ಅಭಿಷೇಕ್ ಬ್ಯಾನರ್ಜಿ 8ನೇ ತರಗತಿ ಫೇಲ್ ಎಂದ ಡಾ. ಬೈದ್ಯನಾಥ್ ಘೋಷ್​ 
ದೇಶ

ಅವನೊಬ್ಬ 8th ಫೇಲ್... ಅಸ್ತಿತ್ವದಲ್ಲೇ ಇಲ್ಲದ ಕಾಲೇಜಿನಿಂದ ಪದವಿ ಪಡೆದಿದ್ದಾನೆ; ಅಭಿಷೇಕ್​ ಬ್ಯಾನರ್ಜಿ ವಿರುದ್ಧ ಹರಿಹಾಯ್ದ ಕಾಕೋಲಿ ಪುತ್ರ! Baidyanath Ghosh on Abhishek Banerjee

ಪ್ರಮುಖ ಮುಖ್ಯಾಂಶಗಳು

  • 22 ಟಿಎಂಸಿ ಸಂಸದರು ಬಿಜೆಪಿಯತ್ತ?
  • ಅಭಿಷೇಕ್ ಬ್ಯಾನರ್ಜಿ 8ನೇ ತರಗತಿ ಫೇಲ್ ಎಂದ ಡಾ. ಬೈದ್ಯನಾಥ್ ಘೋಷ್​
  • ನನ್ನಮ್ಮ ನಿಮ್ಮ ಯಾವುದೇ ಹಗರಣದಲ್ಲಿ ಭಾಗಿಯಾಗಿಲ್ಲ
ಕಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಭಾರಿ ರಾಜಕೀಯ ಸಂಚಲನ ಉಂಟಾಗಿದ್ದು, ತ್ರಣಮೂಲ ಕಾಂಗ್ರೆಸ್​ನ ಸುಮಾರು 22 ಜನ ಸಂಸದರು ಬಿಜೆಪಿಯತ್ತ ಒಲವು ತೋರಿಸುತ್ತಿದ್ದಾರೆ ಎಂಬ ವದಂತಿ ಹರಡುತ್ತಿದೆ.
ಈ ಬೆನ್ನಲ್ಲೆ ರೆಬಲ್​ ಸಂಸದರ ಮೇಲೆ ಕಟ್ಟಾ ತ್ರಣಮೂಲ ಸಂಸದರು ಆಕ್ರೋಶ ಹೊರಹಾಕುತ್ತಿದ್ದು, ಈ ರೆಬಲ್​ ಗುಂಪಿನವರ​ ಮೇಲೆ ತ್ರಣಮೂಲ ಕಾಂಗ್ರೆಸ್​ನ ರಾಷ್ಟ್ರೀಯ ಕಾರ್ಯದರ್ಶಿ ಅಭಿಷೇಕ್​ ಬ್ಯಾನರ್ಜಿ ಹರಿಹಾಯ್ದಿದ್ದರು.
ಈಗ ಇದಕ್ಕೆ ಕೌಂಟರ್​ ಕೊಟ್ಟಿರುವ ಟಿಎಂಸಿ ರೆಬಲ್​ ನಾಯಕಿ ಕಾಕೋಲಿ ಘೋಷ್​ ಪುತ್ರ, ಡಾ. ಬೈದ್ಯನಾಥ್ ಘೋಷ್(Baidyanath Ghosh on Abhishek Banerjee), ಅಭಿಷೇಕ್​ ಬ್ಯಾನರ್ಜಿ ಒಬ್ಬ ಎಂಟನೇ ತರಗತಿ ಫೇಲ್​ ಎಂದು ಹೇಳಿದ್ದಾರೆ.

ಅವನು ಎಂಟನೇ ತರಗತಿ ಪಾಸಾಗಿಲ್ಲ​!

