Gen Z Intern Refuses 9 am Court Duty Due To Gym Schedule
- ಜಿನ್ ಜಿ ಕಾರ್ಯ ವೈಖರಿ ಬಗ್ಗೆ ಪೋಸ್ಟ್ ಹಂಚಿಕೊಂಡ ದೆಹಲಿ ಮೂಲದ ವಕೀಲೆ.
- ಕೋರ್ಟ್‌ಗೆ ಬನ್ನಿ ಎಂದಿದ್ದಕ್ಕೆ ಜಿಮ್ಗೆ ಹೋಗ್ಬೇಕು ಎಂದ ಇಂಟರ್ನ್ ಬಗ್ಗೆ ಪೋಸ್ಟ್.
- ಇಂಟರ್ನೆಟ್ನಲ್ಲಿ ಜೆನ್ಜಿಗಳ ಕೆಲಸದ ಬಗ್ಗೆ ಪರ-ವಿರೋಧ ಚರ್ಚೆ.
Gen Z Intern Refuses 9 am Court Duty Due To Gym Schedule: ಕೇಸ್ ವಿಚಾರವಾಗಿ 9 ಗಂಟೆಗೆ ಕೋರ್ಟ್‌ಗೆ ಹಾಜರಾಗು ಎಂದಿದ್ದಕ್ಕೆ ಇಂಟರ್ನ್ವೊಬ್ಬರು ಜಿಮ್ಗೆ ಹೋಗಬೇಕು ಎಂದು ಕಾರಣ ಕೊಟ್ಟಿರುವುದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ನಾನು ಆತನಿಗೆ ಸೀನಿಯರ್ ಆಗಿದ್ದೀನೋ ಅಥವಾ ಆತ ನನಗೋ ಒಂದು ತಿಳಿಯುತ್ತಿಲ್ಲ ಎನ್ನುವುದಾಗಿ ದೆಹಲಿ ಮೂಲದ ವಕೀಲರೊಬ್ಬರು ಬರೆದುಕೊಂಡಿರುವ ಪೋಸ್ಟ್ ವೈರಲ್ ಆಗಿದೆ.
@is_enticing ಎನ್ನುವ ಹೆಸರಿನಲ್ಲಿ ಎಕ್ಸ್ ಖಾತೆ ಬಳಕೆ ಮಾಡುತ್ತಿರುವ ದೆಹಲಿ ಮೂಲದ ವಕೀಲರು, ಜೆನ್ ಜಿ ಸ್ವಭಾವವನ್ನು ಸೋಶಿಯಲ್ ಮೀಡಿಯಾದಲ್ಲಿ ವಿಡಂಬನಾತ್ಮಕವಾಗಿ ಹಂಚಿಕೊಂಡಿದ್ದಾರೆ. ಸದ್ಯ ಅವರ ಈ ಪೋಸ್ಟ್ 2 ಲಕ್ಷದ 78 ಸಾವಿರ ವ್ಯೂವ್ಸ್ ಅನ್ನು ಪಡೆದುಕೊಂಡಿದ್ದು, ಹಲವು ವಕೀಲರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಟ್ವೀಟ್ನಲ್ಲಿ ಹೀಗಿದೆ
ಟನಾಟನ್@is_enticing ಎಕ್ಸ್ ಖಾತೆ ಬಳಕೆದಾರರಾದ ದೆಹಲಿ ಮೂಲದ ವಕೀಲರಾದ ಇವರು ಬರೆದುಕೊಂಡಿದ್ದು ಹೀಗೆ, ಕೆಲಸ ಇದ್ದ ಕಾರಣ ಒಬ್ಬ ಇಂಟರ್ನ್‌ಗೆ ಬೆಳಿಗ್ಗೆ 9 ಗಂಟೆಗೆ ಕೋರ್ಟ್‌ಗೆ ಬರಲು ಹೇಳಿದೆ. ಅವನು ಇಲ್ಲ ಆಗೋಲ್ಲ. ಜಿಮ್ಗೆ ಹೋಗ್ಬೇಕು ಎಂದ. ಆಮೇಲೆ ನಾನೇ ಆ ಕೆಲಸ ಮಾಡಿದೆ. ಆತ ತನ್ನ ಜಿಮ್ ವರ್ಕ್ ಮುಗಿಸಿ, ರೆಸ್ಟ್ ಮಾಡಿದ. ನಾನೊಂದು ವಿನಾಯಿತಿ ಕೊಟ್ಟೆ.ಈ ಸಮಯದಲ್ಲಿ ನನಗೆ ಅನಿಸಿದ್ದು. ಇಲ್ಲಿ ನಾನು ಅವನಿಗೆ ಸೀನಿಯರ್ ಆಗಿದ್ದನೋ ಅಥವಾ ನನಗೆ ಆತ ಕಿರಿಯನೋ ಅಥವಾ ನಾನು ಆತನ ವೈಯಕ್ತಿಕ ಸಹಾಯಕನಾ? ಯಾವುದು ತಿಳಿದಿಲ್ಲ. ಇಂಥ ವಿಚಾರಗಳನ್ನು ಸರಳವಾಗಿ ತೆಗೆದುಕೊಳ್ಳೋಕೆ ಸಾಧ್ಯವಿಲ್ಲ ಎಂದರು.
