- ಫಿಟ್ನೆಸ್ ಕೇಂದ್ರಗಳ ಸೋಗಿನಲ್ಲಿ ಅಕ್ರಮ ಮತಾಂತರ ನಡೆಸುತ್ತಿದ್ದವರ ಬಂಧನ
- ಐವರು ಆತರೊಪಿಗಳನ್ನು ಬಂಧಿಸಿದ ಯು.ಪಿ. ಪೊಲೀಸರು
- ಮೊಹಮ್ಮದ್ ಶೇಖ್ ಅಲಿ ಆಲಂ, ಫೈಜಲ್ ಖಾನ್, ಜಹೀರ್ ಮತ್ತು ಸಾದಬ್ ಬಂಧಿತ ಆರೋಪಿಗಳು
ಮಿರ್ಜಾಪುರ: ಫಿಟ್ನೆಸ್ ಕೇಂದ್ರಗಳ ಸೋಗಿನಲ್ಲಿ ಅಕ್ರಮ ಧಾರ್ಮಿಕ ಮತಾಂತರ ಜಾಲ ನಡೆಸುತ್ತಿದ್ದಾರೆ ಎಂಬ ಆರೋಪದ ಹಿನ್ನಲೆ ಉತ್ತರ ಪ್ರದೇಶ ಪೊಲೀಸರು ಮಿರ್ಜಾಪುರದಲ್ಲಿ ಜಿಮ್ (Gym) ಮಾಲೀಕರು ಸೇರಿದಂತೆ ಐದು ಜನರನ್ನು ಬಂಧಿಸಿದ್ದಾರೆ.
ಸ್ಥಳೀಯ ಜಿಮ್‌ಗಳೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳಿಂದ ಆಮಿಷ, ಲೈಂಗಿಕ ಶೋಷಣೆ ಮತ್ತು ಬ್ಲ್ಯಾಕ್‌ಮೇಲ್ ಮಾಡಲಾಗಿದೆ. ನಂತರ ಧರ್ಮವನ್ನು ಬದಲಾಯಿಸಲು ಒತ್ತಡ ಹೇರಲಾಗಿದೆ ಎಂದು ಆರೋಪಿಸಿ ಇಬ್ಬರು ಮಹಿಳೆಯರು ದೂರು ನೀಡಿದ ನಂತರ ನಾಲ್ವರು ಪುರುಷರನ್ನು ಬಂಧಿಸಲಾಯಿತು.
ಆರೋಪಿಗಳನ್ನು ಮೊಹಮ್ಮದ್ ಶೇಖ್ ಅಲಿ ಆಲಂ, ಫೈಜಲ್ ಖಾನ್, ಜಹೀರ್ ಮತ್ತು ಸಾದಬ್ ಎಂದು ಗುರುತಿಸಲಾಗಿದೆ. ನಾಲ್ವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಆಪಾದಿತ ಜಾಲಕ್ಕೆ ಸಂಬಂಧಿಸಿದ ಇತರ ಶಂಕಿತರನ್ನು ಗುರುತಿಸಲು ಮತ್ತು ಬಂಧಿಸಲು ತಿನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಫ್‌ಐಆರ್ ಪ್ರಕಾರ, ಜಿಮ್ ತರಬೇತುದಾರ ಶೇಖ್ ಅಲಿ ವ್ಯಾಯಾಮದ ಸಮಯದಲ್ಲಿ ತನ್ನೊಂದಿಗೆ ಸ್ನೇಹ ಬೆಳೆಸಿದ ನಂತರ ಲೈಂಗಿಕ ಸಂಬಂಧಕ್ಕೆ ಒತ್ತಾಯಿಸಿದ್ದಾನೆ ಎಂದು ದೂರುದಾರರಲ್ಲಿ ಒಬ್ಬರು ಆರೋಪಿಸಿದ್ದಾರೆ. ಅವನು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ, ಆಕ್ಷೇಪಾರ್ಹ ಚಿತ್ರಗಳು ಮತ್ತು ವೀಡಿಯೊಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿದ್ದಾನೆ ಮತ್ತು ನಂತರ ಅವುಗಳನ್ನು ಹಣ ಸುಲಿಗೆ ಮಾಡಲು ಬಳಸಿಕೊಂಡಿದ್ದಾನೆ ಎಂದು ಅವಳು ಹೇಳಿಕೊಂಡಿದ್ದಾಳೆ.
