ಮೃತ ಲಿಟನ್ ಚಂದ್ರ ಘೋಷ್ 
ದೇಶ

ಬಾಂಗ್ಲಾದಲ್ಲಿ ಹಿಂದೂ ಉದ್ಯಮಿಯ ಭೀಕರ ಕೊಲೆ; ಸಲಿಕೆಯಿಂದ ಹೊಡೆದು ಹತ್ಯೆಗೈದ ಜಿಹಾದಿಗಳು | Hindu

ಪ್ರಮುಖ ಮುಖ್ಯಾಂಶಗಳು

  • ಬಾಂಗ್ಲಾದಲ್ಲಿ ಹಿಂದೂ ವರ್ತಕನ ಹತ್ಯೆ
  • ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂದೂಗಳ ಮೇಲಿನ ಹಿಂಸಾಚಾರ
  • ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿ ಕಳವಳಕಾರಿ ಎಂದ ಭಾರತ
ಬಾಂಗ್ಲಾದೇಶ: ಶನಿವಾರ (ಜ.17) ಬಾಂಗ್ಲಾದೇಶದ ಗಾಜಿಪುರ ಜಿಲ್ಲೆಯಲ್ಲಿ ಸಿಹಿ ಅಂಗಡಿಯಲ್ಲಿ ಅಪ್ರಾಪ್ತ ವಯಸ್ಕ ಉದ್ಯೋಗಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದ ಹಿಂದೂ (Hindu) ಉದ್ಯಮಿಯೊಬ್ಬರು ಥಳಿಸಿ ಕೊಲ್ಲಲಾಗಿದೆ ಎಂದು ಬಾಂಗ್ಲಾ ಪೊಲೀಸರು ತಿಳಿಸಿದ್ದಾರೆ. ಮೃತ ವ್ಯಕ್ತಿಯನ್ನು ಲಿಟನ್ ಚಂದ್ರ ಘೋಷ್ (55) ಅಲಿಯಾಸ್ ಕಾಳಿ ಎಂದು ಗುರುತಿಸಲಾಗಿದೆ.​ ಘೋಷ್ ಗಾಜಿಪುರ ಪುರಸಭೆ ವ್ಯಾಪ್ತಿಯಲ್ಲಿ ಬೈಸಾಖಿ ಸ್ವೀಟ್‌ಮೀಟ್ ಮತ್ತು ಹೋಟೆಲ್​ನ್ನು ನಡೆಸುತ್ತಿದ್ದರು.

ಕ್ಷುಲಕ ಕಾರಣಕ್ಕೆ ಜಗಳ

ಪೊಲೀಸರ ಪ್ರಕಾರ, ಶನಿವಾರ (ಜ.17) ಬೆಳಿಗ್ಗೆ 11 ಗಂಟೆ ಸುಮಾರಿಗೆ ಮಸೂಮ್ ಮಿಯಾ (28) ಅಂಗಡಿಗೆ ನುಗ್ಗಿ 17 ವರ್ಷದ ಉದ್ಯೋಗಿ ಅನಂತ ದಾಸ್ ಜೊತೆ ಸಣ್ಣ ವಿಷಯಕ್ಕೆ ಜಗಳ ಪ್ರಾರಂಭವಾಗಿ ನಂತರ ಇದು ಹೊಡೆದಾಟಕ್ಕೆ ತರುಗಿದೆ. ಸ್ವಲ್ಪ ಸಮಯದ ನಂತರ, ಮಸೂಮ್ ಮಿಯಾ ಅವರ ಪೋಷಕರಾದ ಮೊಹಮ್ಮದ್ ಸ್ವಪನ್ ಮಿಯಾ (55) ಮತ್ತು ಮಜಿದಾ ಖತುನ್ (45) ಸ್ಥಳಕ್ಕೆ ಬಂದು ದಾಸ್​ನನ್ನು ಹೊಡೆಯಲಾರಂಭಿಸಿದ್ದಾರೆ.
ಇದೇ ವೇಳೆ, ಅಂಗಡಿ ಮಾಲೀಕ ಲಿಟನ್ ಚಂದ್ರ ಘೋಷ್ ತನ್ನ ಉದ್ಯೋಗಿಯನ್ನು ರಕ್ಷಿಸಲು ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ಅವರ ಮೇಲೂ ಹಲ್ಲೆ ನಡೆಸಲಾಯಿತು. ಲಿಟನ್ ತಲೆಗೆ ಸಲಿಕೆಯಿಂದ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಜನರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು

