Glass Piece Found In Burger At Mumbai shop
- ಕೊರಿಯನ್ ವೆಜ್ ಬರ್ಗರ್ನಲ್ಲಿ ಕಾಣಿಸಿಕೊಂಡ ಗಾಜಿನ ತುಂಡು
- ಬರ್ಗರ್ನಲ್ಲಿ ಗಾಜು ಕಂಡ ಹಿನ್ನೆಲೆ ಪೊಲೀಸರಿಗೆ ಎಫ್ಡಿಎ ಅಧಿಕಾರಿಗೆ ದೂರು ಕೊಟ್ಟ ಯುವತಿ.
- ಸಮಸ್ಯೆ ಬಗ್ಗೆ ಸರಿಯಾಗಿ ಸ್ಪಂದಿಸದ ಜಿಮಿಸ್ ರೆಸ್ಟೋರೆಂಟ್ ವಿರುದ್ದ ದೂರು.
Glass Piece Found In Burger At Mumbai shop: ಮುಂಬೈನಲ್ಲಿ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತದ (ಎಫ್ಡಿಎ) ಅಧಿಕಾರಿ ತುಕಾರಾಮ್ ಮುಂಡೆ ಅವರು ಫುಡ್ ರೇಡ್ ಕಾರ್ಯ ನಡೆಸುತ್ತಿರುವ ಹೊತ್ತಲ್ಲಿಯೇ..ಇಲ್ಲಿನ ಅನೇಕ ಹೋಟೆಲ್, ರೆಸ್ಟೋರೆಂಟ್, ಬೇಕರಿಯಲ್ಲಿಮ ಆಹಾರದಲ್ಲಿ
ಕಂಡುಬರುತ್ತಿರುವ ಲೋಪದೋಷದ ಬಗ್ಗೆ ಸಮಸ್ಯೆಗಳು ಬೆಳಕಿಗೆ ಬರುತ್ತಿವೆ.
ಕಳೆದ ಕೆಲವು ದಿನದ ಹಿಂದೆ ಪುಣೆಯ ಕುಟುಂಬವೊಂದು ಹಲ್ಲಿ ಬಿದ್ದಿದ್ದ ಕೇಕ್ ತಿಂದು ಅಸ್ವಸ್ಥರಾಗಿದ್ದ ಕೇಸ್ ದಾಖಲಾಗಿತ್ತು. ಆ ಬೆನ್ನಲ್ಲೇ ಬರ್ಗರ್ನಲ್ಲಿ ಗಾಜಿನ ಪೀಸ್ ಕಂಡುಬಂದ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಏನಾಗಿತ್ತು?
ಮುಂಬೈ ಅಂಧೇರಿಯಲ್ಲಿರುವ ಜಿಮಿಸ್ ಬರ್ಗರ್ (Mumbai's Jimis Burger)ಎನ್ನುವ ಕೇಂದ್ರದಿಂದ ಗ್ರಾಹಕರೊಬ್ಬರು ಬರ್ಗರ್ ಖರೀದಿಸಿದ್ದರು. ಆ ಬರ್ಗರ್ ಅರ್ಧ ತಿನ್ನುವಾಗ ಸಿಕ್ಕ ಗಾಜಿನ ತುಂಡು ಕಂಡು ಅವರು ಆತಂಕಕ್ಕೆ ಒಳಗಾಗಿದ್ದಾರೆ. ಅದೇನಾದ್ರೂ ಹೊಟ್ಟೆ ಒಳಕ್ಕೆ ಹೋಗಿದ್ದರೆ ಸಾವು ಖಚಿತವಾಗ್ತಿತ್ತು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ತನೀಶಾ ಗೋಗ್ರಿಯಿಂದ ದೂರು
ತನೀಶಾ ಗೋಗ್ರಿ ಎಂಬುವವರು ಆಗಸ್ಟ್16ರಂದು ಜಿಮಿಸ್ ಬರ್ಗರ್ ಕೇಂದ್ರದಲ್ಲಿ ... ಬರ್ಗರ್ ಖರೀದಿ ಮಾಡಿದ್ದರು. ಅದನ್ನು ಅರ್ಧ ತಿನ್ನುವಷ್ಟರಲ್ಲಿ ಗಾಜಿನ ಚೂರು ಸಿಕ್ಕಿದೆ. ತನಿಶಾ ಅವರು ಈ ಬಗ್ಗೆ ರೆಸ್ಟೋರೆಂಟ್ಗೆ ತಿಳಿಸಿದ್ದಾರೆ.ಜೊತೆಗೆ ಅದನ್ನು ಆಡಳಿತ ಮಂಡಳಿಗೆ ಕೊಟ್ಟಿದ್ದಾರೆ. ಆದರೆ ರೆಸ್ಟೋರೆಂಟ್ ಸಿಬ್ಬಂದಿ ಈ ಬಗ್ಗೆ ತನಿಖೆ ನಡೆಸಿ, ಕ್ರಮ ಕೈಗೊಳ್ಳುವ ಬದಲಿಗೆ ಗಾಜನ್ನು ಎಸೆದಿದ್ದಾರೆ ಎಂದು ತನೀಶಾ ಹೇಳಿಕೊಂಡಿದ್ದಾರೆ. ಹೀಗಾಗಿ ಸಿಟ್ಟಾದ ಅವರು ಪೊಲೀಸರಿಗೆ ಮತ್ತು ಆಹಾರ ಮತ್ತು ಔಷಧ ಆಡಳಿತದ (ಎಫ್ಡಿಎ) ದೂರು ಕೊಟ್ಟಿದ್ದಾರೆ ಎನ್ನಲಾಗಿದೆ.
ತನಿಷಾ ಹೇಳಿದ್ದೇನು
ನಾನು ಕೊರಿಯನ್ ವೆಜ್ ಬರ್ಗರ್ ಅನ್ನು ಆರ್ಡರ್ ಮಾಡಿಕೊಂಡಿದ್ದೆ. ಅದನ್ನು ಅರ್ಧ ತಿನ್ನುವಷ್ಟರಲ್ಲಿ ನನಗೆ ಗಾಜು ಸಿಕ್ಕಿತ್ತು. ನಾನು ತಕ್ಷಣ ಆ ಬಗ್ಗೆ ಆಡಳಿತ ಮಂಡಳಿಗೆ ತಿಳಿಸಿದೆ. ಆದರೆ ಅವರು ಅದನ್ನು ಗಂಭೀರವಾಗಿ ಪರಿಗಣಿಸದೆ ಬಿಸಾಡಿದರು. ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟರು. ಜೊತೆಗೆ ಎಫ್ಡಿಎ ಅಧಿಕಾರಿಗಳನ್ನು ಖುದ್ದು ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡಿದ್ದಾರೆ.
ಸದ್ಯ ಅಂಬೋಲಿ ಠಾಣೆಯ ಪೊಲೀಸರು ಹಾಗೂ ಎಫ್ಡಿಕೆ ಅಧಿಕಾರಿಗಳು ದೂರಿನ ಸಂಬಂಧ ಪರಿಶೀಲನೆ ನಡೆಸುತ್ತಿದ್ದಾರೆ. ರೆಸ್ಟೋರೆಂಟ್ ಮಾಲೀಕರ ಉತ್ತರಕ್ಕಾಗಿ ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ, (ಏಜೆನ್ಸೀಸ್)