- ಜಂತರ್ ಮಂತರ್ನಲ್ಲಿ ಮತ್ತೆ ಭುಗಿಲೆದ್ದ ಸಿಜೆಪಿ ಬೆಂಬಲಿಗರ ಆಕ್ರೋಶ
- ದೆಹಲಿ ಪೊಲೀಸರ ಮೇಲೆ ಬಾಟಲಿ, ಕಲ್ಲು ತೂರಾಟ
ನವದೆಹಲಿ: ಸ್ವಲ್ಪ ಹತೋಟಿಗೆ ಬಂದಿದ್ದ ಪರಿಸ್ಥಿತಿ ಈಗ ಮತ್ತೆ ಕೈಮೀರಿ ಹೋಗಿದ್ದು, ಜಂತರ್ ಮಂತರ್ ಬಳಿ ಸಿಜೆಪಿ ಬೆಂಬಲಿಗರು ಏಕಾಏಕಿ ದೆಹಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಬೆನ್ನಲ್ಲೇ ಅಶ್ರುವಾಯು ಶೆಲ್‌ಗಳನ್ನು ಹಾರಿಸಲಾಗಿದೆ. ಇದೇ ವೇಳೆ, ಓರ್ವ ಪೊಲೀಸ್ ಅಧಿಕಾರಿಗೆ ಗಂಭೀರವಾಗಿ ಪೆಟ್ಟು ಬಿದ್ದಿದೆ.
'ದಿ ಸ್ಟೇಟ್ಸ್ಮನ್' ವರದಿ ಪ್ರಕಾರ, ಸ್ಥಳದಲ್ಲಿ ಜಮಾಯಿಸಿದ್ದ ಸಿಜೆಪಿ ಕಾರ್ಯಕರ್ತರು ಎನ್ನಲಾದ ಗುಂಪಿನಿಂದ ಹಿಂಸಾಚಾರ ಭುಗಿಲೆದ್ದಿದೆ. ಪಾರ್ಕ್ ಹೋಟೆಲ್ ಬಳಿ ಪೊಲೀಸರನ್ನು ಬೆನ್ನಟ್ಟಿದ ಯುವಕರು, ಕಲ್ಲುಗಳನ್ನು ತೂರಿ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ, ಇಬ್ಬರು ಪೊಲೀಸರು ಗಾಯಗೊಂಡಿದ್ದಾಗಿ ವರದಿಯಾಗಿದೆ.
ಘಟನೆಯ ಕೆಲವು ವಿಡಿಯೋಗಳು ಹೊರಬಿದ್ದಿದ್ದು, ಪ್ರತಿಭಟನಾಕಾರರು ದೊಣ್ಣೆ, ಕೋಲುಗಳನ್ನು ಹಿಡಿದು ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ. ಈ ಮಧ್ಯೆ, ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಿಡಿಯೋ ಮುಖಾಂತರ ಯಾವುದೇ ದುಷ್ಕೃತ್ಯ ನಡೆಯದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.