ನೌಹೇರಾ ಶೇಖ್ 
ದೇಶ

3.000 ಕೋಟಿ ರೂ. ಹೂಡಿಕೆ ವಂಚನೆ ಪ್ರಕರಣ; ಹೀರಾ ಗ್ರೂಪ್ ಚೇರ್ಮನ್ ನೌಹೇರ್ ಶೇಕ್ ಬಂಧಿಸಿದ ಇಡಿ | Heera Group Chairman

ಹೈದರಾಬಾದ್: 3,000 ಕೋಟಿ ರೂ. ಹೀರಾ ಗೋಲ್ಡ್ ಇನ್ವೆಸ್ಟ್ಮೆಂಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೀರಾ ಗ್ರೂಪ್ ಆಫ್(Heera Group Chairman) ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕಿ ನೌಹೇರಾ ಶೇಖ್ ಅವರನ್ನು ಇಡಿ ಅಧಿಕಾರಿಗಳು ಗುರುವಾರ(ಮೇ 21) ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕೆಲಸ ಸಮಯದಿಂದ ನೌಹೇರ್ ಶೇಖ್ ತಲೆ ಮರೆಸಿಕೊಂಡಿದ್ದರು. ನಕಲಿ ಆಧಾರ್‌ನೊಂದಿಗೆ ಗುರ್ಗಾಂವ್‌ನಲ್ಲಿ ಪತ್ತೆಯಾದ ಬಳಿಕ ಇಡಿ ಅಧಿಕಾರಿಗಳು ಅವರನ್ನು ಬಂಧಿಸಿದ್ದು, ಹೈದರಾಬಾದ್​ಗೆ ಕರೆತಂದಿದ್ದಾರೆ.
ತೆಲಂಗಾಣ ಮತ್ತು ಆಂಧ್ರಪ್ರದೇಶ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗಳ ಆಧಾರದ ಮೇಲೆ ಇಡಿ ತನಿಖೆ ನಡೆಸುತ್ತಿದೆ. ಶೇಕ್ ಮತ್ತು ಅವರ ಸಹಚರರು ಸುಮಾರು ಶೇಕಡಾ 36 ರಷ್ಟು ವಾರ್ಷಿಕ ಆದಾಯದ ಭರವಸೆ ನೀಡುವ ಮೂಲಕ ಹೂಡಿಕೆದಾರರಿಂದ ₹ 3,000 ಕೋಟಿಗೂ ಹೆಚ್ಚು ಸಂಗ್ರಹಿಸಿದ್ದಾರೆ ಎಂದು ಇಡಿ ಆರೋಪಿಸಿದೆ.
ಭರವಸೆ ನೀಡಿದ ಹಣವನ್ನು ಎಂದಿಗೂ ಮರುಪಾವತಿಸಲಾಗಿಲ್ಲ. ಮತ್ತು ಯುಎಇ, ಸೌದಿ ಅರೇಬಿಯಾ ಮತ್ತು ಇತರ ಮಧ್ಯಪ್ರಾಚ್ಯ ದೇಶಗಳಲ್ಲಿ ವಾಸಿಸುವ ಭಾರತೀಯರಿಂದಲೂ ಹಣವನ್ನು ಸಂಗ್ರಹಿಸಲಾಗಿದೆ. ಮತ್ತು ಕಂಪನಿ ಯಾವುದೇ ನಿಜವಾದ ವ್ಯವಹಾರ ಕಾರ್ಯಾಚರಣೆಗಳನ್ನು ಹೊಂದಿಲ್ಲ ಎನ್ನಲಾಗಿದೆ.
ಹೂಡಿಕೆದಾರರ ಹಣವನ್ನು ಚರ ಮತ್ತು ಸ್ಥಿರ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಬಳಸುವ ಮೊದಲು ವೈಯಕ್ತಿಕ ಖಾತೆಗಳಿಗೆ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಮತ್ತು ಶೇಖ್ ಅವರು ಭಾರತದಾದ್ಯಂತ 24 ಕಂಪನಿಗಳನ್ನು ಸ್ಥಾಪಿಸಿ 182 ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿದ್ದರು ಎಂಬುದು ತಿಳಿದು ಬಂದಿದ್ದು, ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸಂಸ್ಥೆ ತಿಳಿಸಿದೆ (ಏಜೆನ್ಸೀಸ್).