ಭಾರತದಲ್ಲಿ ಇಂದಿನ 2K ಮತ್ತು 24K ಚಿನ್ನದ ಬೆಲೆ, ಮಾರುಕಟ್ಟೆಯಲ್ಲಿ ಇಳಿಕೆಯ ಪ್ರವೃತ್ತಿ
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಸಂಘರ್ಷ ಮುಂದುವರಿಯುತ್ತಿದ್ದರೂ ಕೂಡ ಇಂದು (ಸೆಪ್ಟೆಂಬರ್ 7) ಚಿನ್ನದ ಬೆಲೆ (Gold Price) ಯಲ್ಲಿ ಇಳಿಕೆ ಕಂಡುಬಂದಿದೆ.
ಇರಾನ್ ಪರಮಾಣು ಅಸ್ತ್ರವನ್ನು ಹೊಂದದಂತೆ ಮಾಡಲು ಅಮೆರಿಕ ಕಠಿಣ ಕ್ರಮ ತೆಗೆದುಕೊಳ್ಳಬಹುದೆಂದು ಯುಎಸ್ ಇಂಧನ ಕಾರ್ಯದರ್ಶಿ ರೈಟ್ ತಿಳಿಸಿದ್ದರು. ಈ ಹೇಳಿಕೆಯಿಂದಾಗಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗಲಿದೆ ಎನ್ನವುದು ಬಹುತೇಕರ ಅನುಮಾನವಾಗಿತ್ತು.
ಆದರೆ, ಅಮೆರಿಕದಲ್ಲಿನ ಉದ್ಯೋಗದ ಮೇಲಿಮ ಬಡ್ಡಿದರ ಪ್ರಮಾಣ ಹೆಚ್ಚಾದ ಕಾರಣ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ. ಈ ಬೆಳವಣಿಗೆ ಕೇವಲ ಅಮೆರಿಕ ಮಾತ್ರವಲ್ಲದೆ, ಭಾರತದಲ್ಲಿ ಕೂಡ ಚಿನ್ನ ಮತ್ತು ಬೆಳ್ಳಿಯ ಬೆಲೆ ಇಳಿಕೆಗೆ ಕಾರಣವಾಗಿದೆ ಎಂದು ಮಾರಿಕಟ್ಟೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಿನ್ನದ ಬೆಲೆ ಎಷ್ಟು ಕುಸಿದಿದೆ?
ನಿನ್ನೆಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿಯಲ್ಲಿ ಭಾರಿ ಪ್ರಮಾಣದ ಕುಸಿತ ಕಂಡುಬಂದಿದೆ ಎಂದು ಹೇಳಬಹುದಾಗಿದೆ. ನಿನ್ನೆ 24 ಕ್ಯಾರೆಟ್ ಚಿನ್ನದ ಬೆಲೆ 1,54,800 (10 ಗ್ರಾಂ) ಇದ್ದರೆ 1,54,150 ಕ್ಕೆ ಕುಸಿತ ಕಂಡಿದೆ. ಹಾಗೆಯೇ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 1,43,600 ಇದ್ದ ಬೆಲೆ 1,40,030 ಕ್ಕೆ ಇಳಿದಿದೆ. ಹಾಗೆಯೇ ಒಂದು ಕಿ.ಲೋ ಬೆಳ್ಳಿ ಬೆಲೆ 2,55,000 ಇದ್ದ ಬೆಲೆ ಇಂದು 2,36,590 ಕ್ಕೆ ಕುಸಿತ ಕಂಡಿದೆ.
ಭಾರತದ ಇತರೆ ಭಾಗದಲ್ಲಿ ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ?
24 ಕ್ಯಾರೆಟ್ ಚಿನ್ನ - 1,52,640 (10 ಗ್ರಾಂ)
22 ಕ್ಯಾರೆಟ್ ಚಿನ್ನ - 139,920 (10 ಗ್ರಾಂ)
ಒಂದು ಕೆ.ಜಿ ಬೆಳ್ಳಿ - 2,36,410
24 ಕ್ಯಾರೆಟ್ ಚಿನ್ನ - 1,52,370 (10 ಗ್ರಾಂ)
22 ಕ್ಯಾರೆಟ್ ಚಿನ್ನ - 1,39,673 (10 ಗ್ರಾಂ)
ಒಂದು ಕೆ.ಜಿ ಬೆಳ್ಳಿ - 2,36,000
24 ಕ್ಯಾರೆಟ್ ಚಿನ್ನ - 1,52,860 (10 ಗ್ರಾಂ)
22 ಕ್ಯಾರೆಟ್ ಚಿನ್ನ - 1,40,122 (10 ಗ್ರಾಂ)
ಒಂದು ಕೆ.ಜಿ ಬೆಳ್ಳಿ - 2,36,520
24 ಕ್ಯಾರೆಟ್ ಚಿನ್ನ - 1,52,420 (10 ಗ್ರಾಂ)
22 ಕ್ಯಾರೆಟ್ ಚಿನ್ನ - 1,39,718 (10 ಗ್ರಾಂ)
ಒಂದು ಕೆ.ಜಿ ಬೆಳ್ಳಿ - 2,35,830