Ukabhai Bhatti Mango Grafting 
ದೇಶ

ಒಂದೇ ಮರದಲ್ಲಿ 14 ಬಗೆಯ ಮಾವು ಬೆಳೆದ ಗುಜರಾತ್​ನ ರೈತ; ತರಹೇವಾರಿ ಪ್ರಬೇಧದ ಹಣ್ಣನ್ನು ಒಟ್ಟಾಗಿ ಬೆಳೆಸಿದ್ದು ಹೇಗೆ?.. Mango

ಪ್ರಮುಖ ಮುಖ್ಯಾಂಶಗಳು

  • ಒಂದೇ ಮರದಲ್ಲಿ 14 ರೀತಿಯ ಮಾವಿನ ಹಣ್ಣುಗಳನ್ನು ಬೆಳೆದ ಗುಜರಾತ್​ನ ರೈತ
  • ಆಧುನಿಕ ಕಸಿ, ವೈಜ್ಞಾನಿಕ ತಂತ್ರ ಬಳಕೆ ಮಾಡಿಕೊಂಡು ವಿನೂತನ ಕಾರ್ಯ
  • ಒಂದೇ ಮರದಲ್ಲಿ ಕೇಸರ್​, ತೋತಾಪುರಿ ಸೇರಿದಂತೆ ನಾನಾ ವಿಧದ ಮಾವು ಬೆಳೆ ಬೆಳೆದ ರೈತ
Ukabhai Bhatti Mango Grafting: ತೋತಾಪುರಿ, ಬಾದಾಮಿ, ರಸಪುರಿ,  ಮಲ್ಗೋವಾ, ಮತ್ತು ಆಂಧ್ರದ ಬಂಗನಪಳ್ಳಿ ಸೇರಿದಂತೆ ತರಹೇವಾರಿ ತಳಿಯ ಮಾವು ಹೆಸರು ಕೇಳುತ್ತಲೇ.. ಬಾಯಲ್ಲಿ ನೀರೂರುವುದು ಮಾಮೂಲು. ಇನ್ನು ಕೃಷಿಕರಿಗಂತು ಬೇಸಿಗೆ ಮಾವಿನ  ಹಬ್ಬದೂಟ. ಮೆಟ್ರೋ ನಗರಿಯಲ್ಲಿ ಯೋಜಿಸುವ ಮಾವು ಮೇಳಗಳಿಂದ ಕೃಷಿಕರಿಂದ ಗ್ರಾಹಕರು ನೇರವಾಗಿ ಖರೀದಿ ಮಾಡಿ ಸಂಪನ್ನರಾಗುತ್ತಾರೆ. 
ಮಾವಿನ ಖಾರ, ಮಾವಿನ ಚಿತ್ರನ್ನ, ಗೊಜ್ಜು, ತಂಬುಳ್ಳಿ, ಮಾವಿನ ಉಪ್ಪಿನಕಾಯಿ, ಸೀಕರಣೆ ಸೇರಿದಂತೆ ನಾನಾ ವಿಧದಲ್ಲಿ ಅಡುಗೆ ಉಪಯೋಗಿಸಕೊಳ್ಳಲಾಗುತ್ತದೆ. ಲಸ್ಸಿ, ಮಾವಿನ ಜ್ಯೂಸ್, ಮಾವಿನ ಐಸ್​​ಕ್ರೀಂಗಳು ಮಕ್ಕಳಿಗೆ ಹಿರಿಯರಿಗೆ ನೆಚ್ಚಿನವು. ಮಾವನ್ನು ಬೇಡ ಅನ್ನುವರು ಯಾರು ಇಲ್ಲವೇ ಇಲ್ಲ. ಈ ಹೊತ್ತಲ್ಲಿ ಅಚ್ಚರಿ ಪಡಬೇಕಾದ ವಿಚಾರ ಎಂದರೆ, ಕಳೆದ 25 ವರ್ಷಗಳಿಂದ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಗುಜರಾತ್​ನ ವ್ಯಕ್ತಿಯೊಬ್ಬ ಒಂದೇ ಮರದಲ್ಲಿ ಹತ್ತಕ್ಕೂ ಹೆಚ್ಚು ತಳಿಯ ಮಾವು ಬೆಳೆದಿದ್ದಾರೆ. 

ಯಾರು ಈ  ಉಕಾಭಾಯಿ ಬಟ್ಟಿ? 

ಗುಜರಾತ್​ ಅವರು ಅಮ್ರೇಲಿ ಜಿಲ್ಲೆಯು ಕೇಸರ್​ ಮಾವಿನ ಹಣ್ಣಿಗೆ ಹೆಸರುವಾಸಿ. ಆದರೆ,  ಇಲ್ಲಿರುವ ನಿವಾಸಿ ಉಕಾಭಾಯಿ ಬಟ್ಟಿ  ಒಂದೇ ಮರದಲ್ಲಿ 14 ವಿವಿಧ ಬಗೆಯ ಮಾವಿನ ಹಣ್ಣುಗಳನ್ನು ಬೆಳೆದು ಯಶಸ್ವಿಯಾಗಿ ಬೆಳೆದು ಎಲ್ಲರ ಗಮನ ತಮ್ಮತ್ತ ಸೆಳೆಯುವಂತೆ ಮಾಡಿಕೊಂಡಿದ್ದಾರೆ. ಇವ್ರಿಗೆ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಪ್ರೋತ್ಸಾಹವನ್ನು ಸಹ ಪಡೆದುಕೊಂಡಿದ್ದಾರೆ. ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಇದರದ್ದೇ ಸದ್ದು. 

