GautamGambhir  
ದೇಶ

ಟೀಮ್ ಇಂಡಿಯಾ ಕೋಚ್ ಹುದ್ದೆಗೆ ಗಂಭೀರ್ ಗುಡ್‌ಬೈ? RR ನಿಂದ ಬಂತು ಬಂಪರ್ ಆಫರ್!

ನವದೆಹಲಿ: ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ಅವರಿಗೆ ಐಪಿಎಲ್ ಫ್ರಾಂಚೈಸಿ ರಾಜಸ್ಥಾನ್ ರಾಯಲ್ಸ್ (RR) ಅತ್ಯಂತ ಆಕರ್ಷಕ ಆಫರ್ ನೀಡಿದೆ ಎಂಬ ಸುದ್ದಿಈಗ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

2008ರ ಚಾಂಪಿಯನ್ಸ್ತಂಡವಾದ ರಾಜಸ್ಥಾನ್ ರಾಯಲ್ಸ್, ಗಂಭೀರ್ ಅವರನ್ನು ತಂಡದ ಸಿಇಒ (CEO), ಮೆಂಟರ್ ಹಾಗೂ ಪಾಲುದಾರ(Partner) ಆಗಿ ಬರುವಂತೆ ಆಹ್ವಾನಿಸಿದೆ ಎಂದು ಮಂಗಳವಾರ ವರದಿಯಾಗಿದೆ.

ರಾಜಸ್ಥಾನ್ರಾಯಲ್ಸ್ ನೀಡಿದ ಆಫರ್ ಏನು?

ದೈನಿಕ ಜಾಗರಣ್ವರದಿಯ ಪ್ರಕಾರ, ರಾಜಸ್ಥಾನ್ ರಾಯಲ್ಸ್ ತಂಡದ ಮಾಲೀಕತ್ವದಲ್ಲಿ ಬದಲಾವಣೆಗಳಾಗುತ್ತಿವೆ. ಹೊಸದಾಗಿ ಸೇರ್ಪಡೆಯಾಗಲಿರುವಮೂವರು ಪಾಲುದಾರರಲ್ಲಿ ಒಬ್ಬರು ಗೌತಮ್ ಗಂಭೀರ್ ಅವರಿಗೆ ಫ್ರಾಂಚೈಸಿಯ ಶೇ. 2 ರಿಂದ 3 ರಷ್ಟು ಷೇರುಗಳನ್ನು(Equity Stake) ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಗಂಭೀರ್ ಅವರುಆಟಗಾರನಾಗಿ ಮತ್ತು ಮಾರ್ಗದರ್ಶಕನಾಗಿ ಐಪಿಎಲ್‌ನಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. ಕೆಕೆಆರ್(KKR) ತಂಡದ ಮೂರು ಟ್ರೋಫಿ ಗೆಲುವಿನಲ್ಲಿ (ಎರಡು ಬಾರಿ ನಾಯಕನಾಗಿ, ಒಂದು ಬಾರಿ ಮೆಂಟರ್ ಆಗಿ) ಅವರಪಾತ್ರ ದೊಡ್ಡದಿದೆ. ಲಕ್ನೋ ಸೂಪರ್ ಜೈಂಟ್ಸ್ ಕೂಡ ಇವರ ಮಾರ್ಗದರ್ಶನದಲ್ಲಿ ಸತತ ಎರಡು ಬಾರಿ ಪ್ಲೇಆಫ್ತಲುಪಿತ್ತು.

ಗಂಭೀರ್ ಈಆಫರ್ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಏಕೆ?

ರಾಜಸ್ಥಾನ್ ರಾಯಲ್ಸ್ಆಫರ್ ಎಷ್ಟೇ ದೊಡ್ಡದಾಗಿದ್ದರೂ, ಗಂಭೀರ್ ಸದ್ಯಕ್ಕೆ ಅದನ್ನು ಒಪ್ಪಿಕೊಳ್ಳುವುದು ಅಸಾಧ್ಯ. ಇದಕ್ಕೆಮುಖ್ಯ ಕಾರಣ 'ಹಿತಾಸಕ್ತಿ ಸಂಘರ್ಷ' (Conflict of Interest).

ಸುಪ್ರೀಂಕೋರ್ಟ್ ಮತ್ತು ಲೋಧಾ ಸಮಿತಿ ನಿಯಮ:ಲೋಧಾ ಸಮಿತಿಯ ಶಿಫಾರಸಿನ ಪ್ರಕಾರ, ಯಾವುದೇ ವ್ಯಕ್ತಿ ಏಕಕಾಲದಲ್ಲಿ ಭಾರತೀಯ ರಾಷ್ಟ್ರೀಯ ತಂಡದ ಹುದ್ದೆಮತ್ತು ಐಪಿಎಲ್ ಫ್ರಾಂಚೈಸಿಯ ಹುದ್ದೆಯನ್ನು (ಮೆಂಟರ್, ಪಾರ್ಟ್ನರ್ ಅಥವಾ ಸಲಹೆಗಾರ) ಅಲಂಕರಿಸುವಂತಿಲ್ಲ.ಒಂದುವೇಳೆ ಗಂಭೀರ್ ರಾಜಸ್ಥಾನ್ ರಾಯಲ್ಸ್‌ನ ಆಫರ್ ಒಪ್ಪಿಕೊಂಡರೆ, ಅವರು ಕೂಡಲೇ ಭಾರತ ತಂಡದ ಮುಖ್ಯ ಕೋಚ್ಹುದ್ದೆಗೆ ರಾಜೀನಾಮೆ ನೀಡಬೇಕಾಗುತ್ತದೆ.

ಟೀಮ್ ಇಂಡಿಯಾಮೇಲೆ ಗಂಭೀರ್ ಬದ್ಧತೆ

ವರದಿಗಳ ಪ್ರಕಾರ,ಗಂಭೀರ್ ಅವರು ಭಾರತ ತಂಡದೊಂದಿಗೆ 2027ರ ಏಕದಿನ ವಿಶ್ವಕಪ್‌ವರೆಗೂ ಒಪ್ಪಂದ ಮಾಡಿಕೊಂಡಿದ್ದಾರೆ. ಪ್ರಸ್ತುತನಡೆಯುತ್ತಿರುವ 2026ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವು ಈಗಾಗಲೇ ಸೂಪರ್-8 ಹಂತಕ್ಕೆ ಅರ್ಹತೆಪಡೆದಿದ್ದು, ತಂಡದ ಗೆಲುವಿಗಾಗಿ ಗಂಭೀರ್ ಶ್ರಮಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, 2028ರ ಲಾಸ್ ಏಂಜಲೀಸ್ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಯಾಗಲಿರುವ ಸಂದರ್ಭದಲ್ಲೂ ಅವರೇ ತಂಡದ ನಾಯಕತ್ವ (ಕೋಚ್ ಆಗಿ)ವಹಿಸುವ ನಿರೀಕ್ಷೆಯಿದೆ.ಹೀಗಾಗಿ, ಗಂಭೀರ್ ದೇಶದ ಸೇವೆಯನ್ನು ಬಿಟ್ಟು ಐಪಿಎಲ್ ಸೇರುವ ಸಾಧ್ಯತೆ ತೀರಾಕಡಿಮೆ ಎನ್ನಲಾಗಿದೆ,(ಏಜೆನ್ಸೀಸ್).