ಮಮತಾ ಬ್ಯಾನರ್ಜಿ 
ದೇಶ

ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲು ನಕಾರ! ಮಮತಾ ಬ್ಯಾನರ್ಜಿಗೆ ರಾಜ್ಯಪಾಲರಿಂದ ಬಿಗ್ ಶಾಕ್​

ಪ್ರಮುಖ ಮುಖ್ಯಾಂಶಗಳು

  • ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲು ಮಮತಾ ಬ್ಯಾನರ್ಜಿ ನಕಾರ
  • ಟಿಎಂಸಿ ಸರ್ಕಾರವನ್ನು ಕಿತ್ತೊಗೆಯುವುದೇ ತಾರ್ಕಿಕ ಅಂತ್ಯ
  • ಸಿಎಂ ರಾಜೀನಾಮೆ ನೀಡದ ಬೆನ್ನಲ್ಲೇ ರಾಜ್ಯಪಾಲರು ತೆಗೆದುಕೊಂಡ ಕಟು ನಿರ್ಧಾರ
ಕೋಲ್ಕತ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ 15 ವರ್ಷಗಳ ಮಮತಾ ಬ್ಯಾನರ್ಜಿ ಆಳ್ವಿಕೆ ಕಡೆಗೂ ಮುರಿದುಬಿದ್ದಿತು. ಇದಾದ ಬೆನ್ನಲ್ಲೇ ಬಂಗಾಳ ರಾಜಕೀಯದಲ್ಲಿ ಅತಿದೊಡ್ಡ ಬೆಳವಣಿಗೆಯೊಂದು ನಡೆದಿದೆ.
ಸಿಎಂ ಹುದ್ದೆಗೆ ರಾಜೀನಾಮೆ ನೀಡುವ ಅಂಚಿನಲ್ಲಿ ಕುಳಿತಿದ್ದ ಮಮತಾ ಬ್ಯಾನರ್ಜಿಗೆ ರಾಜ್ಯಪಾಲ ಆರ್.ಎನ್.ರವಿ ಬಿಗ್​ ಶಾಕ್ ನೀಡಿದ್ದಾರೆ. ಚುನಾವಣೆಯಲ್ಲಿ ಭಾರೀ ಮತಗಳ ಅಂತರದಿಂದ ಸೋತ ಮಮತಾ, ತಮ್ಮ ಪಕ್ಷವು ಸೋತ ಹಿನ್ನೆಲೆ ಮುಖ್ಯಮಂತ್ರಿ ಸ್ಥಾನಕ್ಕೆ ಗುಡ್​ಬೈ ಹೇಳಬೇಕಿತ್ತು. ಆದರೆ, ಬಿಜೆಪಿಯಿಂದ ನಮಗೆ ಮೋಸವಾಗಿದೆ. ಇಲ್ಲಿ ದೊಡ್ಡ ಗೋಲ್​ಮಾಲ್​ ನಡೆದಿದೆ ಎಂದು ರಾಜೀನಾಮೆ ಕೊಡಲು ನಕಾರ ಮಾಡಿದ ದೀದಿ ನಡೆಗೆ ಸ್ವತಃ ಗವರ್ನರ್​ ಕೆಂಡಾಮಂಡಲಗೊಂಡಿದ್ದಾರೆ.

