ರುದ್ರಾಕ್ಷದ ಮಣಿಗಳಿಂದ ಅಲಂಕರಿಸಿರುವ ಗಣೇಶ ಮೂರ್ತಿ 
ದೇಶ

ರುದ್ರಾಕ್ಷಿಯಲ್ಲಿ ಅರಳಿದ ಗಣಪ; ಗುಲಾಬಿ ಧೋತಿಯಲ್ಲಿ ಮಿಂಚುವ ‘ಏಕದಂತ’ | Rudraksha Ganesha

Ganesh Chaturthi: 

ಮುಂಬೈನಲ್ಲಿ

 

ಗಣೇಶ ಚತುರ್ಥಿ ಅಂದ್ರೆ ಸಂಭ್ರಮಕ್ಕೆ ಎಲ್ಲೆಯೇ ಇರಲ್ಲ. ಹಬ್ಬಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಇರುವಾಗಲೇ ನಗರದ ಗಲ್ಲಿ ಗಲ್ಲಿಗಳಲ್ಲಿ ಗೌರಿಪುತ್ರನ ಆಗಮನ ಶುರುವಾಗಿದೆ. ಸಾರ್ವಜನಿಕ ಗಣಪತಿ ಮಂಡಳಿಗಳಲ್ಲೂ ಹಬ್ಬದ ತಯಾರಿ ಜೋರಾಗಿದ್ದು, ವಿಭಿನ್ನ ಥೀಮ್‌ಗಳು ಹಾಗೂ ಕಲಾತ್ಮಕ ಮೂರ್ತಿಗಳ ಮೂಲಕ ಗಮನ ಸೆಳೆಯುವ ಪ್ರಯತ್ನ ನಡೆಯುತ್ತಿದೆ.

ಮುಂಬೈನ ಕೊಲಾಬಾ ಚಾ ಸಾಮ್ರಾಟ್ ಗಣಪತಿ ಮಂಡಳಿyu 

ಪ್ರತಿ ವರ್ಷವೂ ತನ್ನದೇ ಆದ ವಿಶೇಷತೆಯಿಂದ ಗಮನ ಸೆಳೆಯುತ್ತದೆ. ಈ ಬಾರಿಯೂ ಮಂಡಳಿ ರುದ್ರಾಕ್ಷಿ ಮಣಿಗಳಿಂದ ಅಲಂಕರಿಸಿದ ವಿಶೇಷ ಗಣಪತಿ ಮೂರ್ತಿಯನ್ನು ಸಿದ್ಧಪಡಿಸಿದೆ. ಮೂರ್ತಿಯ ವಿಭಿನ್ನ ರೂಪ ಇದೀಗ ಸಾಮಾಜಿಕ ಜಾಲತಾಣದಲ್ಲೂ ಸದ್ದು ಮಾಡುತ್ತಿದೆ.
https://www.instagram.com/reel/DctHdavtikb/?utm_source=ig_web_copy_link&igsi=MzRlODBiNWFlZA==

ರುದ್ರಾಕ್ಷಿಯಿಂದಲೇ ಮಾಡಿದ ಗಣಪ

ವೈರಲ್​ ವಿಡಿಯೋಗಳಲ್ಲಿ ಕಾಣಿಸುವಂತೆ, ಬಪ್ಪನ ಮೂರ್ತಿಯನ್ನು ತಲೆ-ಕಾಲಿನವರೆಗೂ ರುದ್ರಾಕ್ಷಿ ಮಣಿಗಳಿಂದ ಅಲಂಕರಿಸಲಾಗಿದೆ. ರುದ್ರಾಕ್ಷಿಗಳಿಂದಾಗಿ ಮೂರ್ತಿಗೆ ಗಾಢ ಹಾಗೂ ವಿಭಿನ್ನವಾದ ಲುಕ್​ ಸಿಕ್ಕಿದೆ. ರುದ್ರಾಕ್ಷಿಯನ್ನು ಸಾಮಾನ್ಯವಾಗಿ ಆಧ್ಯಾತ್ಮಿಕತೆ ಮತ್ತು ಭಕ್ತಿಯ ಸಂಕೇತವಾಗಿ ನೋಡಲಾಗುತ್ತದೆ. ಹೀಗಾಗಿ ಇಡೀ ಮೂರ್ತಿಯನ್ನೇ ರುದ್ರಾಕ್ಷದಿಂದ ತಯಾರಿಸಿದ್ದು ಗಮನ ಸೆಳೆಯುತ್ತಿದೆ.

ಚಿನ್ನದ ಕಿರೀಟ ಮತ್ತು ಆಭರಣಗಳ ಝಲಕ್

ರುದ್ರಾಕ್ಷಿಯ ಗಾಢ ಬಣ್ಣದ ಜತೆ ಗಣೇಶನ ತಲೆಯ ಮೇಲಿರುವ ದೊಡ್ಡ ಚಿನ್ನದ ಕಿರೀಟ ಝಗಮಗಿಸುತ್ತದೆ. ಸಾಂಪ್ರದಾಯಿಕ ಆಭರಣಗಳಿಂದ ವಕ್ರತುಂಡನನ್ನು ಅಲಂಕರಿಸಲಾಗಿದ್ದು, ಮೂರ್ತಿಗೆ ಮತ್ತಷ್ಟು ರಾಜಕಳೆ ಬಂದಿದೆ. ಇನ್ನು ಶೈನಿಂಗ್‌ ಗುಲಾಬಿ ಬಣ್ಣದ ಧೋತಿ ಮೂರ್ತಿಯ ಅಂದವನ್ನು ಹೆಚ್ಚಿಸಿದ್ದು, ಗಣಪತಿ ಇನ್ನಷ್ಟು ಆಕರ್ಷಕವಾಗಿ ಕಾಣುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಮೆಚ್ಚುಗೆ

ಕೊಲಾಬಾ ಚಾ ಸಾಮ್ರಾಟ್ ಮಂಡಳಿ ಹಂಚಿಕೊಂಡಿರುವ ಗಣಪತಿ ಮೂರ್ತಿಯ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವಿಭಿನ್ನ ಕಲ್ಪನೆ ಹಾಗೂ ಸಾಂಪ್ರದಾಯಿಕ ಅಂಶಗಳನ್ನು ಒಟ್ಟಿಗೆ ಸೇರಿಸಿರುವ ಈ ಮೂರ್ತಿಯನ್ನು ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿ ವರ್ಷ ಮುಂಬೈನ ಗಣೇಶೋತ್ಸವದಲ್ಲಿ ಹಲವು ಗಣಪತಿ ಮಂಡಳಿಗಳು ವಿಶಿಷ್ಟ ಮೂರ್ತಿಗಳು ಹಾಗೂ ಭರ್ಜರಿ ಪೆಂಡಾಲ್‌ಗಳ ಮೂಲಕ ಜನರ ಗಮನ ಸೆಳೆಯುತ್ತವೆ. ಈ ಬಾರಿ ರುದ್ರಾಕ್ಷಿ ಗಣಪ ಕೂಡ ಆ ಸಾಲಿಗೆ ಸೇರಿದ್ದಾನೆ. ಹಬ್ಬದ ಆರಂಭಕ್ಕೂ ಮುನ್ನವೇ ಈ ವಿಭಿನ್ನ ಮೂರ್ತಿ ಭಕ್ತರಲ್ಲಿ ಕುತೂಹಲ ಮೂಡಿಸಿದೆ.(ಏಜೆನ್ಸೀಸ್​).