Gold price: ಭಾರತದ ಮಾರುಕಟ್ಟೆಯಲ್ಲಿ ಸತತ ಒಂಬತ್ತನೇ ದಿನವೂ ಚಿನ್ನದ ಬೆಲೆ ಭಾರೀ ಕುಸಿತ ಕಂಡಿದ್ದು, ಶುಕ್ರವಾರ(ನ. 20) ಪ್ರತಿ 10 ಗ್ರಾಂಗೆ ₹1,29,531 ಕ್ಕಿಂತ ₹5,638 ಕಡಿಮೆಯಾಗಿ, ಚಿನ್ನವು ಪ್ರತಿ 10 ಗ್ರಾಂಗೆ ₹1,23,893 ರಲ್ಲಿ ಮುಕ್ತಾಯಗೊಂಡಿದೆ. ಬೆಳ್ಳಿ ಬೆಲೆಯೂ ಸತತ ಏಳನೇ ದಿ ಕುಸಿತ ಕಂಡಿದ್ದು, ಖರೀದಿದಾರರಿಗೆ ತುಸು ನಿರಾಳ ನೀಡಿವೆ.
ಐಬಿಜೆಎ (IBJA) ದತ್ತಾಂಶದ ಪ್ರಕಾರ, ಗುರುವಾರ ಪ್ರತಿ 10 ಗ್ರಾಂಗೆ ₹1,29,531 ಇದ್ದ ಚಿನ್ನದ ದರವು ಶುಕ್ರವಾರ ₹5,638 ಕಡಿಮೆಯಾಗಿ ₹1,23,893 ರಲ್ಲಿ ಮುಕ್ತಾಯವಾಗಿದೆ. ಪ್ರಸಕ್ತ ಕುಸಿತದಿಂದ ಚಿನ್ನವು ಕಳೆದ ಒಂದು ವರ್ಷದ ಅವಧಿಯ ಕನಿಷ್ಠ ಮಟ್ಟದ ಆಸುಪಾಸಿಗೆ ಬಂದಿದೆ. ಮತ್ತೊಂದೆಡೆ, ಬೆಳ್ಳಿಯ ಬೆಲೆಯು ಸತತ ಏಳನೇ ದಿನವೂ ಇಳಿಕೆ ಕಂಡಿದ್ದು, ಪ್ರತಿ ಕಿಲೋಗ್ರಾಂಗೆ ₹7,911 ಕುಸಿದು ₹1,52,528 ರಲ್ಲಿ ಕೊನೆಗೊಂಡಿದೆ.
ಅಮೆರಿಕದ ಡಾಲರ್ ಮೌಲ್ಯದ ಬಲವರ್ಧನೆ, ಹೂಡಿಕೆದಾರರಿಂದ ಲಾಭದ ನಗದೀಕರಣ ಹಾಗೂ ಜಾಗತಿಕ ಮಾರುಕಟ್ಟೆಯ ಬದಲಾವಣೆಗಳ ಹಿನ್ನೆಲೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳ ಮೇಲೆ ಒತ್ತಡ ಉಂಟಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ (ಏಜೆನ್ಸೀಸ್).