Winter 
ದೇಶ

ಕಾಶ್ಮಿರದಲ್ಲಿ ಕಠಿಣ ಚಳಿಗಾಲ ಆರಂಭ: ಭಾರೀ ಹಿಮಪಾತ, ಮಳೆಯಾಗುವ ಸಾಧ್ಯತೆ! | Winter

ಜಮ್ಮು-ಕಾಶ್ಮಿರ: 40 ದಿನಗಳ ಕಠಿಣ ಚಳಿಗಾಲ(Winter) (ಚಿಲ್ಲೈ-ಕಲಾನ್) ಆರಂಭವಾಗಿದ್ದು, ಇದೀಗ ಕಾಶ್ಮೀರದಲ್ಲಿ ಋತುವಿನ ಮೊದಲ ಹಿಮಪಾತ ಉಂಟಾಗಿದೆ. ಇನ್ನು ಬಯಲು ಪ್ರದೇಶಗಳಲ್ಲಿ ಮಳೆ ಸುರಿದಿದೆ. ಅಲ್ಲದೆ, ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆ ಮತ್ತು ಹಿಮಪಾತ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಕೇಂದ್ರದ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಈ ಋತುವಿನ ಮೊದಲ ಪ್ರಮುಖ ಹಿಮಪಾತದಲ್ಲಿ ಇದು ಒಂದಾಗಿದ್ದು, ಶ್ರೀನಗರ-ಲೇಹ್ (ಎಸ್‌ಎಸ್‌ಜಿ) ಹೆದ್ದಾರಿ ಮತ್ತು ಮೊಘಲ್ ರಸ್ತೆ ಸೇರಿದಂತೆ ಹಲವಾರು ಪ್ರಮುಖ ರಸ್ತೆಗಳು ಮುಚ್ಚಲ್ಪಟ್ಟಿವೆ. ಆದರೆ, ಶ್ರೀನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಪ್ರವಾಸೋದ್ಯಮಕ್ಕೆ ಬೂಸ್ಟ್ ಸಿಗುವ ನಿರೀಕ್ಷೆ

ಕಾಶ್ಮೀರ ಕಣಿವೆಯಲ್ಲಿ ಸುಮಾರು ಎರಡು ತಿಂಗಳುಗಳಿಂದ ಮಳೆ-ಹಿಮಪಾತವಿಲ್ಲದೆ ಒಣಗಿದ್ದ ವಾತಾವರಣಕ್ಕೆ ಇದು ದೊಡ್ಡ ರಿಲೀಫ್ ತಂದಿದೆ. ಗುಲ್ಮಾರ್ಗ್, ಸೋನಮಾರ್ಗ್, ಗುರೇಜ್, ದ್ರಾಸ್ ಮುಂತಾದ ಎತ್ತರದ ಪ್ರದೇಶಗಳಲ್ಲಿ 2-6 ಇಂಚುಗಳಷ್ಟು ಹಿಮಪಾತವಾಗಿದ್ದು, ಕಣಿವೆಯ ಸಮತಟ್ಟುಗಳಲ್ಲಿ ಮಳೆ ಬಿದ್ದಿದೆ.ಈ ಹಿಮಪಾತದಿಂದ ಪ್ರವಾಸೋದ್ಯಮಕ್ಕೆ ಬೂಸ್ಟ್ ಸಿಗುವ ನಿರೀಕ್ಷೆಯಿದೆ.
ಗುಲ್ಮಾರ್ಗ್ ಮತ್ತು ಸೋನಮಾರ್ಗ್‌ಗಳು ಬಿಳಿ ಹಾಸಿಗೆಯಂತೆ ಕಂಗೊಳಿಸುತ್ತಿವೆ.ಗುಲ್ಮಾರ್ಗ್‌ನಲ್ಲಿ ತಾಜಾ ಹಿಮಪಾತದ ಸೌಂದರ್ಯ,ಗುಲ್ಮಾರ್ಗ್ ಮತ್ತು ಸೋನಮಾರ್ಗ್‌ನಲ್ಲಿ ಹಿಮದ ದೃಶ್ಯ, ಹಿಮಪಾತದಿಂದ ಬಿಳಿಯಾಗಿರುವ ಕಾಶ್ಮೀರ ಕಣಿವೆ, ಸೋನಮಾರ್ಗ್‌ನಲ್ಲಿ ತಾಜಾ ಹಿಮಪಾತ ಪ್ರದೇಶಗಳು ಸುಂದರವಾಗಿ ಕಾಣಿಸುತ್ತಿದೆ.
ಇನ್ನುಹಿಮಪಾತದಿಂದ ಆವೃತವಾದ ಎತ್ತರದ ಪ್ರದೇಶಗಳು ಮುಂದಿನ 48 ಗಂಟೆಗಳಲ್ಲಿ ಇನ್ನಷ್ಟು ಹಿಮಪಾತ ಮತ್ತು ಮಳೆಯಾಗುವ ಮುನ್ಸೂಚನೆಯಿದೆ. ಕಾಶ್ಮೀರದ ಚಳಿಗಾಲ ಈಗ ಸಂಪೂರ್ಣವಾಗಿ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್​).