14 ತಳಿಯ ಮಾವು ಒಂದೇ ಮರದಲ್ಲಿ ಹೇಗೆ?

ಸಾಮಾನ್ಯವಾಗಿ ಒಂದು ಮರದಲ್ಲಿ ಒಂದೇ ತಳಿಯ ಹಣ್ಣು ಬೆಳೆಯುತ್ತಾರೆ. ಆದರೆ, ಈ ಪ್ರಗತಿ ಪರ ರೈತ  14 ತರದ ಹಣ್ಣುಗಳನ್ನು ಬೆಳೆದು ಸಾಧಿಸಿದ್ದಾರೆ. ಇದಕ್ಕೆ ಅವರು, ವೈಜ್ಞಾನಿಕ ಮತ್ತು ಆಧುನಿಕ ಕಸಿ ಬಳಕೆ ಮಾಡಿಕೊಂಡಿದ್ದಾರೆ. ಮರವು ವಿವಿಧ ಬಣ್ಣಗಳು, ಆಕಾರಗಳು ಮತ್ತು ರುಚಿಗಳ ಮಾವಿನ ಹಣ್ಣುಗಳಿಂದ ತುಂಬಿರುತ್ತದೆ., ಕೇಸರ್, ಅಮ್ರಪಲ್ಲಿ, ಲ್ಯಾಂಗ್ರಾ, ಬಾದಾಮಿ, ಗುಲಾಬಿ, ರಸ್ಬರಿ, ಜಮದಾರ್, ಕಲಾ ಜಮದಾರ್, ಹಾಪೂಸ್ ಮತ್ತು ತೋತಾಪುರಿ ಬೆಳೆಯಲಾಗಿದೆ.
ಇವರು ತಮ್ಮ ವರ್ಷಗಳ ಸಂಶೋಧನೆ ಮತ್ತು ಕಠಿಣ ಶ್ರಮದ ಮೂಲಕ ಒಂದೇ ಮರದ ವಿವಿಧ ಕೊಂಬೆಗಳಿಗೆ ಬೇರೆ ಬೇರೆ ತಳಿಗಳನ್ನು ಕಸಿ ಮಾಡಿದ್ದಾರೆ. ಸದ್ಯ ಮಾವಿನ ಸೀಸನ್ ಆರಂಭವಾಗಿದ್ದು,  ಒಂದೇ ಮರದಲ್ಲಿ ವಿಭಿನ್ನ ಬಣ್ಣ, ಗಾತ್ರ ಹಾಗೂ ವಿಭಿನ್ನ ರುಚಿಯ ಮಾವಿನ ಹಣ್ಣುಗಳು ರಾರಾಜಿಸುತ್ತಿವೆ.

ಉಕಾಭಾಯಿ ಏನಂದ್ರು?

'ನಾನು ಒಂದೇ ಮಾವಿನ ಮರದಲ್ಲಿ ಹಲವು ಪ್ರಬೇಧದ ಮಾವು ಬೆಳೆಯುವ ಪ್ರಯೋಗವನ್ನು ಪ್ರಾಯೋಗಿಕವಾಗಿ ಆರಂಭಿಸಿದೆ, ಆದರೆ, ನಾನು ಪಟ್ಟ ಶ್ರಮಕ್ಕೆ ಇಂದು ಫಲಿತಾಂಶ ನಿಮ್ಮ ಕಣ್ಮುಂದೆ ಇದೆ ನೋಡಿ.  ಪ್ರತಿ ತಳಿಯ ಹಣ್ಣು ಕೂಡ ತನ್ನದೇ ಆದ ವೈಶಿಷ್ಟ್ಯವನ್ನು, ಸುವಾಸನೆಯನ್ನು ಹೊಂದಿದೆ' ಎಂದು ಉಕಭಾಯಿ ಬಟ್ಟಿ ಹೇಳಿದರು.
ಉಕಾಭಾಯಿಯವರ ಈ ವಿನೂತನ ಪ್ರಯತ್ನವು ಸದ್ಯ ಕೃಷಿ ಕ್ಷೇತ್ರದಲ್ಲಿ ಅವರಿಗಿರುವ ಉತ್ಸಾಹ ಎಷ್ಟಿದೆ ಎನ್ನುವುದನ್ನು ತೋರ್ಪಡಿಸುತ್ತದೆ.  ಇದರಿಂದ ಇತರ ರೈತರು ಸಹ ಈ ಪ್ರಯೋಗವನ್ನು  ಬಳಕೆ ಮಾಡಿಕೊಳ್ಳಲು ಆಶಿಸಬಹುದು. ಜೊತೆಗೆ ಇತ್ತೀಚೆಗೆ ಕೆಲವು ಪ್ರಬೇಧಗಳು ವಿನಾಶದ ಅಂಚಿಗೆ ಸಾಗುತ್ತಿವೆ ಅವುಗಳನ್ನು ಈ ಮೂಲಕ ತಪ್ಪಿಸಬಹುದಾಗಿದೆ, (ಏಜೆನ್ಸೀಸ್).