ಕಾಂಗ್ರೆಸ್​ ನಾಯಕನ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಎಸ್‌ಪಿ ಸಂಸದ! 
ದೇಶ

ರಾಹುಲ್ ರಾಯ್‌ಬರೇಲಿಯಿಂದ ಸ್ಪರ್ಧಿಸಲು ತುಂಬಾ ಭಯಪಟ್ಟಿದ್ದರು: ಕಾಂಗ್ರೆಸ್​ ನಾಯಕನ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಎಸ್‌ಪಿ ಸಂಸದ! | Shiv Pal Singh Patel

ಲಖನೌ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 2024ರ ಲೋಕಸಭಾ ಚುನಾವಣೆಯಲ್ಲಿ ರಾಯ್‌ಬರೇಲಿಯಿಂದ ಸ್ಪರ್ಧಿಸಲು ಹೆದರಿದ್ದರು, ಒಂದು ವೇಳೆ ಅವರು ಅಲ್ಲಿಂದ ಸ್ಪರ್ಧಿಸದಿದ್ದರೆ ಸಮಾಜವಾದಿ ಪಕ್ಷವು ತನ್ನದೇ ಸ್ವಂತ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಎಚ್ಚರಿಕೆ ನೀಡಿದ ಬಳಿಕವೇ ರಾಹುಲ್​ ಸ್ಪರ್ಧಿಸಿದರು ಎಂದು ಎಸ್‌ಪಿ ಸಂಸದ ಶಿವಪಾಲ್ ಸಿಂಗ್ ಪಟೇಲ್ (Shiv Pal Singh Patel) ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಲಖನೌ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 2024ರ ಲೋಕಸಭಾ ಚುನಾವಣೆಯಲ್ಲಿ ರಾಯ್‌ಬರೇಲಿಯಿಂದ ಸ್ಪರ್ಧಿಸಲು ಹೆದರಿದ್ದರು, ಒಂದು ವೇಳೆ ಅವರು ಅಲ್ಲಿಂದ ಸ್ಪರ್ಧಿಸದಿದ್ದರೆ ಸಮಾಜವಾದಿ ಪಕ್ಷವು ತನ್ನದೇ ಸ್ವಂತ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಎಚ್ಚರಿಕೆ ನೀಡಿದ ಬಳಿಕವೇ ರಾಹುಲ್​ ಸ್ಪರ್ಧಿಸಿದರು ಎಂದು ಎಸ್‌ಪಿ ಸಂಸದ ಶಿವಪಾಲ್ ಸಿಂಗ್ ಪಟೇಲ್ (Shiv Pal Singh Patel) ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಪಿಟಿಐ ಜೊತೆ ಮಾತನಾಡಿರುವ ಪಟೇಲ್​, 2024 ರ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ​ ಮೈತ್ರಿ ಮಾಡಿಕೊಳ್ಳದಿದ್ದರೆ ಕಾಂಗ್ರೆಸ್ ಒಂದೇ ಒಂದು ಸ್ಥಾನವನ್ನೂ ಸಹ ಗೆಲ್ಲುತ್ತಿರಲಿಲ್ಲ, ಆ ಪಕ್ಷದ ದೊಡ್ಡ ನಾಯಕ ರಾಹುಲ್ ಗಾಂಧಿ ಅವರೇ ತಮ್ಮ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧರಾಗುವ ಹಂತಕ್ಕೆ ತಲುಪಿದ್ದರು ಎಂದು ಎಸ್​​ಪಿ ಸಂಸದರು ಹೇಳಿದ್ದಾರೆ.

ನೆಹರು ಕುಟುಂಬಕ್ಕೆ ಸೇರಿದ್ದು ಎನ್ನಲಾದ ಒಂದು ಸಾಂಪ್ರದಾಯಿಕ ಕ್ಷೇತ್ರದಿಂದ ಸ್ಪರ್ಧಿಸಲು ರಾಹುಲ್​ ಗಾಂಧಿಗೆ ತುಂಬಾ ಹಿಂಜರಿಕೆಯಿತ್ತು, ಅಖಿಲೇಶ್​ ಯಾದವ್​ ಮನವೊಲಿಸಿದ್ದರಿಂದಲೇ ಅವರು ಅಲ್ಲಿ ಗೆಲ್ಲಲು ಸಾಧ್ಯವಾಯಿತು ಎಂದು ಪಟೇಲ್​ ಹೇಳಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‌ಗೆ ನಮ್ಮ ಪಕ್ಷ ಸಂಪೂರ್ಣ ಬೆಂಬಲ ನೀಡಿದ್ದು, ಆ ಪಕ್ಷ ಎಲ್ಲೆಲ್ಲಾ ಅಭ್ಯರ್ಥಿಗಳನ್ನು ಹಾಕಿತ್ತೊ, ಅಲ್ಲೆಲ್ಲಾ ಎಸ್​​ಪಿಯ ಪ್ರತಿಯೊಂದು ಮತವು ಕಾಂಗ್ರೆಸ್‌ಗೆ ಬಿತ್ತು. ಆ ಕಾರಣದಿಂದಲೇ ಅವರು ಆ ಆರು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು ಎಂದರು.

