ಸ್ವಲ್ಪ ಸಮಯ ಕೊಡಿ, ಪಂಜಾಬ್ನಲ್ಲಿ ಪ್ರತಿಭಟನೆ ನಡೆಸುತ್ತೇವೆ: ಅಭಿಜಿತ್ ದೀಪ್ಕೆ
- ಸ್ವಲ್ಪ ಸಮಯ ಕೊಡಿ, ಪಂಜಾಬ್ನಲ್ಲಿ ಪ್ರತಿಭಟನೆ ನಡೆಸುತ್ತೇವೆ: ಅಭಿಜಿತ್ ದೀಪ್ಕೆ
- ಪಂಜಾಬ್ನಲ್ಲಿ ನಡೆದಿರುವ ಪರೀಕ್ಷಾ ಅಕ್ರಮ
- ನಮ್ಮಲ್ಲಿ ಯಾವುದೇ ಪೇಪರ್ ಲೀಕ್ ಆಗೇ ಇಲ್ಲ; ಭಗವಂತ್ ಮಾನ್
ಪಂಜಾಬ್: ಎನ್ಟಿಎ ವತಿಯಿಂದ ನಡೆಯುವ ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದ ಹಿನ್ನಲೆ ಕಾಕ್ರೋಜ್ ಜನತಾ ಪಾರ್ಟಿ ವತಿಯಿಂದ ಒಂದು ತಿಂಗಳು ಹೋರಾಟ ನಡೆದು ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಈ ಪ್ರತಿಭಟನೆ ಯಶಸ್ವಿಯಾದ ಹಿನ್ನಲೆ, ಇತ್ತೀಚೆಗೆ ಪಂಜಾಬ್ನಲ್ಲಿ ನಡೆದಿದೆ ಎನ್ನಲಾಗುತ್ತಿರುವ ಪಶು ವೈದ್ಯಾಧಿಕಾರಿ ಪರೀಕ್ಷೆಯಲ್ಲಿ ಅಕ್ರಮ ನಡೆಯಲಾಗಿದೆ ಎಂದು ಹೇಳಲಾಗುತ್ತಿದ್ದು, ಕಾಕ್ರೋಚ್ ಜನತಾ ಪಾರ್ಟಿ ಈ ವಿಷಯದಲ್ಲಿ ಕೂಡ ಪ್ರತಿಭಟನೆ ನಡೆಸಿ, ಪಂಜಾಬ್ನ ಶಿಕ್ಷಣ ಸಚಿವರ ರಾಜೀನಾಮೆಯನ್ನು ಪಡೆಯಬೇಕೆಂದು ಜನ ಆಗ್ರಹಿಸುತ್ತಿದ್ದಾರೆ.
ನಾವು ತಯಾರಿ ನಡೆಸುತ್ತಿದ್ದೇವೆ!
ಪಂಜಾಬ್ನಲ್ಲಿ ಕೂಡ ಹೋರಾಟ ನಡೆಸಿ ಎಂಬ ಕೂಗು ಹೆಚ್ಚಾಗುತ್ತಿದ್ದಂತೆ, ಇದಕ್ಕ ಪ್ರತಿಕ್ರಿಯೆ ನೀಡಿರುವ ಕಾಕ್ರೋಜ್ ಜನತಾ ಪಾರ್ಟಿ ಸ್ಥಾಪಕ ಅಭಿಜಿತ್ ದೀಪ್ಕೆ (Abhijeet Dipke on Punjab Protest), ನಮಗೆ ಸ್ವಲ್ಪ ಸಮಯವಕಾಶ ಕೊಡಿ, ಪಂಜಾಬ್ನಲ್ಲಿ ಹೋರಾಟವನ್ನು ನಡೆಸಲು ನಾವು ಯೋಜನೆಯನ್ನು ರೂಪಿಸುತ್ತಿದ್ದೆವೆಂದು ಹೇಳಿಕೆ ನೀಡಿದ್ದಾರೆ.
ದೆಹಲಿಯಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಾಗಿದೆ. ಈ ಸಮಸ್ಯೆಯನ್ನು ಪರಿಹರಿಸಿ ನಾವು ಪಂಜಾಬ್ ನತ್ತ ಗಮನ ಹರಿಸುತ್ತೇವೆಂದು ಹೇಳಿದ್ದಾರೆ.
ನಮ್ಮಲ್ಲಿ ಆಕ್ರಮ ನಡೆದೇ ಇಲ್ಲ!
ಇತ್ತ ಪಂಜಾಬ್ನಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷ, ನಮ್ಮ ರಾಜ್ಯದಲ್ಲಿ ಯಾವುದೇ ಪೇಪರ್ ಸೋರಿಕೆ ಆಗಿಲ್ಲ. ನಮ್ಮ ಸರ್ಕಾರ ಕಳೆದ 4.5 ವರ್ಷದಿಂದ ಆಡಳಿತ ನಡೆಸುತ್ತಿದ್ದು, ಇಲ್ಲಿವರೆಗೆ ಯಾವುದೇ ಅಕ್ರಮ ನಡೆದಿಲ್ಲ.
ಆದರೆ ಈಗ ಕೇಳಿಬರುತ್ತಿರುವ ಅಕ್ರಮ ಆರೋಪದಲ್ಲಿ, ಎರಡು ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್ ಬಳಸಿ ಅಕ್ರಮ ನಡೆಸಲು ಮುಂದಾದಾ ಕೆಲ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಇಲ್ಲಿ ಯಾವುದೇ ಪೇಪರ್ ಸೋರಿಕೆ ನಡೆದಿಲ್ಲ ಎಂದು ಸಿಎಂ ಭಗವಂತ್ ಮಾನ್ ತಿಳಿಸಿದ್ದಾರೆ. ಈಗ ನಮ್ಮ ರಾಜ್ಯಕ್ಕೆ ಹಾಗೂ ನಮ್ಮ ಸರ್ಕಾರಕ್ಕೆ ಕಳಂಕ ತರಲು ಈ ಈ ಕಾಂಗ್ರೆಸ್ ಹಾಗೂ ಬಿಜೆಪಿ ಹಣ ನೀಡಿ ಸೋಷಿಯಲ್ ಮೀಡಿಯಾನಲ್ಲಿ ಪೇಯ್ಡ್ ಪ್ರಮೋಷನ್ ನಡೆಸುತ್ತಿವೆ ಎಂದು ಆರೋಪಿಸಿದೆ, (ಏಜನ್ಸೀಸ್).