ವಕೀಲರ ಈ ಪೋಸ್ಟ್ ಇಂಟರ್ನೆಟ್ನಲ್ಲಿ ಸಾಕಷ್ಟು ವೈರಲ್ ಆಯ್ತು. ವೈಯಕ್ತಿಕ ದಿನಚರಿಗಿಂತ ಮೂಲಭೂತ ಕೆಲಸ ಮುಖ್ಯ ಅಲ್ಲ ಅನ್ನೋದನ್ನು ಆ ವ್ಯಕ್ತಿ ತೋರ್ಪಡಿಸಿದ್ದಾರೆ. ಕೆಲವರು ಕೆಲಸದ ಗಂಭೀರತೆ ತಿಳಿದಿಲ್ಲ ಎಂದು ಇಂಟರ್ನ್ ಬಗ್ಗೆ ಮಾತನಾಡಿದರೆ, ಇನ್ನೂ ಕೆಲವರು ಆತನ ನಡೆ ಸರಿಯಿದೆ ಎಂದಿದ್ದಾರೆ.
ನೆಟ್ಟಿಗರು ಏನೆಂದು ಕಾಮೆಂಟ್ ಮಾಡಿದ್ದಾರೆ?
ಅಡ್ವೋಕೇಟ್ ರೋಹಿತ್ ಮದಸ್ಸೇರಿ ಎನ್ನುವವರು ಕಾಮೆಂಟ್ ಮಾಡಿದ್ದು, ಒಮ್ಮೆ ನನಗೆ ನನ್ನ ಜೂನಿಯರ್, ಒಂದೇ ಕೋರ್ಟ್ನಲ್ಲಿ ಕೆಲಸ ನಿಯೋಜಿಸುವಂತೆ ತಾಕೀತು ಮಾಡಿದ್ದ.ನನ್ನ ಪ್ರೀತಿಯ ಜೂನಿಯರ್ ನ್ಯಾಯಾಲಯಕ್ಕೆ ಹೋಗಲು ಸಾಧ್ಯವಾಗುವಂತೆ ಆ ನಿರ್ದಿಷ್ಟ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಹುಡುಕಲು ಶ್ರಮಿಸಿದೆ ಎಂದು ಬರೆದುಕೊಂಡಿದ್ದಾರೆ.
ಪಾಂಖಿ ಹರ್ಮಿಲಾಪಿ ಎನ್ನುವವರು ಕಾಮೆಂಟ್ ಮಾಡಿದ್ದು, ಇದೇನು ರೇಜ್ ಬೇಟ್ ಆ? ನೀವು ಆ ಇಂಟರ್ನ್‌ಗೆ ಬೆಳಿಗ್ಗೆ ಬರಲು ಹಣ ನೀಡುತ್ತಿದ್ದಾರಾ? ಹೌದು, ನೀವು ವಿನಾಯಿತಿ ಮಾಡುತ್ತಿರುವುದಕ್ಕೆ ನೀವು ಸಂತೋಷಪಡಬೇಕು ಎಂದು ಖಾರವಾಗಿ ಉತ್ತರ ಕೊಟ್ಟಿದ್ದಾರೆ. ಇದಕ್ಕೆ ವಕೀಲೆ ಮಾತನಾಡಿದ್ದು ಸಮಸ್ಯೆ ಜಿಮ್ಗೆ ಹೋಗೋದಲ್ಲ, ಬೇಸಿಕ್ ಆಗಿ ಕೆಲಸ ಮಾಡುವ ಬಗ್ಗೆ ಮಾಹಿತಿ ಇರಬೇಕು ಎಂದು ಹೇಳಿದ್ದಾರೆ, (ಏಜೆನ್ಸೀಸ್).