ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಅಹ್ಮದ್ ಸಜಾದ್ (Ahmed Sajad) ಗುಂಡಿಗೆ ಬಲಿ
- ಪಾಕಿಸ್ತಾನದಲ್ಲಿ ನಿಲ್ಲದ ಅಪರಿಚತ ಬಂದೂಕುದಾರಿಯ ಅಟ್ಟಹಾಸ
- ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಅಹ್ಮದ್ ಸಜಾದ್ (Ahmed Sajad) ಗುಂಡಿಗೆ ಬಲಿ
- ಜನವರಿಯಿಂದ ಇಲ್ಲಿವರೆಗೆ ಸುಮಾರು 30 ಭಯೋತ್ಪಾದಕರು ಬಲಿ
ಇಸ್ಲಾಮಾಬಾದ್: ಜಾಗತಿಕ ಭಯೋತ್ಪಾದನಾ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಜೊತೆ ಸಂಪರ್ಕ ಹೊಂದಿದೆ ಉಗ್ರ ಅಹ್ಮದ್ ಸಜಾದ್ (Ahmed Sajad) ನನ್ನು ಪಾಕಿಸ್ತಾನದಲ್ಲಿ ಅಪರಿಚಿತ ಬಂದೂಕುದಾರಿಗಳು ಗುಂಡಿಕ್ಕಿ ಕೊಂದಿರುವ ಬಗ್ಗೆ ವರದಿಯಾಗಿದೆ.
ಮೃತ ಭಯೋತ್ಪಾದಕ ಅಹ್ಮದ್ ಸಜಾದ್, ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯಲ್ಲಿ ಟಾಪ್ ಕಮಾಂಡರ್ನಾಗಿ ಗುರುತಿಸಿಕೊಂಡಿದ್ದು, ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಹೆಚ್ಚಿಸುವಲ್ಲಿ ಇತನ ಪಾತ್ರ ಅಧಿಕವಿರುತ್ತಿತ್ತು ಎಂದು ತಿಳಿದು ಬಂದಿದೆ.
ಬ್ರೇನ್ವಾಶ್ ಸ್ಪೆಷಲಿಸ್ಟ್!
ಈ ಅಹ್ಮದ್ ಸಜಾದ್ ಮೂಲತಃ ಕಾಶ್ಮೀರ್ ಬಾರಾಮುಲ್ಲಾ ನಿವಾಸಿಯಾಗಿದ್ದು, ಚಿಕ್ಕ ವಯಸ್ಸಿನಲ್ಲಿ ಜಿಹಾದ್ನ ಅಮಲೇರಿ ಬಂದೂಕನ್ನು ಹಿಡಿದು ಭಯೋತ್ಪಾದಕನಾದನು.
ಇವನು ಉತ್ತಮ ಮಾತುಗಾರನಾಗಿದ್ದ ಹಿನ್ನಲೆಯಲ್ಲಿ, ಇವನು ಕಾಶ್ಮೀರಿ ಯುವಕರಲ್ಲಿ ಜಿಹಾದ್ ಎಂಬ ವಿಷದ ಬೀಜವನ್ನು ಭಿತ್ತಿ, ಬ್ರೇನ್ವಾಶ್ ಮಾಡಿ ತನ್ನ ಸಂಘಟನೆಯಾದ ಹಿಜ್ಬುಲ್ ಮುಜಾಹಿದ್ದೀನ್ಗೆ ಭಯೋತ್ಪಾದಕರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ.
ಪಾಕಿಸ್ತಾನಲ್ಲಿ ನಿಲ್ಲದ ಉಗ್ರರ ಭೇಟೆ!
ಪಾಕಿಸ್ತಾನದಲ್ಲಿ ಅವಿತು ಕುಳಿತು ಭಾರತದ ಕೇಡನ್ನು ಬಯಸುತ್ತಿದ್ದ ಭಯೋತ್ಪಾದಕರು ಸದ್ಯ ತಮ್ಮ ಬಿಲದಲ್ಲಿ ಸಹ ಸುರಕ್ಷಿತವಾಗಿಲ್ಲ ಎಂದರೆ ಸುಳ್ಳಲ್ಲ. ನಿನ್ನೆ (ಏ.30) ಜೈಶ್- ಎ- ಮೊಹಮ್ಮದ್ ಕಮಾಂಡರ್ ಸಲ್ಮಾನ್ ಅಜರ್ನನ್ನು ಅಪರಿಚಿತರು ಎಕೆ-47 ನಿಂದ ಕೊಂದರೆ, ಇಂದು (ಮೇ.1) ಹಿಜ್ಬುಲ್ ಕಮಾಂಡರ್ ಅಹ್ಮದ್ ಸಜಾದ್ನನ್ನು ಸದೆ ಬಡಿದಿದ್ದಾರೆ.
ಕಳೆದೊಂದು ವರ್ಷದಲ್ಲಿ ಈ ಕಾರ್ಯಾಚರಣೆ ವೇಗದಿಂದ ಸಾಗುತ್ತಿದ್ದು, 2026 ರಲ್ಲಿ ಸುಮಾರು 30 ಭಯೋತ್ಪಾದಕರು ಸತ್ತಿದ್ದಾರೆ. ಸಾವನ್ನಪ್ಪಿರುವ ಬಹುತೇಕರು ಲಷ್ಕರ್-ಎ-ತೊಯ್ಬಾ, ಜೈಶ್-ಎ-ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದಿನ್ ಸಂಘಟನೆಗೆ ಸೇರಿದವರಾಗಿದ್ದಾರೆ. ಈ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ಅನುಮಾನ ವ್ಯಕ್ತ ಪಡಿಸುತ್ತಿವೆ. ಆದರೆ ಭಾರತ ಈ ಕುರಿತು ಯಾವುದೇ ಅಧಿಕೃತ ಹೇಳಿಕೆಗಳನ್ನು ಇಲ್ಲಿವರೆಗೆ ನೀಡಿಲ್ಲ, (ಏಜನ್ಸೀಸ್).