Benne Dosa (ಚಿತ್ರ X) 
ದೇಶ

ಕೇವಲ ದೋಸೆಯಿಂದ 350 ಕೋಟಿ ಸಾಮ್ರಾಜ್ಯ! ಬೆಣ್ಣೆ ದೋಸೆ ಸಕ್ಸಸ್ ಸೀಕ್ರೆಟ್ ಬಿಚ್ಚಿಟ್ಟ ಹರ್ಷ್ ಗೋಯೆಂಕಾ Benne Dosa

ಮುಂಬೈ: 

ಸಾಮಾನ್ಯವಾಗಿ ದೋಸೆ ಎಂದರೆ ತಕ್ಷಣ ನೆನಪಿಗೆ ಬರುವುದೇ ಗರಿಗರಿಯಾದ ಮಸಾಲ ದೋಸೆ.  ಆದರೆ, ನಮ್ಮ ಕರ್ನಾಟಕದ ಹೆಮ್ಮೆಯ ದಾವಣಗೆರೆ ಬೆಣ್ಣೆ ದೋಸೆಯನ್ನು (

Benne Dosa) 

ಬಳಸಿಕೊಂಡು ಕೇವಲ 2 ವರ್ಷಗಳಲ್ಲಿ ಬರೋಬ್ಬರಿ 350 ಕೋಟಿ ಮೌಲ್ಯದ ಬೃಹತ್ ಉದ್ಯಮವನ್ನು ಕಟ್ಟುವುದು ಸಾಧ್ಯವೇ?

ಸಾಧ್ಯವಿದೆ ಎಂಬುದನ್ನು ಮುಂಬೈ ಮತ್ತು ದೆಹಲಿಯಲ್ಲಿ ಧೂಳೆಬ್ಬಿಸುತ್ತಿರುವ 'ಬೆಣ್ಣೆ' (Benne) ಎಂಬ ದೋಸೆ ಕೆಫೆ ಬ್ರಾಂಡ್ ಸಾಬೀತುಪಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಉದ್ಯಮಿ ಹರ್ಷ್ ಗೋಯೆಂಕಾ, ಈ ಕೆಫೆಯ ಭರ್ಜರಿ ಯಶಸ್ಸಿನ ಗುಟ್ಟನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸಣ್ಣ ಜಾಗದಿಂದ ಶುರುವಾದ ದೊಡ್ಡ ಪಯಣ

2024ರಲ್ಲಿ ಮುಂಬೈನ ಬಾಂದ್ರಾ ಭಾಗದ ಸಣ್ಣ ಗಲ್ಲಿಯೊಂದರಲ್ಲಿ ಕೇವಲ 12 ಆಸನಗಳೊಂದಿಗೆ ಆರಂಭವಾದ ಈ ಬೆಣ್ಣೆ ಕೆಫೆ ಇಂದು ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಆದಾಗ್ಯೂ, ಈ ಬೆಣ್ಣೆ ಕೆಫೆಯ ಸಕ್ಸಸ್​ ಬಗ್ಗೆ ಹರ್ಷ ಗೋಯೆಂಕಾ ಅವರು ಮಾಹಿತಿ ಹಂಚಿಕೊಂಡಿದ್ದಾರೆ. 

ಒಂದೇ 'ಹೀರೋ ಪ್ರೊಡಕ್ಟ್' 

ನೂರಾರು ವಿವಿಧ ರೀತಿಯ ದೋಸೆಯನ್ನು ಮಾರುವ ಬದಲಿಗೆ ಅವರು ಕೇವಲ ದಾವಣಗೆರೆ ಬೆಣ್ಣೆ ದೋಸೆಯನ್ನೇ ಪ್ರಮುಖವಾಗಿ ಆಯ್ಕೆ ಮಾಡಿಕೊಂಡಿರುವುದಾಗಿ ಹೇಳಿದರು. ಆದಾಗ್ಯೂ, ಇದು ಚಿಕ್ಕದಾದ ಒಳಗಡೆ ಮೃದುವಾದ ಬೆಣ್ಣೆಯಿಂದ ತುಂಬಿರುವ ಈ ದೋಸೆ ಮುಂಬೈ ಜನರಿಗೆ ಹೊಸ ರುಚಿಯನ್ನು ನೀಡಿತು.

