ShahRukhKhan 
ದೇಶ

ಶಾರುಖ್ ಖಾನ್ ನಾಲಿಗೆ ಕತ್ತರಿಸಿದವರಿಗೆ 1 ಲಕ್ಷ ಬಹುಮಾನ: ಹಿಂದೂ ಮಹಾಸಭಾ ನಾಯಕಿಯ ವಿವಾದಾತ್ಮಕ ಹೇಳಿಕೆ! ShahRukhKhan

ಮುಂಬೈ: ( ShahRukhKhan) ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಮತ್ತು ಬಾಂಗ್ಲಾದೇಶಿ ಕ್ರಿಕೆಟಿಗನಿಗೆ ಸಂಬಂಧಿಸಿದ ವಿವಾದವೊಂದು ಈಗ ವಿಕೋಪಕ್ಕೆ ಹೋಗಿದೆ. ಶಾರುಖ್ ಖಾನ್ ಅವರ ನಾಲಿಗೆ ಕತ್ತರಿಸಿದವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಹಿಂದೂ ಮಹಾಸಭಾದ ನಾಯಕರೊಬ್ಬರು ಘೋಷಿಸುವ ಮೂಲಕ ಹೊಸ ವಿವಾದಕ್ಕೆ ಕಿಡಿ ಹಚ್ಚಿದ್ದಾರೆ.
ಐಪಿಎಲ್ 2026 ರ ಹರಾಜು ಡಿಸೆಂಬರ್ 16, 2025 ರಂದು ನಡೆಯಿತು, ಶಾರುಖ್ ಖಾನ್ ಅವರ ಐಪಿಎಲ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್‌ನಲ್ಲಿ ಮುಸ್ತಾಫಿಜುರ್ ರೆಹಮಾನ್ ಎಂಬ ಬಾಂಗ್ಲಾದೇಶಿ ಆಟಗಾರ ಇದ್ದಾರೆ. 
ಶಾರುಖ್ ಅವರನ್ನು ತಂಡದಿಂದ ಕೈಬಿಡಬೇಕೆಂದು ಎಚ್ಚರಿಕೆ ನೀಡಲಾಗುತ್ತಿದೆ ಮತ್ತು ಬೆದರಿಕೆ ಹಾಕಲಾಗುತ್ತಿದೆ. ಈಗ, ಹಿಂದೂ ಮಹಾಸಭಾ ನಾಯಕಿ ಮೀರಾ ರಾಥೋಡ್, ಅರ್ಗಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ,ನಮ್ಮ ಹಿಂದೂ ಸಹೋದರರನ್ನು ಬಾಂಗ್ಲಾದೇಶದಲ್ಲಿ ಜೀವಂತವಾಗಿ ಸುಡಲಾಗುತ್ತಿದೆ. ಅವರು ಶಾರುಖ್ ಖಾನ್ ಅಲ್ಲಿಂದ ಆಟಗಾರರನ್ನು ಖರೀದಿಸುತ್ತಿದ್ದಾರೆ. ನಾವು ಅದನ್ನು ಸಹಿಸುವುದಿಲ್ಲ.  ಶಾರುಖ್ ಅವರ ನಾಲಿಗೆಯನ್ನು ಕತ್ತರಿಸಿದವರಿಗೆ 1 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಹೇಳಿದ್ದಾರೆ.
"ಯಾರು ಶಾರುಖ್ ಖಾನ್ ಅವರ ನಾಲಿಗೆಯನ್ನು ಕತ್ತರಿಸಿ ತರುತ್ತಾರೋ ಅವರಿಗೆ ನಾನು 1 ಲಕ್ಷ ರೂಪಾಯಿ ಇನಾಮು ನೀಡುತ್ತೇನೆ" ಎಂದು ಘೋಷಿಸಿದ್ದಾರೆ. ದೇಶವಿರೋಧಿ ಧೋರಣೆ ತೋರುವವರಿಗೆ ತಕ್ಕ ಶಾಸ್ತಿ ಆಗಬೇಕು ಎನ್ನುವುದು ಅವರ ವಾದವಾಗಿದೆ. ಈ ಹೇಳಿಕೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ನಟನ ವಿರುದ್ಧ ಇಂತಹ ಹಿಂಸಾತ್ಮಕ ಹೇಳಿಕೆ ನೀಡಿರುವುದು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಒಬ್ಬ ವ್ಯಕ್ತಿಯ ವೈಯಕ್ತಿಕ ನಿರ್ಧಾರಗಳ ಮೇಲೆ ಇಂತಹ ಬೆದರಿಕೆ ಹಾಕುವುದು ಸರಿಯಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಪೊಲೀಸರು ಈ ಬಗ್ಗೆ ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದು ಈಗ ಕುತೂಹಲ ಮೂಡಿಸಿದೆ.