ಬಿಜೆಪಿ ಸರ್ಕಾರ ರಚಿಸಿದರೆ ಅಕ್ರಮ ವಲಸಿಗರು ಬಾಂಗ್ಲಾಗೆ ವಾಪಸ್
- ಎಕ್ಸಿಟ್ ಫೂಲ್ನಲ್ಲಿ ಬಿಜೆಪಿಗೆ ಬಹುಪರಾಕ್
- ಬಿಜೆಪಿ ಸರ್ಕಾರ ರಚಿಸಿದರೆ ಅಕ್ರಮ ವಲಸಿಗರು ಬಾಂಗ್ಲಾಗೆ ವಾಪಸ್
- ಆತಂಕ ವ್ಯಕ್ತ ಪಡಿಸಿದ ಬಾಂಗ್ಲಾ ಸಂಸದ ಅಖ್ತರ್ ಹುಸೇನ್
- ಮಮತಾ ಹೇಗೆ ಇಷ್ಟು ವರ್ಷ ಆಡಳಿತ ನಡೆಸಿದ್ದು ನೋಡಿ ಎಂದ ನಿಶಿಕಾಂತ್ ದುಬೆ
ಢಾಕಾ: ಏಪ್ರಿಲ್ 29 ರಂದು ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಮುಗಿದ್ದಿದ್ದು, ಎಕ್ಸಿಟ್ ಫೂಲ್ನಲ್ಲಿ ಭಾರತೀಯ ಜನತಾ ಪಕ್ಷ (BJP) ಗೆ ಬಹುಮತ ದೊರೆಯಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಅಕ್ರಮ ವಲಸಿಗರ (Illegal Immigrants) ಸಮುದ್ರವೇ ಢಾಕಾವನ್ನು ಪ್ರವೇಶಿಸಲಿದೆ ಎಂದು ಬಾಂಗ್ಲಾ ಸಂಸದ ಅಖ್ತರ್ ಹುಸೇನ್ ಸಂಸತ್ತಿನಲ್ಲಿ ತಿಳಿಸಿದ್ದಾರೆ.
ಬಿಜೆಪಿ ಗೆದ್ದರೆ ವಲಸಿಗರು ವಾಪಸ್!
ಸಂಸತ್ತಿನಲ್ಲಿ ಮಾತನಾಡಿದ ಅಖ್ತರ್ ಹುಸೇನ್, ಬಾಂಗ್ಲಾದೇಶದ ಬಹುತೇಕ ವಲಸಿಗರು ಬಂಗಾಳದಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ ಬಂಗಾಳದಲ್ಲಿ ಚುನಾವಣೆ ನಡೆದಿದ್ದು, ಮೇ. 4 ಕ್ಕೆ ಫಲಿತಾಂಶ ಹೊರಬೀಳಲಿದೆ.
ಎಕ್ಸಿಟ್ ಫೂಲ್ ಪ್ರಕಾರ, ಭಾರತೀಯ ಜನತಾ ಪಕ್ಷ ಬಹುಮತ ಗಳಿಸುತ್ತದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಬಿಜೆಪಿ ಸರ್ಕಾರ ರಚನೆಯಾದರೆ, ಬಂಗಾಳದಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರು, ಇಲ್ಲಿಗೆ ಮರಳುತ್ತಾರೆ. ಬಾಂಗ್ಲಾದೇಶದಲ್ಲಿ ರೆಫ್ಯೂಜಿ ಕ್ಯಾಂಪ್ಗಳನ್ನು ನಿರ್ಮಿಸುವಂತಾಗುತ್ತದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಸಂಸದನ ಕೌಂಟರ್!
