Honey Trap ಸಾಂದರ್ಭಿಕ ಚಿತ್ರ 
ದೇಶ

56 ವರ್ಷದ ವ್ಯಕ್ತಿಗೆ ಹನಿಟ್ರ್ಯಾಪ್ ಸಂಚು!... ಕ್ರಿಮಿನಲ್ ಕೇಸ್ ಬೆದರಿಕೆ ಹಾಕಿದ್ದ ಕಿಲಾಡಿ ಮಹಿಳೆ ಅಂದರ್​..Honey Trap

ಪ್ರಮುಖ ಮುಖ್ಯಾಂಶಗಳು

  • ಮಹಿಳೆಯೊಬ್ಬರು 56 ವರ್ಷದ ಹಿರಿಯ ವ್ಯಕ್ತಿಯೊಬ್ಬರ ವಿರುದ್ಧ ಅತ್ಯಾಚಾರದ ಸುಳ್ಳು ದೂರು ಸೃಷ್ಟಿಸಿದ ಆರೋಪ
  • ಮನೆಯೊಂದರಲ್ಲಿ ಶುಚಿಗೊಳಿಸಲು ಹೋದಾಗ ಆ ವ್ಯಕ್ತಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದಿದ್ದ ಆರೋಪಿ
  • ಪ್ರಕರಣವನ್ನು ಮುಚ್ಚಿಹಾಕಲು 5 ಲಕ್ಷ ರೂಪಾಯಿ ನೀಡಬೇಕು. ಇಲ್ಲದಿದ್ದರೆ, ಅವರ ವಿರುದ್ಧ ಗಂಭೀರವಾದ ಕೇಸ್ ಹಾಕುವುದಾಗಿ ಬೆದರಿಕೆ
ನವದೆಹಲಿ: ಹೋಮ್ ಸರ್ವೀಸ್ ಒದಗಿಸುವ ಪ್ರಮುಖ ಡಿಜಿಟಲ್ ವೇದಿಕೆ 'ಸ್ನ್ಯಾಬಿಟ್' (Snabit) ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು, 56 ವರ್ಷದ ಹಿರಿಯ ವ್ಯಕ್ತಿಯೊಬ್ಬರ ವಿರುದ್ಧ ಅತ್ಯಾಚಾರದ ಸುಳ್ಳು ದೂರು ಸೃಷ್ಟಿಸಿ, ಅವರ ಕುಟುಂಬದಿಂದ ಹಣ ಸುಲಿಗೆ ಮಾಡಲು (Honey Trap) ಯತ್ನಿಸಿದ ಆರೋಪದ ಮೇಲೆ ದೆಹಲಿ ಪೊಲೀಸ್​ ಅಧಿಕಾರಿಗಳು ಶುಕ್ರವಾರ ಬಂಧಿಸಿರುವುದಾಗಿ ತಿಳಿಸಿದ್ದಾರೆ. 
ಜೂನ್ 30 ರಂದು ಪೂಜಾ ಗಿರಿ ಎಂದು ಗುರುತಿಸಲಾದ ಆರೋಪಿಯು ದ್ವಾರಕಾದ ಚಿತ್ರಕೂಟ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸಕ್ಕೆಂದು ಸೇರಿಕೊಂಡಿದ್ದರು. ಆದಾಗ್ಯೂ, ಅಲ್ಲಿಯ  ಜೆಕೆ ಭಾರದ್ವಾಜ್ ಎಂಬ ವ್ಯಕ್ತಿಯೊಬ್ಬರ ಮನೆಯೊಂದರಲ್ಲಿ ಶುಚಿಗೊಳಿಸಲು ಹೋದಾಗ ಆ ವ್ಯಕ್ತಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ಸಲ್ಲಿಸಿದ್ದರು. 
ದೂರಿನ ನಂತರ, ತನಿಖೆ ಆರಂಭಿಸಿದ ಪೊಲೀಸರು, ಆಕೆ ಗಿರಿ ಭಾರದ್ವಾಜ್ ಅವರ ಮಗನನ್ನು ನೇರವಾಗಿ ಸಂಪರ್ಕಿಸಿ, ಪ್ರಕರಣವನ್ನು ಮುಚ್ಚಿಹಾಕಲು 5 ಲಕ್ಷ ರೂಪಾಯಿ ನೀಡಬೇಕು. ಇಲ್ಲದಿದ್ದರೆ, ಅವರ ವಿರುದ್ಧ ಗಂಭೀರವಾದ ಕ್ರಿಮಿನಲ್ ಮೊಕದ್ದಮೆ ಹೂಡಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾಳೆ ಎಂಬುದನ್ನು ಪತ್ತೆಹಚ್ಚಿದ್ದಾರೆ. 
ಈ ಸಂದರ್ಭದಲ್ಲಿ ಗಿರಿ 2 ಲಕ್ಷ ರೂ. ಸ್ವೀಕರಿಸಲು ಒಪ್ಪಿಕೊಂಡರು ಎನ್ನಲಾಗಿದೆ. ಈ ಎಲ್ಲಾ ವಹಿವಾಟು ಮತ್ತು ಮಾತುಕತೆಯನ್ನು ಮೊಬೈಲ್​ನಲ್ಲಿ ದಾಖಲಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. 
ಭಾರದ್ವಾಜ್ ಹೇಳಿಕೆಯ ಆಧಾರದ ಮೇಲೆ, ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 308 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಗಿರಿಯನ್ನು ಬಂಧಿಸಿ ಅವರಿಂದ 2 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ನ್ಯಾಬಿಟ್ ವಕ್ತಾರರು ಹೇಳಿದ್ದೇನು?