ಮಮತಾ ಸರ್ಕಾರ ವಜಾ

ಯಾವುದೇ ಬದಲಾವಣೆಗಳನ್ನು ಮಾಡದ ಹಿನ್ನೆಲೆಯಲ್ಲಿ ಬಂಗಾಳ ಟಿಎಂಸಿ ಸರ್ಕಾರವನ್ನು ರಾಜ್ಯಪಾಲರು ವಜಾಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಬಂಗಾಳ ವಿಧಾನಸಭೆಯನ್ನು ವಿಸರ್ಜಿಸಲಾಯಿತು. ಇದರೊಂದಿಗೆ, ಕಡೆಗೂ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದಾರೆ. ಸಂವಿಧಾನದ ಪ್ರಕಾರ, ರಾಜ್ಯಪಾಲರು ತಮ್ಮ ವಿವೇಚನಾ ಅಧಿಕಾರವನ್ನು ಬಳಸಿರುವುದು ಇಲ್ಲಿ ಸ್ಪಷ್ಟ.
ಬಂಗಾಳ ವಿಧಾನಸಭೆಯ 5 ವರ್ಷಗಳ ಅವಧಿ ಇಂದು (ಮೇ 7) ಮಧ್ಯರಾತ್ರಿಗೆ ಮುಕ್ತಾಯಗೊಳ್ಳುತ್ತದೆ. ಮತ್ತೊಂದೆಡೆ, ಮಮತಾ ಬ್ಯಾನರ್ಜಿ ಸೋತಿದ್ದರೂ ಸಿಎಂ ಹುದ್ದೆಗೆ ರಾಜೀನಾಮೆ ನೀಡಲಿಲ್ಲ. ಈ ಕಾರಣ, ಸ್ವತಃ ರಾಜ್ಯಪಾಲರೇ ಇಂತಹ ಕಟು ನಿರ್ಧಾರ ಕೈಗೊಳ್ಳುವಂತ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಅಚ್ಚರಿ. ಗವರ್ನರ್​ ಅವರ ಈ ನಡೆಯಿಂದ ಮಮತಾ ಅವರ 15 ವರ್ಷಗಳ ಆಡಳಿತಕ್ಕೆ ಕಡೆಗೂ ಬ್ರೇಕ್​ ಬಿದ್ದಿದೆ.
ಮೇ.08ರಂದು ಬಿಜೆಪಿ ತನ್ನ ಸಂಸದೀಯ ಪಕ್ಷದ ನಾಯಕನನ್ನು ಆಯ್ಕೆ ಮಾಡಲಿದೆ. ಮೇ.09ರಂದು ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚನೆಯಾಗಲಿದೆ. 294 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆದ್ದು ಬೀಗಿತು. ಟಿಎಂಸಿ ಕೇವಲ 80 ಸ್ಥಾನಗಳನ್ನು ಗೆದ್ದು ಹೀನಾಯ ಸೋಲುಂಡಿತು. ಸಿಎಂ ಮಮತಾ ತಮ್ಮ ಭವಾನಿಪುರ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ವಿರುದ್ಧ 15 ಸಾವಿರ ಮತಗಳ ಭಾರೀ ಅಂತರದಲ್ಲಿ ಸೋಲುಂಡಿದ್ದು ಅವರಿಗೆ ಮತ್ತು ಅವರ ಪಕ್ಷಕ್ಕೆ ದೊಡ್ಡ ಶಾಕ್​ ನೀಡಿದೆ ಎಂಬುದರಲ್ಲಿ ಅನುಮಾನವೇ ಇಲ್ಲ.

ಮಮತಾ ಆರೋಪ

ಈ ಸೋಲಿನ ಬಳಿಕ, ಬಿಜೆಪಿ ತಮ್ಮಿಂದ ಗೆಲುವನ್ನು ಕದ್ದಿದೆ. ಕೇಂದ್ರ ಪಡೆಗಳು ಮತ್ತು ಚುನಾವಣಾ ಆಯೋಗದ ಸಹಾಯದಿಂದ ಬಂಗಾಳದಲ್ಲಿ ಬಿಜೆಪಿ ಗೆದ್ದಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಈ ಕಾರಣಕ್ಕಾಗಿ ನಾನು ರಾಜೀನಾಮೆ ಕೊಡುವುದಿಲ್ಲ. ಮತ್ತೊಂದೆಡೆ, 100 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ ಫಲಿತಾಂಶಗಳನ್ನು ಕದ್ದ ಕಾರಣವೇ ಗೆಲುವು ನೋಡಲು ಸಾಧ್ಯವಾಗಿದೆ ಎಂದು ಕಿಡಿಕಾರಿದ್ದಾರೆ,(ಏಜೆನ್ಸೀಸ್).