Surendranagar Murder Case 
ದೇಶ

ಪಕ್ಕದ ಮನೆಯವನ ಪ್ರೀತಿಗಾಗಿ 2ನೇ ಪತಿಯನ್ನೇ ಕೊಂದ ಪತ್ನಿ; ಕಿಲಾಡಿ ಲೇಡಿಯ ಕೃತ್ಯ ಬಯಲಾಗಿದ್ದು ಹೀಗೆ..Surendranagar

Gujarat: ಸುರೇಂದ್ರನಗರ ಜಿಲ್ಲೆಯ ಧ್ರಂಗಾಧ್ರ ತಾಲೂಕಿನ(Surendranagar Murder Case) ಸೋಲ್ಡಿ ಗ್ರಾಮದ ನಿವಾಸಿ ಶಾಂತಿಗಿರಿ ವಿಷ್ಣುಗಿರಿ ಗೋಸ್ವಾಮಿ ಎಂಬುವವರು ತಿಂಗಳುಗಳ ಕಾಲ ಕಾಣೆಯಾಗಿದ್ದರು. ಸುದೀರ್ಘ ತನಿಖೆಯ ನಂತರ ಅವರ ಸಾವಿಗೆ ಕಾರಣ ಏನು ಎಂಬುದನ್ನು ಕ್ರೈಂ ಬ್ರಾಂಚ್​ ಪತ್ತೆ ಹಚ್ಚಿದೆ. ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದಂತ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.  

ಪತಿಯ ಅಣ್ಣನನ್ನೇ ಪ್ರೀತಿಸಿದ್ದ ಕಿಲಾಡಿ

ಬಂಧಿತ ಆರೋಪಿ ಜಾಗೃತಿ ಗೋಸ್ವಾಮಿ ಸುಖದೇವಗಿರಿ, ಮೊದಲು ಸುಖದೇವಗಿರಿ ಗೋಸ್ವಾಮಿ ಎಂಬುವವರನ್ನು ಮದುವೆ ಮಾಡಿಕೊಂಡಿದ್ದರು. ಎರಡು ಮಕ್ಕಳಿದ್ದವು.  ಈ ಮಧ್ಯೆ ಆಕೆಗೆ ತನ್ನ ಪತಿಯ ಅಣ್ಣ ಶಾಂತಗಿರಿ ವಿಷ್ಣುಗಿರಿ ಗೋಸ್ವಾಮಿ ಮೇಲೆ ಪ್ರೀತಿಯಾಯಿತು. ಆಗ ಆಕೆ ತನ್ನ ಗಂಡ ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತಗೆ ಪರಾರಿಯಾಗಿದ್ದಳು. ಇಬ್ಬರು ಒಟ್ಟಾಗಿ ಬೇರೆ ಗ್ರಾಮದಲ್ಲಿ ಜೀವನ ಆರಂಭಿಸಿದರು. 

ಪಕ್ಕದ್ಮನೆಯವನ ಜೊತೆ ಪ್ರೀತಿ

ಶಾಂತಗಿರಿ ವಿಷ್ಣುಗಿರಿ ಗೋಸ್ವಾಮಿ  ಟ್ರಕ್​ ಡ್ರೈವರ್​ ಆಗಿ ಕೆಲಸ ಮಾಡುತ್ತಿದ್ದರು. ಕೆಲವೊಮ್ಮೆ ಕೆಲಸದ ನಿಮಿತ್ತ ದೂರದ ಊರಿಗೆ ತೆರಳುತ್ತಿದ್ದ ಅವರು  ಮನೆಗೆ ಬರುವುದು ಒಂದೆರೆಡು ವಾರಗಳಾಗುತ್ತಿತ್ತು. ಆತ ಮನೆಯಲ್ಲಿಲ್ಲದ ದಿನಗಳಲ್ಲಿ ದಂಪತಿ ಮನೆ ಪಕ್ಕದಲ್ಲಿದ್ದ ಕಾಂತಿಲಾಲ್ ಅಲಿಯಾಸ್ ಭರತ್‌ಭಾಯ್ ಲಾಲ್‌ಜಿಭಾಯ್ ಸಬರಿಯಾ ಎಂಬಾತನ ಜೊತೆಗೆ ಆಕೆ ಮಾತನಾಡುತ್ತಿದ್ದಳು. ಇದು  ಪ್ರೀತಿಗೆ ತಿರುಗಿತು.  ಇದನ್ನು ತಿಳಿದುಕೊಂಡ ಶಾಂತಗಿರಿ ಆಕೆ ವಿರುದ್ಧ ಕಿಡಿಕಾರಿ, ಜಗಳ ಮಾಡುತ್ತಿದ್ದ.  ನಿತ್ಯ ನಡೆಯುತ್ತಿದ್ದ ಗೋಳಾಟದಿಂದ ಬೇಸತ್ತ ಆಕೆ 25,000 ಕೊಟ್ಟು ಸುಪಾರಿ ಕಿಲ್ಲರ್ಸ್​​ ನೇಮಿಸಿಕೊಂಡಳು. 
ಒಂದು ರಾತ್ರಿ ಸುಪಾರಿ ಕಿಲ್ಲರ್ ಯೂನಿಸ್​​ ಕೊಲ್ಲಲು ಮನೆಗೆ ಬಂದಾಗ ಶಾಂತಗಿರಿ ನಿದ್ರೆ ಮಾಡುತ್ತಿರುವುದನ್ನು ಕಂಡು ಕೊಲೆ ಮಾಡಲು ಹಿಂದೇಟು ಹಾಕಿದ್ದ. ಸದ್ದಿಲ್ಲದೆ ಫೋಟೋ ತೆಗೆದು ಆತ ಸತ್ತಿದ್ದಾನೆ ಎಂದು ಜಾಗೃತಿಗೆ ಫೋಟೋ ಕಳುಹಿಸಿ ಸುಳ್ಳು ಹೇಳಿದ್ದ. ಪತಿ ಸತ್ತಿದ್ದಾನೆ ಎಂದು ತಿಳಿದು ಆಕೆ ಹಣ ಹಾಕಿದ್ದಳು. ಆದರೆ, ಶಾಂತಗಿರಿ ಜೀವಂತವಾಗಿಯೇ ಇದ್ದ. ಆಗಲೇ ತಿಳಿದಿದ್ದು ಆತ ಮೋಸ ಮಾಡಿದ್ದಾನೆಂದು.

