ಮುಂಬೈ ಏರ್‌ಪೋರ್ಟ್‌ನಲ್ಲಿ 11 ಕೆಜಿ ಡ್ರಗ್ಸ್ ಸಮೇತ ಸಿಕ್ಕಿಬಿದ್ದ ಕೇರಳದ ಖ್ಯಾತ ಮಾಡೆಲ್ ಹರ್ಷಾ ಸನ್ನಿ 
ದೇಶ

ಬ್ಯಾಂಕಾಕ್‌ನಿಂದ ಮುಂಬೈಗೆ ಬಂದ 11 ಕೆಜಿ ಗಾಂಜಾ! ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಕೇರಳ ಮಾಡೆಲ್ ಹರ್ಷಾ ಸನ್ನಿ!Harsha Sunny Ganja Smuggling

ಪ್ರಮುಖ ಮುಖ್ಯಾಂಶಗಳು

  • ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಬೇಟೆ!
  • ಬ್ಯಾಂಕಾಕ್‌ನಿಂದ ಮುಂಬೈಗೆ ಬಂತು ಬರೋಬ್ಬರಿ 11.82 ಕೋಟಿ ರೂ. ಮೌಲ್ಯದ ಗಾಂಜಾ!
  • ಮುಂಬೈ ಏರ್‌ಪೋರ್ಟ್‌ನಲ್ಲಿ 11 ಕೆಜಿ ಡ್ರಗ್ಸ್ ಸಮೇತ ಸಿಕ್ಕಿಬಿದ್ದ ಕೇರಳದ ಖ್ಯಾತ ಮಾಡೆಲ್ ಹರ್ಷಾ ಸನ್ನಿ
ಮುಂಬೈ: ಮಾಡೆಲ್​ ಹಾಗೂ ಮಿಸ್ಟ್ರೆಸ್​ ಕೇರಳ ರನ್ನರ್​ ಅಫ್​ ಆಗಿದ್ದ ಹರ್ಷಾ ಸನ್ನಿ (Harsha Sunny Ganja Smuggling) ಯನ್ನು ಬ್ಯಾಂಕಾಕ್​ನಿಂದ ಗಾಂಜಾ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಆರೋಪದಲ್ಲಿ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್​ ಅಧಿಕಾರಿಗಳು ಬಂಧಿಸಿರುವುದಾಗಿ ವರದಿಯಾಗಿದೆ.
ಮಾಹಿತಿ ಪ್ರಕಾರ, ಹರ್ಷಾ ಸನ್ನಿ ಸುಮಾರು 11 ಕೆ.ಜಿ ಗಾಂಜಾವನ್ನು ಸ್ಮಗಲ್​ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದು, ಇದರ ಅಂದಾಜು ಮೌಲ್ಯ ಸುಮಾರು 11.82 ಕೋಟಿ ಎಂದು ಹೇಳಲಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಇಕೆಯ ವರ್ತನೆ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದ್ದು, ತಪಾಸಣೆ ನಡೆಸಿದಾಗ ಈ ರಹಸ್ಯ ಬಯಲಾಗಿದೆ.

ಬ್ಯಾಗ್​ ತುಂಬಾ ಗಾಂಜಾ!

ಬ್ಯಾಂಕಾಕ್​ಗೆ ತೆರಳಿದ್ದ ಹರ್ಷಾ ಸನ್ನಿ ಜೂನ್​ 10, 11 ರ ಮುಂಜಾನೆ 4 ಗಂಟೆಗೆ TG-351 ಏರ್​ ಇಂಡಿಯಾ ವಿಮಾನದ ಮೂಲಕ ಮುಂಬೈ ತಲುಪಿದ್ದಳು.
ಇಕೆಯ ವರ್ತನೆಯಿಂದ ಅನುಮಾನ ಮೂಡಿದ ಅಧಿಕಾರಿಗಳು ಹರ್ಷಾಳ ಬ್ಯಾಗ್​ನ್ನು ಪರಿಶೀಲಿಸಿದಾಗ ಟ್ರಾಲಿ ಬ್ಯಾಗ್​ನಲ್ಲಿ ಸುಮಾರು 12 ಗಾಂಜಾ ಪೊಟ್ಟಣಗಳು ಕಂಡುಬಂದಿವೆ. ಇದನ್ನು ವಶಕ್ಕೆ ಪಡೆದ ಅಧಿಕಾರಿಗಳು ಜಫ್ತಿ ಮಾಡಿರುವುದು ಗಾಂಜವೇ? ಅಥವಾ ಇನ್ನಾವುದೇ ಸಸ್ಯವೇ? ಎಂದು ಪರಿಶೀಲನೆ ಮಾಡಿದ್ದಾರೆ. ಪರೀಕ್ಷೆ ನಂತರ ಇದು ಗಾಂಜಾ ಎಂದು ತಿಳಿದು ಬಂದಿದ್ದು, ಹರ್ಷಾ ಸನ್ನಿ ಮೇಲೆ ಎನ್​ಡಿಪಿಎನ್​ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಮುಂದುವರೆದ ತನಿಖೆ

ಪ್ರಕರಣ ದಾಖಲಾಗುತ್ತಿದ್ದಂತೆ ಹರ್ಷಾ ಸನ್ನಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಪ್ರಕರಣ ಇನ್ನು ಪ್ರಾಥಮಿಕ ತನಿಖೆಯಲ್ಲಿದ್ದು, ಇಕೆಯ ಕಾಲ್​ ಡಿಟೇಲ್ಸ್​, ವಿಮಾನ ಪ್ರಯಾಣದ ಮಾಹಿತಿಯನ್ನು ಕಲೆ ಹಾಕುತ್ತಿದ್ದು, ಇವಳಿಗೆ ಯಾವುದಾದರೂ ಸ್ಮಗ್ಲಿಂಗ್​ ಜಾಲದೊಂದಿದೆ ಸಂಬಂಧವಿದೆಯೇ ಎಂದು ಪರಿಶೀಲಿಸಲಾಗುತ್ತಿದೆ.
ಮಾಡೆಲ್​ ಹೇಳಿಕೆ ಪ್ರಕಾರ, ಆಕೆಗೆ ವಿಮಾನದಲ್ಲಿ ಪರಿಚಯವಾದ ಒಬ್ಬರು, ಈ ಚೀಲವನ್ನು ಕೊಟ್ಟರು ನನಗೆ ಇದಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾಳೆ. ಈ ಹಿನ್ನಲೆಯಲ್ಲಿ ಸಹ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ,(ಏಜನ್ಸೀಸ್​).