WEB
ದೇಶ

ಸತತ 7ನೇ ದಿನವೂ ಕುಸಿದ ಚಿನ್ನದ ದರ

ಜಾಗತಿಕ ಮಾರುಕಟ್ಟೆಗಳಲ್ಲಿ ನಿರಂತರ ಮಾರಾಟದ ಒತ್ತಡದಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಸತತ ಏಳನೇ ವಹಿವಾಟಿನ ದಿನವೂ ಚಿನ್ನದ ದರ ಕುಸಿತ ಕಂಡಿದ್ದು, 10 ಗ್ರಾಂಗೆ -ಠಿ;2,800 ಇಳಿಕೆಯಾಗಿ -ಠಿ;1,35,800ಕ್ಕೆ ತಲುಪಿದೆ.

ನವದೆಹಲಿ: ಜಾಗತಿಕ ಮಾರುಕಟ್ಟೆಗಳಲ್ಲಿ ನಿರಂತರ ಮಾರಾಟದ ಒತ್ತಡದಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಸತತ ಏಳನೇ ವಹಿವಾಟಿನ ದಿನವೂ ಚಿನ್ನದ ದರ ಕುಸಿತ ಕಂಡಿದ್ದು, 10 ಗ್ರಾಂಗೆ -ಠಿ;2,800 ಇಳಿಕೆಯಾಗಿ -ಠಿ;1,35,800ಕ್ಕೆ ತಲುಪಿದೆ. ಸ್ಥಳೀಯ ವ್ಯಾಪಾರಿಗಳ ಮಾಹಿತಿಯಂತೆ, ಮಂಗಳ ವಾರ 99.9 ಶೇಕಡ ಶುದ್ಧತೆಯ ಹಳದಿ ಲೋಹದ ದರ 10 ಗ್ರಾಂಗೆ -ಠಿ;1,38,600ರಷ್ಟಿತ್ತು. ಬೆಳ್ಳಿ ದರವು ಹಿಂದಿನ ಮುಕ್ತಾಯದ ದರವಾದ ಕೆ.ಜಿ.ಗೆ -ಠಿ;1,69,500 ರಿಂದ -ಠಿ;5,000 ಕುಸಿದು -ಠಿ;1,64,500ಕ್ಕೆ ತಲುಪಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ತೀವ್ರ ಮಾರಾಟದ ಒತ್ತಡವು ಹೂಡಿಕೆದಾರರ ಮೇಲೆ ಪ್ರಭಾವ ಬೀರಿದ್ದರಿಂದ, ದೇಶೀಯ ಅಮೂಲ್ಯ ಲೋಹಗಳ ಬೆಲೆಗಳು ಬುಧವಾರವೂ ಕುಸಿತ ಮುಂದುವರಿಸಿ ಕಳೆದ ವರ್ಷದ ಡಿಸೆಂಬರ್ ನಂತರದ ಕನಿಷ್ಠ ಮಟ್ಟಕ್ಕೆ ಇಳಿದಿವೆ. ವಿದೇಶಿ ಮಾರುಕಟ್ಟೆಗಳಲ್ಲಿ ಸ್ಪಾಟ್ ಚಿನ್ನದ ದರ 78.71 ಡಾಲರ್ ಅಥವಾ ಶೇ.2.04ರಷ್ಟು ಕುಸಿದು ಪ್ರತಿ

ಔನ್ಸ್​ಗೆ 3,770.54 ಡಾಲರ್​ಗೆ ತಲುಪಿದ್ದರೆ, ಬೆಳ್ಳಿ ದರ ಶೇ.3ಕ್ಕಿಂತ ಹೆಚ್ಚು ಇಳಿಕೆಯಾಗಿ ಪ್ರತಿ ಔನ್ಸ್​ಗೆ 45.86 ಡಾಲರ್​ಗೆ ತಲುಪಿದೆ.

ಬಂಗಾರ ಮಾರಾಟ ಮೌಲ್ಯ ಹೆಚ್ಚಳ

ಮುಂಬೈ: ಅಕ್ಟೋಬರ್ ಮಧ್ಯಭಾಗದಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾದ ಪರಿಣಾಮ, ಧನತೇರಸ್-ದೀಪಾವಳಿ ಹಬ್ಬದ ಅವಧಿಯಲ್ಲಿ ಚಿನ್ನಕ್ಕೆ ಬೇಡಿಕೆ ಬಲವಾಗಿದ್ದು, ಚಿಲ್ಲರೆ ವ್ಯಾಪಾರಿಗಳ ಮಾರಾಟ ಮೌಲ್ಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.15-25 ರಷ್ಟು ಹೆಚ್ಚಳವಾಗಿದೆ ಎಂದು ವಿಶ್ವ ಚಿನ್ನದ ಮಂಡಳಿಯ (ಡಬ್ಲು್ಯಜಿಸಿ) ಭಾರತದ ಸಂಶೋಧನಾ ಮುಖ್ಯಸ್ಥೆ ಕವಿತಾ ಚಾಕೊ ಬುಧವಾರ ತಿಳಿಸಿದ್ದಾರೆ. ದೇಶಾದ್ಯಂತ ಚಿಲ್ಲರೆ ವ್ಯಾಪಾರಿಗಳು ಹೆಚ್ಚಿನ ಗ್ರಾಹಕರ ಭೇಟಿ ಮತ್ತು ಮಾರಾಟವನ್ನು ದಾಖಲಿಸಿದ್ದಾರೆ. ಅಕ್ಟೋಬರ್ ಮಧ್ಯಭಾಗದಿಂದ ಚಿನ್ನದ ಬೆಲೆ ಇಳಿಕೆಯಾದದ್ದು ಬೇಡಿಕೆಗೆ ಪೂರಕವಾಗಿ ಪರಿಣಮಿಸಿತು. ಎಲ್ಲ ಪ್ರದೇಶಗಳಲ್ಲೂ ಖರೀದಿ ವ್ಯಾಪಕವಾಗಿದ್ದು, ಆಭರಣಗಳು, ಗಟ್ಟಿಗಳು ಮತ್ತು ನಾಣ್ಯಗಳಿಗೆ ಉತ್ತಮ ಬೇಡಿಕೆ ಕಂಡುಬಂದಿದೆ ಎಂದು ಚಾಕೊ ಹೇಳಿದ್ದಾರೆ.