ನಾವು ಕಾನೂನು ಜಾರಿ ಅಧಿಕಾರಿಗಳಿಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದೇವೆ ಮತ್ತು ಅವರ ತನಿಖೆಗೆ ಸಹಾಯ ಮಾಡಲು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಒದಗಿಸಿದ್ದೇವೆ. ಮುನ್ನೆಚ್ಚರಿಕೆ ಕ್ರಮವಾಗಿ, ಪೊಲೀಸ್ ತನಿಖೆಯ ಫಲಿತಾಂಶ ಬರುವವರೆಗೆ ಗ್ರಾಹಕ ಮತ್ತು ಸೇವಾ ಪರಿಣಿತ ಇಬ್ಬರ ಖಾತೆಗಳನ್ನು ಅಮಾನತುಗೊಳಿಸಲಾಗಿದೆ. ನಾವು ಕಾನೂನು ತನ್ನದೇ ಆದ ಹಾದಿಯಲ್ಲಿ ನಡೆಯಲು ಬಿಡುತ್ತೇವೆ ಮತ್ತು ತನಿಖಾಧಿಕಾರಿಗಳಿಗೆ ಅಗತ್ಯವಿರುವ ಮುಂದಿನ ಯಾವುದೇ ಸಹಾಯವನ್ನು ನೀಡಲು ಸದಾ ಸಿದ್ಧರಿದ್ದೇವೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ನಮ್ಮ ಪ್ಲಾಟ್‌ಫಾರ್ಮ್ ಬಳಸುವ ಯಾರೇ ಆಗಲಿ, ಯಾವುದೇ ರೀತಿಯ ಕಾನೂನುಬಾಹಿರ ನಡವಳಿಕೆಯನ್ನು ತೋರಿದರೆ 'ಸ್ನ್ಯಾಬಿಟ್' ಅದನ್ನು ಸಹಿಸುವುದಿಲ್ಲ ನಾವು ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುವುದನ್ನು ಮುಂದುವರಿಸುತ್ತೇವೆ ಎಂದು ವಕ್ತಾರರು ಹೇಳಿದರು (ಏಜೆನ್ಸೀಸ್​).