ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್
- ದ್ವೇಷ ಭಾಷಣ ಪ್ರಕರಣ
- ಸ್ವಾತಂತ್ರ್ಯ ಹೋರಾಟಗಾರರು ಗುಂಡಿಗೆ ಎದೆಯೊಡ್ಡಿದ್ದರು, ನೀವು ಮೊಟ್ಟೆಗೆ ಹೆದರಿದ್ರಾ? ಸುಪ್ರೀಂ ತರಾಟೆ
- ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್
ನವದೆಹಲಿ: 2026 ರಲ್ಲಿ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಿಚಾರಣೆಗೆ ತಾವು ಖುದ್ದಾಗಿ ಹಾಜರಾಗಲೂ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಟಿಎಂಸಿ ಸಂಸದೆ, ಮಹುವಾ ಮೊಯಿತ್ರಾ ಅವರಿಗೆ ಸರ್ವೋಚ್ಛ (Supreme Court on Mahua Moitra) ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ.
ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಕತ್ತಾ ನ್ಯಾಯಾಲಯ, ಸಂಸದೆ ಪೊಲೀಸ್ ವಿಚಾರಣೆಗೆ ವಿಡಿಯೋ ಕಾಲ್ ಮೂಲಕವಲ್ಲ, ಭೌತಿಕವಾಗಿ ಹಾಜರಾಗಬೇಕೆಂದು ನಿರ್ದೇಶಿಸಿದ್ದ ತೀರ್ಪನ್ನು ಪ್ರಶ್ನಿಸಿ ಮಹುವಾ ಸುಪ್ರೀ ಕೋರ್ಟ್ ಮೆಟ್ಟಿಲೇರಿದ್ದು, ಇಂದು ಅರ್ಜಿ ವಜಾವಾಗಿದೆ.
ನೀವು ಮೊಟ್ಟೆಗೆ ಹೆದರಿದ್ರಾ?
ಪೊಲೀಸ್ ವಿಚಾರಣೆಗೆ ತಮಗೆ ಭಾಗಿಯಾಗಲೂ ಜೀವಭಯವಿದೆ. ಕೆಲ ದಿನಗಳ ಹಿಂದೆ ತಮ್ಮ ಲೋಕಸಭಾ ಕ್ಷೇತ್ರಕ್ಕೆ ತೆರಳಿದ್ದಾಗ, ಜನರು ಮತ್ತೆ ಇಲ್ಲಿಗೆ ಬಂದರೆ ಮೊಟ್ಟೆ ಹೊಡೆಯುವುದಾಗಿ ಹೆದರಿಸಿದ್ದರು. ನಂತರ ತಾವು ಬೇಟಿ ನೀಡಿದಾಗ ತಮ್ಮ ಮೇಲೆ ಮೊಟ್ಟೆಯಿಂದ ದಾಳಿ ನಡೆಸಿದ್ದಾರೆ. ಇದನ್ನು ತಡೆಯುವಲ್ಲಿ ಪೊಲೀಸ್ ವ್ಯವಸ್ಥೆ ಸಂಪೂರ್ಣ ವಿಫಲವಾಗಿತ್ತು, ಹೀಗಾಗಿ ನನಗೆ ಪೊಲೀಸ್ ವಿಚಾರಣೆಗೆ ನೇರವಾಗಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದರು.
ಆದರೆ, ಈ ಅರ್ಜಿಯನ್ನು ವಿಚಾರಣೆ ನಡೆಸಿದ ಜಸ್ಟೀಸ್, ದೀಪಂಕರ್ ದತ್ತ ಮತ್ತು ಶೀಲ್ ನಾಗು ಅವರ ನ್ಯಾಯಪೀಠ, ನೀವು ರಾಜಕೀಯಕ್ಕೆ ಧುಮುಕಿದ ಮೇಲೆ ಈ ಮೊಟ್ಟೆದಾಳಿಗೆ ಹೆದರುತ್ತಿದ್ದಿರಾ? ನಮ್ಮ ಸ್ವಾತಂತ್ರ ಹೋರಾಟಗಾರರು ಬ್ರಿಟಿಷರು ಚಲಾಯಿಸಿದ ಗುಂಡಿಗೆ ತಮ್ಮ ಎದೆಯೊಡ್ಡಿದ್ದರು, ನ್ಯಾಯಾಲಯದ ಮುಂದೆ ಈ ರೀತಿಯ ಅರ್ಜಿಗಳು ಬರಬಾರದು ಎಂದು ಹೇಳಿ ಅರ್ಜಿಯನ್ನು ವಜಾ ಮಾಡಿದ್ದಾರೆ.
ಹೋಟೆಲ್ಗೆ ಹೋದಾಗ ಮೊಟ್ಟೆ ಎಸೆತ!
ಜು. 1 ರಂದು ಕೃಷ್ಣಾನಗರದ ಸಂಸದೆ, ಮಹುವಾ ಮೊಯಿತ್ರಾ ತಮ್ಮ ಕ್ಷೇತ್ರದ ರೆಸ್ಟೋರೆಂಟ್ವೊಂದಕ್ಕೆ ಬೇಟಿ ನೀಡಿದ್ದ ಸಂದರ್ಭದಲ್ಲಿ ರೊಚ್ಚಿಗೆದ್ದ ಜನ ಅವರ ಮೇಲೆ ಮೊಟ್ಟೆ ಎಸೆದಿದ್ದರು. ಈ ಘಟನೆಯನ್ನು ತಮ್ಮ ಮೊಬೈಲ್ನಲ್ಲಿ ಹಂಚಿಕೊಂಡಿದ್ದ ಸಂಸದೆ, ಬಂಗಾಳದಲ್ಲಿ ಚುನಾವಣೆ ಮುಗಿದ ಮೇಲೆ ಬಿಜೆಪಿ ಗೂಂಡಾಗಿರಿ ಎಲ್ಲೆ ಮೀರಿದ್ದು, ಇಂದು ನನ್ನ ಮೇಲೆ ಮೊಟ್ಟೆ ಎಸೆದಿದ್ದಾರೆ. ಇದನ್ನು ತಡೆಯಬೇಕಿದ್ದ ಪೊಲೀಸರು ಸುಮ್ಮನೆ ನೋಡುತ್ತಾ ನಿಂತಿದ್ದಾರೆಂದು ವಿಡಿಯೋನಲ್ಲಿ ಆರೋಪಿಸಿದ್ದರು, (ಏಜನ್ಸೀಸ್).