Ganja Addiction 
ದೇಶ

ಗಾಂಜಾ ವ್ಯಸನದಿಂದಾಗಿ ಕೆಲಸಾನೇ ಬಿಟ್ಟ, ಹಣವಿಲ್ಲದೆ ಗಾಂಜಾ ಬೆಳೆದ!; ಹೈದರಾಬಾದ್​ ಟೆಕ್ಕಿ ಅಂದರ್​​..Ganja Addiction

ಸಿಎಚ್​​ ಶಶಿಧರ್​​(37 ) ಗಾಂಜಾ ಬೆಳೆದ ಆರೋಪಿ ಎಂದು ಗುರುತಿಸಲಾಗಿದೆ. ಮದ್ಯ ಮತ್ತು ಗಾಂಜಾ ಸೇವನೆಯ ವ್ಯಸನಿಯಾಗಿದ್ದ ಈತ ಮನೆಯಲ್ಲಿಯೇ ಗಾಂಜಾ ಬೆಳೆಸಿಕೊಂಡಿದ್ದ ಖಚಿತ ಮಾಹಿತಿ ಮತ್ತು ಸುಳಿವು ದೊರೆತ ಹಿನ್ನೆಲೆಯಲ್ಲಿ ರಂಗಾರೆಡ್ಡಿ ಜಾರಿ 'ಎ' ತಂಡವು ದಾಳಿ ನಡೆಸಿ 17 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದೆ.

ಗಾಂಜಾ ಗಿಡ ವಶ

ಗಾಂಜಾ ಗಿಡಗಳು ಮೂರು ಮೀಟರ್ ಎತ್ತರಕ್ಕೆ ಬೆಳೆದಿದ್ದು, ಕೆಲವು ಹೂ ಬಿಡಲು ಆರಂಭಿಸಿದ್ದವು. ಈ ಗಿಡಗಳಿಂದ ಸುಮಾರು 10 ಕೆಜಿ ಇಳುವರಿ ಬರಲಿದೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಗಾಂಜಾ ಬೆಳೆದ ಟೆಕ್ಕಿ

ಸಿಎಚ್​​ ಶಶಿಧರ್​​ ಸಾಫ್ಟ್​ವೇರ್​ ಉದ್ಯೋಗಿ. ಆತನಿಗೆ ಬರುತ್ತಿದ್ದ ಸಂಬಳವನ್ನು ಗಾಂಜಾಕ್ಕೆ ವ್ಯಯಿಸುತ್ತಿದ್ದನ್ನು. ತೀರ ವ್ಯಸನಿಯಾಗಿದ್ದ ಅವನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಆದರೆ, ಗಾಂಜಾಕ್ಕೆ ಒಗ್ಗಿಕೊಂಡಿದ್ದರಿಂದ ಅವನಿಗೆ ಬರುಬರುತ್ತಾ ಹಣವಿರಲಿಲ್ಲ. ಹೀಗಾಗಿ ಅದರ ಗಿಡವನ್ನೇ ಮನೆ ಬಳಿ ಬೆಳೆಯಲು ಆರಂಭಿಸಿದ ಎನ್ನಲಾಗಿದೆ.

ಆತ ಗಾಂಜಾ ಬೆಳೆದಿದ್ದು ಹೇಗೆ?

ಈ ಹಿಂದೆ ಶಶಿಧರ್​ ಖರೀದಿಸಿದ್ದ ಗಾಂಜಾದಲ್ಲಿರುವ ಅದರ ಬೀಜಗಳನ್ನು ಹೊರತೆಗೆದು ಅದನ್ನೇ ಹೂ ಕುಂಡದಲ್ಲಿ ಹಾಕಿ ಬೆಳೆಯಲು ಆರಂಭಿಸಿದ್ದ. ಅಷ್ಟೇ ಅಲ್ಲದೇ ಕಳ್ಳಸಾಗಣೆಯನ್ನು ಮಾಡುತ್ತಿದ್ದ ಎಂದು ಘಟ್ಕೇಸರ್ ವ್ಯಾಪ್ತಿಯ ಅಬಕಾರಿ ಸಬ್-ಇನ್ಸ್‌ಪೆಕ್ಟರ್ ಸಂಗೀತಾ ರೆಡ್ಡಿ ಹೇಳಿದರು.

ಬಿಟೆಕ್ ಸ್ಟೂಡೆಂಟ್ಸ್​ ಬಂಧನ

ಅಬಕಾರಿ ಇಲಾಖೆ ಅಧಿಕಾರಿಗಳ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಮೆಡಿಪಲ್ಲಿಯಲ್ಲಿ ಇಬ್ಬರು ಬಿಟೆಕ್ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಆರೋಪಿಗಳಾದ ಬಂಡಿ ಅರುಣ್ ಕುಮಾರ್ ಮತ್ತು ಬಿ ಆಶಿಶ್ ಬಳಿ 480 ಗ್ರಾಂ ಗಾಂಜಾ ಪತ್ತೆಯಾಗಿದೆ.ಇಬ್ಬರು ಆರೋಪಿಗಳನ್ನು ಘಟ್ಕೇಸರ್ ಅಬಕಾರಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ, (ಏಜೆನ್ಸೀಸ್).