ಇದನ್ನೂ ಓದಿ:ನಾನು ರಾಹುಲ್ ಗಾಂಧಿ ಭಂಟ ಹನುಮಂತ, ಅವರು ಹೇಳಿದ್ರೆ ಲಂಕಾ ದಹನ ಮಾಡ್ತೀನಿ!...ಯುಪಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕಳೆದುಕೊಂಡ ಬಳಿಕ ರೈ ಮಾತು! | Ajay Rai

ಲೋಕಸಭಾ ಚುನಾವಣೆಯಲ್ಲಿ ನಾವು 37 ಸ್ಥಾನಗಳನ್ನು ಗೆದ್ದಿದ್ದು, ರಾಜ್ಯದಲ್ಲಿ ಬಲಿಷ್ಠರಾಗಿದ್ದೇವೆ. ಆದ್ದರಿಂದ ಕೈ ನಾಯಕರು 50ಕ್ಕಿಂತ ಹೆಚ್ಚು ಸ್ಥಾನಗಳನ್ನು ಕೇಳಬಾರದು ಮತ್ತು ಕೊಟ್ಟ ಕ್ಷೇತ್ರಗಳ ಬಗ್ಗೆ ಅಸಂಬದ್ಧ ಹೇಳಿಕೆಗಳನ್ನು ನೀಡದೆ ಖುಷಿಯಾಗಿರಬೇಕು ಮತ್ತು ಸಹಕರಿಸಬೇಕು ಎಂದು ಪಟೇಲ್ ಸಲಹೆ ನೀಡಿದ್ದಾರೆ.

ಜಾತಿ ಸೂತ್ರ ಕಾಂಗ್ರೆಸ್‌ ಪರವಾಗಿಲ್ಲ

ಕಾಂಗ್ರೆಸ್ ತನ್ನ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಬ್ರಾಹ್ಮಣರನ್ನು ಮತ್ತು ಕಾರ್ಯಾಧ್ಯಕ್ಷರನ್ನಾಗಿ ಮುಸ್ಲಿಮರನ್ನು ನೇಮಿಸುವ ಜಾತಿ ಆಧಾರಿತ ತಂತ್ರದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಪಟೇಲ್​, ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ದಲಿತರು ಮಾಯಾವತಿ ಜತೆಗಿದ್ದರು, ಆದರೆ ಈಗ ಅವರು ನಮ್ಮ ಕಡೆಗೆ ಬದಲಾಗಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ದಲಿತರ ಉದ್ಧಾರವಾಗಿಲ್ಲ, ಬಿಜೆಪಿಯ ಆಡಳಿತದಲ್ಲೂ ಅದು ಸಾಧ್ಯವಾಗಿಲ್ಲ ಆದ್ದರಿಂದ ಇಂತ ತಂತ್ರಗಳು ಕಾಂಗ್ರೆಸ್​ಗೆ ಲಾಭ ಮಾಡಿಕೊಡುವುದಿಲ್ಲ ಎಂದರು.

ಸಮಾಜವಾದಿ ಪಕ್ಷದ ಆಡಳಿತಾವಧಿಯಲ್ಲಿ ಸಮಾಜದ ಎಲ್ಲ ವರ್ಗದ ಜನರಿಗೆ ಸಮಾನ ಅವಕಾಶಗಳು ಸಿಕ್ಕಿದ್ದವು ಎಂದಿರುವ ಸಂಸದ ಶಿವಪಾಲ್ ಸಿಂಗ್ ಪಟೇಲ್, ಮತ್ತೆ ನಾವು ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರಿಗೂ ಮುಂದೆ ಬರಲು ಸಮಾನ ಅವಕಾಶ ಸಿಗುತ್ತದೆ ಮತ್ತು ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆಯುವ ಅವಕಾಶ ಸಿಗುತ್ತದೆ. ಅದಕ್ಕಾಗಿಯೇ ನಮ್ಮ ಪಕ್ಷಕ್ಕೆ 'ಸಮಾಜವಾದಿ' ಎಂದು ಹೆಸರಿಸಲಾಯಿತು. ನಮ್ಮ ಪಕ್ಷವು ರಾಮ್ ಮನೋಹರ್ ಲೋಹಿಯಾ ಅವರ ಆದರ್ಶಗಳ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ನಮ್ಮ ಪಕ್ಷದ ಮೂಲ ಉದ್ದೇಶವೇ ಸಮಾಜದ ಎಲ್ಲಾ ವರ್ಗಗಳ ಕಲ್ಯಾಣವಾಗಿದೆ ಎಂದು ಅವರು ಹೇಳಿದರು.

