Lucknow dowry death 
ದೇಶ

7 ಲಕ್ಷ ನಗದು, ಗೃಹೋಪಯೋಗಿ ವಸ್ತು ಗಿಫ್ಟ್ ಕೊಟ್ಟರೂ, ಕಾರು ಬೇಕೆನ್ನುವ ದುರಾಸೆ; ಕಿರುಕುಳಕ್ಕೆ ಬೇಸತ್ತು ಇನ್‌ಫ್ಲುಯೆನ್ಸರ್ ಆತ್ಮಹತ್ಯೆ?..Lucknow

ಪ್ರಮುಖ ಮುಖ್ಯಾಂಶಗಳು

  • ವರದಕ್ಷಿಣೆ ಕಿರುಕುಳ ಇನ್‌ಫ್ಲುಯೆನ್ಸರ್ ಮಾನ್ಸಿ​ ಆತ್ಮಹತ್ಯೆ
  • 7 ಲಕ್ಷ ರೂಪಾಯಿ ವರದಕ್ಷಿಣೆ ನೀಡಿದರೂ ಕಾರು ನೀಡುವಂತೆ ಒತ್ತಾಯ ಆರೋಪ
  • ನೇಣು ಬಿಗಿದ ಸ್ಥಿತಿಯಲ್ಲಿ ಶ್ವೇತಾ ಶವ ಪತ್ತೆ, ಇದು ಕೊಲೆ ಎಂದು ಪೋಷಕರ ಆರೋಪ.
ಲಕ್ನೋ: ಕಳೆದ ಒಂದೂವರೆ ವರ್ಷದ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ 26 ವರ್ಷದ ಇನ್ಫ್ಲುಯೆನ್ಸರ್  ಮಾನ್ಸಿ ಎಂಬಾಕೆ, ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಬೆಳಕಿಗೆ ಬಂದಿದೆ. ಇದು ಕೊಲೆ, ಆತ್ಮಹತ್ಯೆಯಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.
ಕಾನ್ಪುರದ ನಿವಾಸಿ ಮಾನ್ಸಿ ಡಿಸೆಂಬರ್  2024ರಲ್ಲಿ ಸಾಗರ್ ರಜಪೂತ್ ಅವರನ್ನು ವಿವಾಹವಾದರು. ಇಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರು, ರಜಪೂತ್ ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 8 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ.

ಕಾರು ಬೇಕೆಂದು ಹಠ

ಮಾನ್ಸಿ ಕುಟುಂಬ ಮದುವೆ ಸಂಭ್ರಮದಲ್ಲಿ  7 ಲಕ್ಷ ರೂಪಾಯಿ ನಗದು ಮತ್ತು ಇತರ ಗೃಹೋಪಯೋಗಿ ವಸ್ತುಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಹೀಗಿದ್ದರೂ ಸಹ  ರಜಪೂತ್ ಅವರ ಕುಟುಂಬವು ಇದರಿಂದ ತೃಪ್ತರಾಗಿರಲಿಲ್ಲ. ಕಳೆದ ಕೆಲವು ದಿನದಿಂದ ಕಾರು ಬೇಕೆಂದು ಹಠ ಹಿಡಿದಿದ್ದರು. ವರದಕ್ಷಿಣೆ ತಂದಿಲ್ಲ ಎಂದು ನಿಂದಿಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.

ವರದಕ್ಷಿಣೆ ಕಿರುಕುಳ

ಕಾರಿನ ಬೇಡಿಕೆ ಈಡೇರಿಸಿಲ್ಲ ಎಂದು  ಮಾನ್ಸಿಯನ್ನು ದೈಹಿಕ ಮತ್ತು ಮಾನಸಿಕವಾಗಿ ಹಿಂಸಿದ್ದಾರೆ. ಚಿತ್ರಹಿಂಸೆ ನೀಡುತ್ತಿದ್ದ ಬಗ್ಗೆ ಹೇಳಿದ್ದಳು. ಮಧ್ಯಸ್ಥಿಕೆ ವಹಿಸಲು ಲಕ್ನೋಗೆ ಹಲವಾರು ಬಾರಿ ಹೋಗಿದ್ದೆವು. ಶನಿವಾರ,  ಮಗಳು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾಳೆಂದು ಮಾಹಿತಿ ಕೊಟ್ಟರು. ಆದರೆ ಇದು ಕೊಲೆಯಾಗಿದ್ದು, ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲಾಗಿದೆ ಎಂದು ಆರೋಪಿಸಿದರು. 
ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.   ಸಾಗರ್ ರಜಪೂತ್, ಸಂತ್ರಸ್ತೆಯ ಮಾವ ರಾಜೇಶ್, ಸೋದರ ಮಾವ ಅನು, ಅತ್ತಿಗೆ ಬರ್ಖಾ ಮತ್ತು ಚಾಂದನಿ ಮತ್ತು ತಂದೆಯ ಅತ್ತೆ ಆಶಾ ಸೇರಿದ್ದಾರೆ. ರಜಪೂತ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸಲಾಗುತ್ತಿದೆ, (ಏಜೆನ್ಸೀಸ್).