ಉಸಿರುಗಟ್ಟಿಸಿ ಕೊಲೆ

ಮುಂದೆ ಯಾರನ್ನು ನಂಬಲು ಬಯಸದ ಆಕೆ ತಾನೇ ಕೊಲೆ ಮಾಡಲು ಮುಂದಾದಳು ಇದಕ್ಕೆ ಸಾಥ್ ಕೊಟ್ಟಿದ್ದು ಆಕೆಯ ಪ್ರಿಯಕರ. ಶಾಂತಗಿರಿ ಮಲಗಿದ್ದಾಗ ಮುಖದ ಮೇಲೆ ದಿಂಬನ್ನು ಹೊತ್ತಿ ಹಿಡಿದು, ಉಸಿರುಗಟ್ಟಿಸಿ ಕೊಂದರು. ಕೋಣೆಯೊಳಗಿದ್ದ ಹಾಸಿಗೆ ಕೆಳಗೆ ಶವವಿಟ್ಟರು.  ರಾತ್ರೋ ರಾತ್ರಿ ಶವ ಸಾಗಿಸಲು ಮೂರನೇಯದಾಗಿ ಪ್ರೀತಿಯಲ್ಲಿ ಬೀಳಿಸಿಕೊಂಡವನ ಸಹಾಯವನ್ನು ಪಡೆದುಕೊಂಡಳು. ಇದು ಆಕಸ್ಮಿಕ ಸಾವು ಎಂದು ಬಿಂಬಿಸುವ ಸಲುವಾಗಿ ಕಾರಿನಲ್ಲಿ ಸಾಗಿಸಿ, ಸುರೇಂದ್ರನಗರದ ಕಾಲುವೆಯೊಂದಕ್ಕೆ ಎಸೆದರು. ಶಾಂತಗಿರಿ ಕೆಲಸದ ನಿಮ್ಮಿತ್ತ ಊರು ಬಿಟ್ಟಿದ್ದಾನೆ ಎಂದು ಎಲ್ಲರನ್ನು ನಂಬಿಸಿದರು. ನಾಪತ್ತೆ ದೂರನ್ನು ದಾಖಲಿಸಲಿಲ್ಲ. 

ಕೊಲೆ ಕೇಸ್ ಬೇಧಿಸಿದ್ದು ಹೀಗೆ..

ಕೆಲವು ದಿನಗಳ ನಂತರ ಕಾಲುವೆಯಲ್ಲಿ ಶವವೊಂದು ಪತ್ತೆಯಾಗಿತ್ತು,.  ಇದನ್ನು ಆಕಸ್ಮಿಕ ಸಾವು ಎಂದು ಪರಿಗಣಿಸಿದ ಕಾರಣ ಒಂದು ತಿಂಗಳು ಈ ಬಗ್ಗೆ ಯಾರು ಪುಕಾರು ತೆಗೆದಿಲ್ಲ ಆದರೆ, Human Intelligence Inputs ಸೇರಿದಂತೆ ನಾನಾ ತಂತ್ರಗಳನ್ನು ಬಳಸಿಕೊಂಡ ಕ್ರೈಂ ಬ್ರಾಂಚ್​ ಕೊನೆಗೆ ಈ ಶವ ಯಾರದ್ದು ಎಂದು ಪತ್ತೆ ಹಚ್ಚಿ ಕೊಲೆಯನ್ನು ಮಾಡಿದ್ಯಾರು ಎಂದು ತಿಳಿದುಕೊಂಡರು
ಮೇ 18ರಂದು, ಅಹಮದಾಬಾದ್ ಕ್ರೈಮ್ ಬ್ರಾಂಚ್ ಪೊಲೀಸರು ಕೊಲೆ, ಪಿತೂರಿ ಮತ್ತು ಸಾಕ್ಷ್ಯ ನಾಶಪಡಿಸಿದ ಪ್ರಮುಖ ಆರೋಪದ ಮೇಲೆ ಕಾಂತಿಲಾಲ್ ಸಬಾರಿಯಾ ಮತ್ತು ಜಾಗೃತಿ ಗೋಸ್ವಾಮಿ ಅವರನ್ನು ಅಧಿಕೃತವಾಗಿ ಬಂಧಿಸಿದರು, (ಏಜೆನ್ಸೀಸ್).