ನಾವು ಮುಂದಿನ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಮುಂದುವರಿದರೆ ಖಂಡಿತವಾಗಿಯೂ ನಮಗೆ ಲಾಭವಾಗಲಿದೆ, ಒಂದು ವೇಳೆ ಮೈತ್ರಿ ನಡೆಯದಿದ್ದರೂ ನಮಗೆ ಯಾವುದೇ ದೊಡ್ಡ ನಷ್ಟವಿಲ್ಲ. ಆದರೆ ಅವರಿಗೆ ಮತಗಳಿಕೆ ಸಂಪೂರ್ಣವಾಗಿ ಕುಸಿಯುತ್ತದೆ. ನಾನು ಇದನ್ನು ಆತ್ಮವಿಶ್ವಾಸದಿಂದ ಹೇಳಬಲ್ಲೆ. ಅವರು ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸದಿದ್ದರೆ, ಸೊನ್ನೆ ಸುತ್ತುತ್ತರೆ. ತಾವು ಕೇವಲ ಮತಗಳನ್ನು ವಿಭಜಿಸಲು ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದೇವೆ ಎಂಬುದನ್ನು ಸಾರ್ವಜನಿಕರು ಅರಿಯುತ್ತಾರೆ. ಅವರು ಮತಗಳನ್ನು ಒಡೆಯಲು ನಿರ್ಧರಿಸಿದರೆ ವರ್ತಿಸಿದರೆ ಆ ಪಕ್ಷದ ರಾಜಕೀಯ ಅಸ್ತಿತ್ವವೇ ಇಲ್ಲದಂತಾಗುತ್ತದೆ ಎಂದು ಪಟೇಲ್ ಎಚ್ಚರಿಕೆ ನೀಡಿದ್ದಾರೆ.

ಕೈ ನಾಯಕರ ತಿರುಗೇಟು!...

ಸಂಸದ ಪಟೇಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ ಕಾಂಗ್ರೆಸ್ ವಕ್ತಾರ ಅಂಶು ಅವಸ್ಥಿ, ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವ ನಾಯಕರಿಗೆ ಸಮಾಜವಾದಿ ಪಕ್ಷವು ಕಡಿವಾಣ ಹಾಕಬೇಕು ಎಂದು ತಿಳಿಸಿದರು. ಇಂಡಿಯಾ ಮೈತ್ರಿಕೂಟದ ಬೆಂಬಲದಿಂದಲೇ ಅವರು ಸಂಸದರಾಗಿದ್ದಾರೆ. ಅವರು ತಮ್ಮ ಮಿತಿಗಳನ್ನು ಮೀರಿ ಮಾತನಾಡಬಾರದು ಮತ್ತು ಇಂತಹ ಹೇಳಿಕೆಗಳನ್ನು ನೀಡುವುದನ್ನು ಕೂಡಲೇ ತಪ್ಪಿಸಬೇಕು ಎಂದು ಅವಸ್ಥಿ ತಿರುಗೇಟು ನೀಡಿದರು.

2024ರ ಲೋಕಸಭಾ ಚುನಾವಣೆಯಲ್ಲಿ, ಅಯೋಧ್ಯೆ ದೇಗುಲ ಪಟ್ಟಣವನ್ನು ಒಳಗೊಂಡಿರುವ ಪ್ರತಿಷ್ಠಿತ ಫೈಜಾಬಾದ್ ಸಂಸತ್ ಕ್ಷೇತ್ರ ಸೇರಿದಂತೆ ಸಮಾಜವಾದಿ ಪಕ್ಷವು ಉತ್ತರ ಪ್ರದೇಶದಲ್ಲಿ ಒಟ್ಟು 37 ಸ್ಥಾನಗಳನ್ನು ಗೆದ್ದುಕೊಂಡಿದೆ. ಅದರ ಮಿತ್ರಪಕ್ಷವಾದ ಕಾಂಗ್ರೆಸ್ ಆರು ಸ್ಥಾನಗಳನ್ನು ಗೆದ್ದರೆ, ಬಿಜೆಪಿ 33 ಸ್ಥಾನಗಳನ್ನು ಪಡೆದುಕೊಂಡಿದೆ. ಆ ಮೂಲಕ ರಾಜ್ಯದಲ್ಲಿ ಎನ್‌ಡಿಎ ಒಟ್ಟು 36 ಸ್ಥಾನಗಳನ್ನು ಗಳಿಸಿದೆ. ಪ್ರಸ್ತುತ, 403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್ ಕೇವಲ ಇಬ್ಬರು ಶಾಸಕರನ್ನು ಹೊಂದಿದ್ದರೆ, ಸಮಾಜವಾದಿ ಪಕ್ಷವು 101 ಶಾಸಕರ ಬಲವನ್ನು ಹೊಂದಿದೆ(ಏಜೆನ್ಸೀಸ್​).