ಸರಳ ಮೆನು ಮತ್ತು ಒಂದೇ ರೀತಿಯ ರುಚಿ

ಮೆನುವಿನಲ್ಲಿ ಕಡಿಮೆ ಆಹಾರಗಳಿದ್ದಾಗ ಪ್ರತಿಯೊಂದು ದೋಸೆಯಲ್ಲೂ ಒಂದೇ ರೀತಿಯ ಉನ್ನತ ರುಚಿ ಹಾಗೂ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಸುಲಭ. 
ಸ್ವಯಂ ಸೇವೆ ಮತ್ತು ತಂತ್ರಜ್ಞಾನ: ಆರ್ಡರ್ ಮಾಡಲು ಎಲೆಕ್ಟ್ರಾನಿಕ್ ಸೆಲ್ಫ್-ಆರ್ಡರಿಂಗ್ ಸೌಲಭ್ಯವಿದ್ದು, ಗ್ರಾಹಕರಿಗೆ ಅತ್ಯಂತ ವೇಗವಾಗಿ ಕನಿಷ್ಠ ಸಮಯದಲ್ಲಿ ಬಿಸಿಬಿಸಿ ದೋಸೆ ತಲುಪಿಸಲು ಸಾಧ್ಯವಾಯಿತು.

ಸೋಷಿಯಲ್ ಮೀಡಿಯಾ ಕ್ಯೂ & ಬಜ್

ಹೋಟೆಲ್ ಹೊರಗೆ ಸಾಲಾಗಿ ನಿಲ್ಲುತ್ತಿದ್ದ ಜನರನ್ನು ನೋಡಿ ಬಾಲಿವುಡ್ ತಾರೆಯರು ಹಾಗೂ ಇನ್‌ಫ್ಲುಯೆನ್ಸರ್‌ಗಳು ಭೇಟಿ ನೀಡಲು ಆರಂಭಿಸಿದರು. ಇದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಅಪಾರ ಪ್ರಚಾರ ತಂದುಕೊಟ್ಟಿತು ಎಂದಿದ್ದಾರೆ. 

ಕೈಗೆಟುಕುವ ದರ 

ಯಾವುದೇ ತಿನಿಸು ಜನರ ದೈನಂದಿನ ಅಭ್ಯಾಸವಾಗಬೇಕಾದರೆ ಬೆಲೆ ಸರಿ ಇರಬೇಕು. 'ಬೆಣ್ಣೆ' ಕೆಫೆ ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮ ಸೇವೆಯನ್ನು ನೀಡಿತು.

350 ಕೋಟಿಗೆ ಜಿಗಿದ ಬ್ರಾಂಡ್ ಮೌಲ್ಯ!

ಸರಿಯಾದ ಯೋಜನೆ, ಅತ್ಯುತ್ತಮ ನಿರ್ವಹಣೆ ಮತ್ತು ವಿಶಿಷ್ಟ ಶೈಲಿಯಿದ್ದರೆ ಸರಳವಾದ ತಿಂಡಿಯೂ ಕೋಟಿ ಕೋಟಿ ಮೌಲ್ಯದ ಉದ್ಯಮವಾಗಬಲ್ಲದು ಎಂಬುದಕ್ಕೆ 'ಬೆಣ್ಣೆ' ಕೆಫೆ ಜೀವಂತ ನಿದರ್ಶನವಾಗಿದೆ. ಆರಂಭವಾದ ಕೇವಲ ಎರಡೇ ವರ್ಷಗಳಲ್ಲಿ ಈ ಬ್ರಾಂಡ್‌ನ ಮೌಲ್ಯ ಸುಮಾರು 350 ಕೋಟಿಗೆ ತಲುಪಿದ್ದು, ಇತ್ತೀಚೆಗೆ ದೆಹಲಿಗೂ ತನ್ನ ಶಾಖೆಯನ್ನು ವಿಸ್ತರಿಸಿ ಭಾರತೀಯ ಆಹಾರ ಉದ್ಯಮದಲ್ಲಿ ಹೊಸ ಇತಿಹಾಸ ಬರೆದಿದೆ (ಏಜೆನ್ಸೀಸ್).