ತನ್ನ ತಾಯಿ ಬಗ್ಗೆ ಟಿಎಂಸಿ ಐಟಿ ಸೆಲ್​ ಮಾಡಿರುವ ಟ್ವಿಟ್​ಗಳಿಗೆ ತಿರುಗೇಟನ್ನು ನೀಡಿರುವ ಡಾ. ಬೈದ್ಯನಾಥ್ ಘೋಷ್, ಅಭಿಷೇಕ್​ ಬ್ಯಾನರ್ಜಿ ಎಂಟನೇ ತರಗತಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಫೇಲಾಗಿದ್ದ, ನಂತರ ಅಸ್ತಿತ್ವದಲ್ಲೇ ಇರದ ಕಾಲೇಜಿನಿಂದ ಪದವಿ ಪಡೆದಿದ್ದಾನೆ. ಇಂತಹ ಜನರಿಂದ ನಾಗರಿಕತೆ ಮತ್ತು ನಾಗರಿಕ ಪ್ರಜ್ಞೆಯನ್ನು ಅಪೇಕ್ಷಿಸಲು ಸಾಧ್ಯವೇ ಎಂದು ಜರಿದಿದ್ದಾರೆ.
ನಿಮ್ಮ ಪಕ್ಷದ ವಿರುದ್ಧ ಯಾರು ತಿರುಗಿ ಬಿದ್ದಿದ್ದಾರೋ ಅವರ್ಯಾರು ಮಮತಾ ಬ್ಯಾನರ್ಜಿ ಕೃಪಾಕಟಾಕ್ಷದಿಂದ ಗೆದ್ದು ಬಂದಿಲ್ಲ. ತಮ್ಮ ಸ್ವಂತ ಬಲದಿಂದ ಗೆದ್ದು ಬಂದಿದ್ದಾರೆ. ಅವರು ಇಷ್ಟು ವರ್ಷಗಳ ಕಾಲ ನಿಮ್ಮ ಜೊತೆಗೆ ಇದ್ದರು, ನೀವು ಅವರಿಗೆ ಯಾವ ಸ್ಥಾನ ನೀಡಿದ್ದಿರಿ? ಎಂದು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.

ನನ್ನ ತಾಯಿ ಬಗ್ಗೆ ಸುಳ್ಳು ಹೇಳಬೇಡಿ!

ನನ್ನ ತಾಯಿ ಕಾಕೋಲಿ ಘೋಷ್​ ಆ ಕಾಲದಲ್ಲಿಯೇ ಜೆಇಇ ಪರೀಕ್ಷೆ ಪಾಸ್​ ಮಾಡಿದ್ದರು. ಆರ್​.ಜಿ.ಕರ್​ ಕಾಲೇಜಿನಿಂದ ವೈಧ್ಯಕೀಯ ಪದವಿ ಪಡೆದು ಲಂಡನ್​ನಿನ ಕಿಂಗ್ಸ್​ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದಾರೆ.
ನಿಮ್ಮ ಚಿಕ್ಕಮ್ಮನ ಹಾಗೇ ನನ್ನ ತಾಯಿ ಜಾರ್ಜಿಯಾ ವಿವಿ ಇಂದ ಪಿಹೆಚ್​ಡಿ ಪಡೆದಿಲ್ಲ. ಕತೆ-ಕಾದಂಬರಿ ಬರೆಯಲಿಲ್ಲ, ನಿಮ್ಮ ಚಿಕ್ಕಮ್ಮನಂತೆ ಹೊಸಲು ಇಂಗ್ಲಿಂಷ್​ ಮಾತನಾಡಲ್ಲ. ಯಾರು ನನ್ನಮ್ಮ ಬಿಡಿಸಿದ ಪೇಟಿಂಗ್​ನ್ನು 1 ಕೋಟಿಗೆ ಖರೀದಿಸಿಲ್ಲ.
ನನ್ನ ತಾಯಿ ಆರ್‌ಜಿಕೆ, ಪಡಿತರ ಹಗರಣ, ಶಿಕ್ಷಕ ನೇಮಕಾತಿ ಹಗರಣ, ಕಲ್ಲಿದ್ದಲು ಅಥವಾ ಜಾನುವಾರು ಹಗರಣಗಳ ಜೊತೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಹೇಳಿದ್ದಾರೆ. ಹಾಗೆಯೇ ನನ್ನಮ್ಮ ದಿನಾಲೂ ಮದ್ಯ ಸೇವಿಸುತ್ತಾರೆಂದು ಸುಳ್ಳು ಹರಡುವುದನ್ನು ಮೊದಲು ನಿಲ್ಲಿಸಿ, ಇಲ್ಲದಿದ್ದರೆ ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಹೂಡಲಾಗುವದೆಂದು ಹೇಳಿದ್ದಾರೆ, (ಏಜನ್ಸೀಸ್​).