ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿನ ವಹಿವಾಟದ ಆಧಾರದ ಮೇಲೆ ಇಂದು(ಡಿ. 23) ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ(Gold price) 2,650 ರೂ. ಏರಿಕೆಯಾಗಿ, 10 ಗ್ರಾಂ ಚಿನ್ನ 1 ಲಕ್ಷದ 40 ಸಾವಿರ ರೂಪಾಯಿಯ ದಾಖಲೆ ಮಟ್ಟ ತಲುಪಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ಮಾಹಿತಿ ನೀಡಿದೆ.
ಸೋಮವಾರ 99.9ರಷ್ಟು ಶುದ್ಧ ಚಿನ್ನ 10 ಗ್ರಾಂಗೆ 1,38,200 ರೂ. ಮುಕ್ತಾಯವಾಗಿತ್ತು. ಇಂದು 2,650 ರೂ. ಏರಿಕೆಯಾಗಿ 10 ಗ್ರಾಂ ಚಿನ್ನ 1 ಲಕ್ಷದ 40 ಸಾವಿರ ರೂ. ತಲುಪಿದೆ. ಈ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇ. 78.40 ಪ್ರತಿಶತದಷ್ಟು ಹೆಚ್ಚಳವಾಗಿದ್ದು, ಒಟ್ಟು 61,900 ರೂ. ಏರಿಕೆಯಾಗಿದೆ. 2024 ಡಿಸೆಂಬರ್ 31ರಂದು 10 ಗ್ರಾಂ ಚಿನ್ನಕ್ಕೆ 78, 950 ರೂ. ಇತ್ತು.
ಬೆಳ್ಳಿಯೂ ಸತತ ಎರಡನೇ ದಿನ ಏರಿಕೆ ಕಂಡು, Rs 2,750 ಹೆಚ್ಚಳದೊಂದಿಗೆ ಪ್ರತಿ ಕಿಲೋಗ್ರಾಂಗೆ 2 ಲಕ್ಷದ 17 ಸಾವಿರ 250 ರೂಪಾಯಿ ತಲುಪಿದೆ (ಏಜೆನ್ಸೀಸ್).