ಬಾಂಗ್ಲಾ ಸಂಸದ ಮಾತಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ನಿಶಿಕಾಂತ್ ಧುಬೆ, ನೋಡಿ, ಬಾಂಗ್ಲಾದೇಶದ ಸಂಸದರೇ ಹೇಳುತ್ತಿದ್ದಾನೆ, ಬಿಜೆಪಿ ಗೆದ್ದರೆ ಅಕ್ರಮ ವಲಸಿಗರನ್ನು ಒದ್ದು ಓಡಿಸುತ್ತಾರೆಂದು. ಇಷ್ಟು ವರ್ಷ ಮಮತಾ ಬ್ಯಾನರ್ಜಿ ಹೇಗೆ ಗೆಲ್ಲುತ್ತಿದ್ದಳು ಎಂದು ಎಲ್ಲರಿಗೂ ಗೊತ್ತಗಿದೆ. ನಾವು ಎಸ್ಐಆರ್ ಜಾರಿ ಮಾಡಿದಾಗ ಏಕೆ ವಿರೋಧ ವ್ಯಕ್ತ ಪಡಿಸಿದರು ಎಂದು ಈಗ ಗೊತ್ತಾಗುತ್ತಿದೆ ಎಂದು ಅವರು ಕಿಡಿ ಕಾರಿದ್ದಾರೆ.
ಸಮೀಕ್ಷೆಗಳ ಲೆಕ್ಕಾಚಾರ: ಯಾರಿಗೆ ಎಷ್ಟು ಸ್ಥಾನ..?
ಬಂಗಾಳದ 294 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 148 ಸ್ಥಾನಗಳ ಅಗತ್ಯವಿದೆ. ಪ್ರಮುಖ ನಾಲ್ಕು ಸಮೀಕ್ಷೆಗಳಲ್ಲಿ ಮೂರು ಸಂಸ್ಥೆಗಳು ಬಿಜೆಪಿಯೇ ಅಧಿಕಾರ ಹಿಡಿಯಲಿದೆ ಎಂದು ಹೇಳಿವೆ.
ಸಮೀಕ್ಷಾ ಸಂಸ್ಥೆ ಬಿಜೆಪಿ (BJP+) ತೃಣಮೂಲ ಕಾಂಗ್ರೆಸ್ (TMC) ಇತರರು
P-Marq 150 - 175 118 - 138 00 - 05
ಮತ್ತೆರಡು ಸಮೀಕ್ಷೆಗಳು 146 - 165 120 - 135 02 - 06
People's Pulse 100 - 115 177 - 187 01 - 04
ನಮ್ಮದೇ ಬಹುಮತ ಖಚಿತ: ಮಮತಾ
ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿರುವ ಮಮತಾ ಬ್ಯಾನರ್ಜಿ, ಈ ಭಾರಿ ಚುನಾವಣೆಯಲ್ಲಿ ನಮಗೆ ಕೇಂದ್ರ ಸರ್ಕಾರ ಎಷ್ಟೇ ತೊಂದರೆ ಕೊಟ್ಟರೂ ಬಂಗಾಲಿಗಳು ನಮ್ಮ ಕೈ ಹಿಡಿದೇ ಹಿಡಿಯುತ್ತಾರೆ. ಈ ಸಲ ನಾವು ಸುಮಾರು 226 ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸುವ ಮೂಲಕ ಮತ್ತೆ ಸರ್ಕಾರವನ್ನು ರಚಿಸಲಿದ್ದೆವೆ ಎಂದು ಹೇಳಿದ್ದಾರೆ.
ಆದರೆ ಈ ಭಾರಿ ಬಿಜೆಪಿ ಬಂಗಾಳವನ್ನು ಗೆಲ್ಲಲ್ಲು ಏನು ಮಾಡಲು ಸಿದ್ದವಿದೆ, ಆದ್ದರಿಂದ ಮತ ಏಣಿಕೆ ದಿನ ನಾನು ಖುದ್ದಾಗಿ ಪ್ರತಿ ಕ್ಷೇತ್ರಗಳಿಗೆ ತೆರಳುವ ಯೋಜನೆ ಹೊಂದಿದ್ದೆನೆ. ನನಗೆ ನನ್ನ ಮತದಾರರ ಮೇಲೆ ನಂಬಿಕೆಯಿದೆ. ಮೇ.4 ರಂದು ಟಿಎಮ್ಸಿ ಈ ನೆಲದ ಸರ್ಕಾರವನ್ನು ರಚಿಸುವುದು ನಿಶ್ಚಿತ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ, (ಏಜನ್ಸೀಸ್).