ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮರಳಿದ ಕುಟುಂಬ
- ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮರಳಿದ ಕುಟುಂಬ
- ಗಂಗಾ ಸ್ನಾನ ಮಾಡಿ ಸನಾತನಿಗಳಾದ ಮುಸ್ಲಿಂ ಪರಿವಾರ
- ಶಂಕರ್ನಾಗಿ ಬದಲಾದ ಮೊಹಮ್ಮದ್ ಶೆಹಜಾದ್
ಹರಿದ್ವಾರ್: ಪಶ್ಚಿಮ ಉತ್ತರಪ್ರದೇಶದ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಕುಟುಂಬವೊಂದು ಹಿಂದೂ ಧರ್ಮಕ್ಕೆ ಮರಳಿರುವ (Ghar Wapsi) ಘಟನೆ ಹರಿದ್ವಾರದಲ್ಲಿ ವರದಿಯಾಗಿದೆ. ಈ ಘಟನೆಯು ಮಂಗಳವಾರ (ಏ.21) ಹರಿದ್ವಾರದ ಚಂಡಿ ಘಾಟ್‌ನ ಬ್ರಹ್ಮಕುಂಡದಲ್ಲಿ ನಡೆದಿದ್ದು, ಪತಿ, ಪತ್ನಿ ಹಾಗೂ ಅವರ ಮೂರು ಮಕ್ಕಳು ಗಂಗಾ ಸ್ನಾನ ಮಾಡಿ ವಿಧಿವತ್ತಾಗಿ ಸನಾತನ ಹಿಂದೂ ಧರ್ಮಕ್ಕೆ ಮರಳಿದ್ದಾರೆ.
ಘರ್ ವಾಪಸಿ ನಂತರ ಹೆಸರು ಬದಲಾವಣೆ
ಪವಿತ್ರ ಗಂಗಾ ಸ್ನಾನದ ಬಳಿಕ ಇಸ್ಲಾಂ ಧರ್ಮದಲ್ಲಿದ್ದಾಗ ಬಳಸುತ್ತಿದ್ದ ಹೆಸರನ್ನು ಸಹ ಬದಲಿಸಲಾಗಿದೆ. ಮೊದಮ್ಮದ್ ಶೆಹಜಾದ್ ಎಂಬ ಹೆಸರನ್ನು ಶಂಕರ್ ಎಂದು ಬದಲಿಸಿಕೊಂಡಿದ್ದರೆ, ಅವನ ಪತ್ನಿ ಸಾವಿತ್ರಿ ಎಂಬ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದಾಳೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಂಕರ್ (ಮೊದಮ್ಮದ್ ಶೆಹಜಾದ್) ನನಗೆ ಶಿವನ ಮೇಲೆ ಅತೀಯಾದ ಭಕ್ತಿ ಮತ್ತು ಹಿಂದೂ ಧರ್ಮದ ಮೇಲೆ ಒಲವಿದ್ದ ಕಾರಣ ಧರ್ಮ ಪರಿವರ್ತನೆ ಆಗಿದ್ದೆನೆ, ಜೊತೆಗೆ ನನ್ನ ಪರಿವಾರವನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತಂದಿದ್ದೆನೆ. ಆದರೆ ಈ ಪ್ರಕ್ರಿಯೆ ಅಷ್ಟು ಸುಲಭವಾಗಿರಲಿಲ್ಲ, ಧರ್ಮ ಬದಲಿಸುತ್ತೇನೆ ಎಂದು ತಿಳಿದಾಗ ಹಲವಾರು ರೀತಿಯಲ್ಲಿ ಒತ್ತಡವನ್ನು ಹೇರಲಾಯಿತು ಎಂದು ಹೇಳಿದ್ದಾರೆ.
ಗಣ್ಯರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮ
ಅಖಿಲ ಭಾರತೀಯ ಸಂತ ಆಶ್ರಮ ಪರಿಷತ್ತಿನ ರಾಮವಿಶಾಲ್ ದಾಸ್ ಮಹಾರಾಜ್, ಶ್ರೀ ಕೃಷ್ಣ ಸನಾತನ ಸೇವಾ ಟ್ರಸ್ಟ್‌ನ ಅರುಣ್ ಕೃಷ್ಣ ಮತ್ತು ಬಾಬಾ ಹಠಯೋಗಿ ಮತ್ತು ಪ್ರಬೋಧಾನಂದ ಗಿರಿ ಮಹಾರಾಜ್ ಅವರಂತಹ ಋಷಿಗಳು ಸೇರಿದಂತೆ ಹಲವಾರು ಧಾರ್ಮಿಕ ವ್ಯಕ್ತಿಗಳ ಸಮ್ಮುಖದಲ್ಲಿ ಈ ಧರ್ಮ ಪತಿವರ್ತನೆ ಕಾರ್ಯಕ್ರಮ ನಡೆದಿದೆ.
ಘರ್ ವಾಪ್ಸಿ ಎಂದ ನೆಟ್ಟಿಗರು!
ಈ ಸುದ್ದಿ ಸೋಷಿಯಲ್ ಮೀಡಿಯಾ ಅಂಗಳವನ್ನು ತಲುಪಿದ ನಂತರ ನೆಟ್ಟಿಗರು ಕಮೆಂಟ್ಗಳ ಸರೋವರವನ್ನೇ ಹರಿಸಿದ್ದಾರೆ. ಭಾರತದಲ್ಲಿರುವ ಪ್ರತಿಯೊಬ್ಬರು ಸನಾತನಿಗಳೇ ಎಂದು ಒಬ್ಬ ಬಳಕೆದಾರ ಹೇಳಿದರೆ, ಇದು ಘರ್ ವಾಪ್ಸಿಗೆ ಉತ್ತಮ ಉದಾಹರಣೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಒಂದು ಕಾಲದಲ್ಲಿ ಬಲವಂತವಾಗಿ ಮತಾಂತಗೊಂಡವರು ಮತ್ತೆ ಹಿಂದೂ ಧರ್ಮವನ್ನು ಸೇರಿಕೊಳ್ಳಬೇಕೆಂದು ಮತ್ತೊಬ್ಬರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ, (ಏಜನ್ಸೀಸ್).