ನವದೆಹಲಿ: ಬಲವಾದ ಜಾಗತಿಕ ಪ್ರವೃತ್ತಿಯ ನಡುವೆ ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ಚಿನ್ನದ ಬೆಲೆ 10 ಗ್ರಾಂಗೆ 960 ರೂ. ಏರಿಕೆಯಾಗಿ 1,40,400 ರೂ.ಗೆ ತಲುಪಿದೆ. ಶುಕ್ರವಾರ ಶೇ. 99.9 ಶುದ್ಧತೆಯ ಚಿನ್ನ 1,39,440 ರೂ. ಇತ್ತು. ಬೆಳ್ಳಿ ಬೆಲೆಯ ಏರಿಕೆಯೂ ಮುಂದುವರಿದಿದ್ದು, ಶುಕ್ರವಾರದ ಕೆಜಿಗೆ 2,41,400 ರೂ. ಇದ್ದದ್ದು ಸೋಮವಾರ 2,600 ರೂ. ಏರಿಕೆಯಾಗಿ 2,44,000 ರೂ.ಗೆ ತಲುಪಿದೆ.
ರೂಪಾಯಿ ಮೌಲ್ಯ ಮತ್ತಷ್ಟು ಕುಸಿತ
ಮುಂಬೈ: ಬಲವಾದ ಅಮೆರಿಕನ್ ಕರೆನ್ಸಿ ಮತ್ತು ಮಂದಗತಿಯ ಷೇರು ಮಾರುಕಟ್ಟೆಯ ಕಾರಣದಿಂದಾಗಿ ಭಾರತೀಯ ರೂಪಾಯಿಯ ಮೌಲ್ಯ ಸತತ ನಾಲ್ಕನೇ ದಿನವೂ ದುರ್ಬಲವಾಗಿದ್ದು, ಸೋಮವಾರ ಡಾಲರ್ ಎದುರು 8 ಪೈಸೆ ಕುಸಿದು 90.28ಕ್ಕೆ ತಲುಪಿದೆ. ಅಂತರಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ 90.21ರಲ್ಲಿ ವಹಿವಾಟು ಆರಂಭಿಸಿತು. ದಿನದ ವಹಿವಾಟಿನ ಮಧ್ಯೆ 90.50ರ ಕನಿಷ್ಠ ಮಟ್ಟವನ್ನು ತಲುಪಿತ್ತು. ಅಂತಿಮವಾಗಿ ಹಿಂದಿನ ಮುಕ್ತಾಯದ ಮಟ್ಟಕ್ಕಿಂತ 8 ಪೈಸೆ ದುರ್ಬಲಗೊಂಡು ಡಾಲರ್ ಎದುರು 90.28ಕ್ಕೆ ತಲುಪಿತು.