಯಾಕುಮಾರಿಯ ಮಾರ್ತಾಂಡಮ್‌ಗೆ ಹೋಗುತ್ತಿದ್ದ ಖಾಸಗಿ ಬಸ್ ನಿಯಂತ್ರಣ ತಪ್ಪಿ ಮಧುರೈನಿಂದ ತಿರುಚ್ಚಿಗೆ ತೆರಳುತ್ತಿದ್ದ ಮತ್ತು ವಿರುದ್ಧ ಡಿಕ್ಕಿನಲ್ಲಿ ಬರುತ್ತಿದ್ದ ಸರ್ಕಾರಿ ಬಸ್​ಗೆ ಡಿಕ್ಕಿ ಹೊಡೆದಿದೆ.
ಘಟನೆ ನಡೆದಾದ ಪ್ರಯಾಣಿಕರು ನಿದ್ರೆಯಲ್ಲಿದ್ದರು ಎನ್ನಲಾಗಿದೆ. ಮೃತರನ್ನು ಸರ್ಕಾರಿ ಬಸ್​ನಲ್ಲಿದ್ದ ತಿರುಚ್ಚಿಯ ಪಿ. ಆನಂದರಾಜ್ 46), ತಿರುಚ್ಚಿಯ ಜಿ. ಸೂರ್ಯ(29), ತಿರುವರೂರಿನ ಕೆ. ಮೊಹಮ್ಮದ್ ಯಾಸಿನ್(60), ಖಾಸಗಿ ಬಸ್​ನಲ್ಲಿದ್ದ ತಿರುನಲ್ವೇಲಿಯ ಜೆ. ಸಿರಿಯಪುಷ್ಪಮ್ (56) ಮತ್ತು ತಿರುನಲ್ವೇಲಿಯ ಜೆ. ಅಬ್ರಹಾಂ (40) ಹಾಗೂ ಬಸ್​ ನಿಲ್ದಾಣದಲ್ಲಿ ಮಲಗಿದ್ದ ಸಿ. ಪೆರುಮಾಳ್ (70) ಎಂದು ಗುರುತಿಸಲಾಗಿದೆ.
ಮಾಹಿತಿ ತಿಳಿದ ಕೂಡಲೇ ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿ, ಖಾಸಗಿ ಮತ್ತು ಸರ್ಕಾರಿ ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಿ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸಿದ್ದಾತೆ. ಸುಮಾರು 41 ಪ್ರಯಾಣಿಕರು ಗಾಯಗೊಂಡಿದ್ದು, ಅವರಲ್ಲಿ 15 ಮಂದಿ ಮೇಲೂರು ಜಿಎಚ್, ಸರ್ಕಾರಿ ರಾಜಾಜಿ ಆಸ್ಪತ್ರೆ ಮತ್ತು ಮಧುರೈನ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಮಧುರೈ ರೇಂಜ್ ಡಿಐಜಿ ಅಭಿನವ್ ಕುಮಾರ್, ಎಸ್ಪಿ ಮಧುರೈ ಎನ್ ದೇವನಾಥನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣ ದಾಖಲಾಗಿದೆ (ಏಜೆನ್ಸೀಸ್).