ಆರೋಪಿಗಳು ಹಣಕ್ಕಾಗಿ ಬೇಡಿಕೆ ಇಡುವುದನ್ನು ಮುಂದುವರೆಸಿದರು ಮತ್ತು ಬೆದರಿಕೆ, ಬ್ಲ್ಯಾಕ್‌ಮೇಲ್ ಮಾಡಿ ತಮ್ಮ ಹೆಸರಿನಲ್ಲಿ ಸಾಲವನ್ನೂ ಪಡೆದ್ದಿದ್ದಾರೆ ಎಂದು ಆರೋಪಿಸಲಾಗಿದೆ. ಮಹಿಳೆ ತನ್ನನ್ನು ಪದೇ ಪದೇ ಧರ್ಮ ಮತಾಂತರಿಸಲು ಒತ್ತಡ ಹೇರುತ್ತಿದ್ದರು, ಬುರ್ಖಾ ಧರಿಸುವಂತೆ ಒತ್ತಾಯಿಸುತ್ತಿದ್ದರು, ನಿಯಮಿತವಾಗಿ ನಮಾಜ್ ಮಾಡುವಂತೆ ಒತ್ತಾಯಿಸುತ್ತಿದ್ದರು. ದರ್ಗಾಕ್ಕೆ ಕರೆದೊಯ್ಯುತ್ತಿದ್ದರು ಮತ್ತು ಧಾರ್ಮಿಕ ಶ್ಲೋಕಗಳನ್ನು ಪಠಿಸುವಂತೆ ಒತ್ತಾಯಿಸುತ್ತಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಅವಳು ವಿರೋಧಿಸಿದಾಗ, ಆರೋಪಿಗಳು ಅವಳನ್ನು ನಿಂದಿಸುತ್ತಿದ್ದರು ಮತ್ತು ಕೊಲ್ಲುವುದಾಗಿ ಅಥವಾ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇತರ ಮಹಿಳೆಯರನ್ನೂ ಇದೇ ರೀತಿ ಗುರಿಯಾಗಿಸಿಕೊಂಡಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.
ದೂರುಗಳ ನಂತರ, ಮಿರ್ಜಾಪುರ ಪೊಲೀಸರು ಪ್ರಕರಣಗಳನ್ನು ದಾಖಲಿಸಿ ಕೆಜಿಎನ್ ಜಿಮ್ ಮತ್ತು ಬಿ-ಫಿಟ್ ಜಿಮ್ ಸೇರಿದಂತೆ ಐದು ಜಿಮ್‌ಗಳನ್ನು ಸೀಲ್ ಮಾಡಿ, ಕಾನೂನುಬಾಹಿರ ಚಟುವಟಿಕೆಗಳಿಗೆ ವೇದಿಕೆಯಾಗಿ ಬಳಸಲಾಗುತ್ತಿದೆ ಎಂದು ಆರೋಪಿಸಿದರು.
ಬಂಧನಗಳ ಕುರಿತು ಪ್ರತಿಕ್ರಿಯಿಸಿದ ಮಿರ್ಜಾಪುರ ಬಿಜೆಪಿ ಶಾಸಕ ರತ್ನಾಕರ್ ಮಿಶ್ರಾ, ಬಲವಂತದ ಮತಾಂತರಕ್ಕಾಗಿ ಜಿಮ್‌ಗಳ ದುರುಪಯೋಗದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ರಾಜ್ಯ ಸರ್ಕಾರ ಅಕ್ರಮ ಧಾರ್ಮಿಕ ಮತಾಂತರವನ್ನು ಸಹಿಸುವುದಿಲ್ಲ ಮತ್ತು ಪೊಲೀಸ್ ಕ್ರಮವನ್ನು ಬೆಂಬಲಿಸಿದೆ ಎಂದು ಅವರು ಹೇಳಿದ್ದಾರೆ,(ಏಜನ್ಸೀಸ್).