Giorgia Meloni's Instagram flooded with comments demanding Indian PM Narendra Modi's resignation 
ದೇಶ

ಮೋದಿಯವರಿಗೆ ರಿಸೈನ್ ಮಾಡೋಕೆ ಹೇಳಿ ಪ್ಲೀಸ್; ಮೆಲೊನಿ ಪೋಸ್ಟ್​ಗೆ ಇನ್‌ಸ್ಟಾದಲ್ಲಿ ಬರಪೂರ ಕಾಮೆಂಟ್..Giorgia Meloni

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ
  • ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಪೋಸ್ಟ್‌ಗಳಿಗೆ ಕಾಮೆಂಟ್ ಮಾಡಿದ ನೆಟ್ಟಿಗರು
  • ನಿಮ್ಮಗೆಳೆಯ ಮೋದಿಗೆ ರಾಜೀನಾಮೆ ನೀಡುವಂತೆ ಹೇಳಿ ಎಂದು ಮೆಲೊನಿಗೆ ಮನವಿ
Giorgia Meloni's Instagram flooded with comments demanding Indian PM Narendra Modi's resignationನಿಮ್ಮ ಬಾಯ್​ಫ್ರೆಂಡ್​ ಪ್ರಧಾನಿ ಮೋದಿ ಅವರಿಗೆ ರಿಸೈನ್  ಮಾಡೋಕೆ ಹೇಳಿ, ನಿಮ್ಮ ಸ್ನೇಹಿತನನ್ನು ನಂಬಬೇಡಿ, ಮೋದಿ ಜೊತೆ ಬ್ರೇಕ್​ ಅಪ್​ ಮಾಡ್ಕೊಳ್ಳಿ, ಇಲ್ಲಿ ಕೇಳಿ ಒಳ್ಳೆಯ  ರೀತಿಯಲ್ಲಿ ಕೆಲಸ ಮಾಡಲು ನಿಮ್ಮ ಪತಿಗೆ ಹೇಳಿ  ಹೀಗೆ ಬರಪೂರ ಕಾಮೆಂಟ್​ಗಳು ಕಾಣಿಸಿಕೊಂಡಿದ್ದು ಇಟಲಿ ಪ್ರಧಾನಿ  ಜಾರ್ಜಿಯಾ ಅವರ ಇನ್​ಸ್ಟಾಗ್ರಾಂ ಅಕೌಂಟ್​ನಲ್ಲಿ.
ಹೌದು, ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ದೆಹಲಿಯಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದೆ.  ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು,  ಶಿಕ್ಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಾಲಿವುಡ್​ ನಾಯಕರು, ಸೌತ್​ ಇಂಡಿಯಾ ಸ್ಟಾರ್ಸ್​​​​ ಹಾಗೂ ಸಾಹಿತಿಗಳು ಸೇರಿದಂತೆ ಹಲವರು ಈ ಬಗ್ಗೆ  ಉಲ್ಲೇಖಿಸಿದ್ದಾರೆ. ಸದ್ಯ ಇದರ ಬಿಸಿ ಇಟಲಿಗೂ ಮುಟ್ಟಿದೆ.

ಬ್ರೇಕಪ್ ಮಾಡಿಕೊಳ್ಳಿ

ಇತ್ತೀಚೆಗೆ  ಇಟಲಿ ಪ್ರಧಾನಿ  ಜಾರ್ಜಿಯಾ ಅವರು ಕೋಪದಲ್ಲಿರುವ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದರು.  ಈ ವಿಡಿಯೋಗೆ ಭಾರತದಲ್ಲಿರುವ ಇನ್​ಸ್ಟಾಗ್ರಾಮ್​ ಬಳಕೆದಾರರು ಸಾವಿರಾರು ಕಾಮೆಂಟ್ ಮಾಡಿದ್ದಾರೆ. ನಿಮ್ಮ ಬಾಯ್​ಫ್ರೆಂಡ್​ಗೆ ಸರಿಯಾದ ರೀತಿಯಲ್ಲಿ ಆಳ್ವಿಕೆ ಮಾಡೋಕೆ ಹೇಳಿ, ಮೋದಿ ಅವರು ನಿಮ್ಗೆ ಸರಿಯಾದ ವ್ಯಕ್ತಿಯಲ್ಲ ಬ್ರೇಕಪ್​ ಮಾಡಿಕೊಳ್ಳಿ. ದಯವಿಟ್ಟು ಮೋದಿಯವರಿಗೆ ವಿದ್ಯಾರ್ಥಿಗಳ ಮಾತು ಆಲಿಸೋಕೆ ಹೇಳಿ. ನಮ್ಮ ಭವಿಷ್ಯ ಮೋದಿ ಅವರ ಕೈನಲ್ಲಿದೆ ಎಂದು ಸಲಹೆ ನೀಡುತ್ತಿರುವ ವಿಚಿತ್ರ ಕಾಮೆಂಟ್​ಗಳು ಸದ್ಯ ಚರ್ಚೆಗೆ ಕಾರಣವಾಗಿದೆ.

