ಮೃತ ಬಾಲಕ ಹರ್ಷಿತ್ ನಂದನ್  
ದೇಶ

ಕೋತಿಗಳನ್ನು ಓಡಿಸಲು ಇಟ್ಟಿದ್ದ ವಿಷದ ಗುಳಿಗೆಯನ್ನು ನುಂಗಿ ನಾಲ್ಕು ವರ್ಷದ ಬಾಲಕ ಸಾವು | boy dies

ಹೈದರಾಬಾದ್: ತೆಲಂಗಾಣದ ಮುಲುಗು ಜಿಲ್ಲೆಯ ಗ್ರಾಮವೊಂದರಲ್ಲಿ ಕೋತಿಗಳನ್ನು ಓಡಿಸಲು ಇಟ್ಟಿದ್ದ ವಿಷದ ಗುಳಿಗೆಯನ್ನು ಸೇವಿಸಿ ನಾಲ್ಕು ವರ್ಷದ ಬಾಲಕ ಮೃತಪಟ್ಟಿರುವ(boy dies) ಆಘಾತಾಕಾರಿ ಘಟನೆ ಸೋಮವಾರ(ಏ. 13) ವರದಿಯಾಗಿದೆ.
ಮುಲುಗು ಜಿಲ್ಲೆಯ ಗೋವಿಂದರಾವ್‌ಪೇಟೆಯಲ್ಲಿ ಈ ಘಟನೆ ನಡೆದಿದೆ. ಆರ್‌ಎಂಪಿ ವೈದ್ಯ ಶ್ರವಣ್ ಅವರ ಪುತ್ರ ಹರ್ಷಿತ್ ನಂದನ್(4) ಸಾವು. ಗ್ರಾಮದಲ್ಲಿ ಮಂಗಗಳ ಸಮಸ್ಯೆ ಹೆಚ್ಚಾಗಿದ್ದು, ಅವುಗಳನ್ನು ಓಡಿಸಲು ಮತ್ತು ಕೊಲ್ಲಲು ಗ್ರಾಮ ಪಂಚಾಯತ್ ಸಿಬ್ಬಂದಿ ಅಂಗನವಾಡಿ ಕೇಂದ್ರದ ನರ್ಸರಿ ಪ್ರದೇಶದಲ್ಲಿ ವಿಷದ ಗುಳಿಗೆಗಳನ್ನು ಇರಿಸಿದ್ದಾರೆ. ಈ ವೇಳೆ ಮಕ್ಕಳಿಗೆ ನೀಡು ಹಾಲಿನ ಪೌಡರ್​​ನಲ್ಲಿ ಆ ಗುಳಿಗೆ ಬೆರತಿದೆ.
ಭಾನುವಾರ ಸಂಜೆ ಮೃತ ಹರ್ಷಿತ್ ನಂದನ್ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಾ ಅಂಗನವಾಡಿ ಕೇಂದ್ರಕ್ಕೆ ಹೋಗಿದ್ದಾರೆ. ಆ ಸಮಯದಲ್ಲಿ ಮಕ್ಕಳಿಗೆ ನೀಡುವ ವಿಷಕಾರಿ ಗುಳಿಗೆಗಳೊಂದಿಗೆ ಬೆರೆಸಿದ ಮಕ್ಕಳ ಆಹಾರ ನೋಡಿದ್ದು, ಅದನ್ನು ತಿಂದಿದ್ದಾರೆ. ಬಳಿಕ ಬಾಲಕ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ.
ಪೋಷಕರು ತಕ್ಷಣ ಬಾಲಕನನ್ನು ಮುಲುಗು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಸುಧಾರಣೆ ಕಾಣದಿದ್ದಾಗ ವಾರಂಗಲ್‌ನ ಎಂಜಿಎಂಗೆ ಸ್ಥಳಾಂತರಿಸಲಾಯಿತು. ಇಂದು (ಏ. 13) ಮುಂಜಾನೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಹರ್ಷಿತ್ ಮೃತಪಟ್ಟಿದ್ದಾನೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ (ಏಜೆನ್ಸೀಸ್).