ಈ ಘಟನೆಯು ಸ್ಥಳಿಯ ನಿವಾಸಿಗಳ ಕೋಪಕ್ಕೆ ಕಾರಣವಾಗಿದ್ದು, ಮೂವರು ಆರೋಪಿಗಳಾದ ಸ್ವಪನ್ ಮಿಯಾ, ಮಜಿದಾ ಖಾತುನ್ ಮತ್ತು ಮಸೂಮ್ ಮಿಯಾ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಾಳಿಗಂಜ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಮೊಹಮ್ಮದ್ ಜಾಕಿರ್ ಹುಸೇನ್ ಘಟನೆಯನ್ನು ದೃಢಪಡಿಸಿದರು. ಮೂವರು ಆರೋಪಿಗಳು ಪೊಲೀಸ್ ವಶದಲ್ಲಿದ್ದಾರೆ ಮತ್ತು ಕೊಲೆ ಪ್ರಕರಣದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಬಾಂಗ್ಲಾದೇಶದ ದಂಗೆಯ ನಂತರ ಅಲ್ಪಸಂಖ್ಯಾತರ ಮೇಲೆ ಹೆಚ್ಚಾದ ದಾಳಿ

ಸುಮಾರು 170 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಮುಸ್ಲಿಂ ಬಹುಸಂಖ್ಯಾತ ಬಾಂಗ್ಲಾದೇಶದಲ್ಲಿ 2024 ರ ದಂಗೆಯ ನಂತರ ಪರಿಸ್ಥಿತಿ ಅಸ್ಥಿರವಾಗಿದೆ. ಇಸ್ಲಾಮಿಸ್ಟ್ ಗುಂಪುಗಳ ಹೆಚ್ಚಿದ ಚಟುವಟಿಕೆಯು ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ದಾಳಿಗಳ ಹೆಚ್ಚಳಕ್ಕೆ ಕಾರಣವಾಗಿದೆ.
ಬಾಂಗ್ಲಾದೇಶ ಹಿಂದೂ-ಬೌದ್ಧ-ಕ್ರಿಶ್ಚಿಯನ್ ಏಕತಾ ಮಂಡಳಿಯು ದೇಶಾದ್ಯಂತ ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ದಾಳಿಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ. ಫೆಬ್ರವರಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಚುನಾವಣೆಗೂ ಮುನ್ನ ಕೋಮು ಹಿಂಸಾಚಾರದ ಘಟನೆಗಳು ಹೆಚ್ಚಾಗಿವೆ ಎಂದು ಅದು ಹೇಳಿದೆ.

ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿ ಕಳವಳಕಾರಿ ಎಂದ ಭಾರತ

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರನ್ನು, ವಿಶೇಷವಾಗಿ ಹಿಂದೂಗಳನ್ನು ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ. ಕಳೆದ ವಾರ, ಭಾರತದ ವಿದೇಶಾಂಗ ಸಚಿವಾಲಯವು ನೆರೆಯ ದೇಶದಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದೆ.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು ಮತ್ತು ಅವರ ಆಸ್ತಿಗಳ ಮೇಲೆ ನಿರಂತರ ದಾಳಿ ನಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅಂತಹ ಘಟನೆಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ವಾರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು,(ಏಜನ್ಸೀಸ್​).