ಮೆಲೋಡಿ ವೈರಲ್​

ಈ ಹಿಂದೆ ಪ್ರಧಾನಿ ಮೋದಿ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ನಡುವಿನ ಸ್ನೇಹ ಹಾಗೂ 'ಮೆಲೋಡಿ' ಟ್ರೆಂಡ್‌ಗಳು ಭಾರೀ ವೈರಲ್ ಆಗಿದ್ದವು. ಇದೀಗ ಅದೇ ಸ್ನೇಹವನ್ನು ನೆಪವಾಗಿಟ್ಟುಕೊಂಡು, ಭಾರತದ ವಿದ್ಯಾರ್ಥಿಗಳ ಪರವಾಗಿ ಮಧ್ಯಪ್ರವೇಶಿಸುವಂತೆ ನೆಟ್ಟಿಗರು ಈ ವಿನೂತನ ಪ್ರತಿಭಟನೆ ನಡೆಸುತ್ತಿದ್ದಾರೆ.

ದೆಹಲಿ ಕಾಲೇಜಿನ ವಿರುದ್ಧ ರಾಹುಲ್​ ಕಿಡಿ

ವಿದ್ಯಾರ್ಥಿಗಳೇ ಮತ್ತು ಅಧ್ಯಾಪಕರೇ, ನಿಮ್ಮ ಸುರಕ್ಷತೆಯು ನಮಗೆ ಮುಖ್ಯವಾಗಿದೆ. ಭಾರತೀಯ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳ ಪ್ರಕಾರ ಕಟ್ಟುನಿಟ್ಟಾಗಿ ನಿಯಂತ್ರಿಸಲ್ಪಡುವ ಹೊಸ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗಳು ಕಾನೂನು ಕ್ರಮಕ್ಕೆ ಕಾರಣವಾಗಬಹುದು ಎಂಬುದನ್ನು ದಯವಿಟ್ಟು ಗಮನಿಸಿ. ಪರಿಸ್ಥಿತಿಯನ್ನು ಉಲ್ಬಣಗೊಳಿಸಲು ಅಪಾರ ಪ್ರಮಾಣದ ನಕಲಿ ಮತ್ತು ದಾರಿ ತಪ್ಪಿಸುವ ವಿಷಯಗಳನ್ನು ಸೃಷ್ಟಿಸಿ ಹರಡಲಾಗುತ್ತಿರುವುದರಿಂದ, ನೀವು ಎಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ ಎಂದು ದೆಹಲಿ ಯೂನಿರ್ವಸಿಟಿ ತನ್ನ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿತ್ತು.
ಇದನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ರಾಹುಲ್​ ಅವರು, ಪ್ರಜಾಪ್ರಭುತ್ವ ಹಕ್ಕುಗಳನ್ನು ಚಲಾಯಿಸುತ್ತಿರುವ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಲು ನಿಮಗೆಷ್ಟು ಧೈರ್ಯ.ದಯವಿಟ್ಟು ಗಮನಿಸಿ, ಸಮಯ ಬಂದಾಗ ಹೊಣೆಗಾರರಾಗುವವರು ನೀವೇ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್​​ ಗಾಂಧಿ ಕಿಡಿಕಾರಿದ್ದರು, (ಏಜೆನ್ಸೀಸ್).