ಭಾರತದೊಳಗೆ ನುಸುಳಲು ಯತ್ನಿಸಿದ ಪಾಕ್​ ಲಷ್ಕರ್ ಕಮಾಂಡರ್ ಸೇರಿ ನಾಲ್ವರು ಉಗ್ರರು ಸ್ಫೋಟಕ್ಕೆ ಉಡೀಸ್​ |Terrorists  
ದೇಶ

ಎಲ್​ಒಸಿ ಬಳಿ ನುಸುಳಲು ಯತ್ನಿಸಿದ ಪಾಕ್​ ಲಷ್ಕರ್ ಕಮಾಂಡರ್ ಸೇರಿ ನಾಲ್ವರು ಉಗ್ರರು ಸ್ಫೋಟD ಉಡೀಸ್​ |Pakistani Terrorists

ಉಗ್ರರನ್ನು ಮುಹಮ್ಮದ್ ಇಶ್ತಿಯಾಕ್, ಮುಹಮ್ಮದ್ ವಕಾಸ್, ಮುಹಮ್ಮದ್ ಅಸಿಮ್ ಹಾಗೂ ಲಷ್ಕರ್ ಕಮಾಂಡರ್ ಮುಹಮ್ಮದ್ ಫೈಜಾನ್ ಎಂದು ಗುರುತಿಸಲಾಗಿದೆ. ಭೂಮಿ ಮೇಲಿನ ಬಾರ್ಲಿಂಗು ಸ್ಫೋಟಗೊಂಡ ಕೂಡಲೇ ಎಚ್ಚೆತ್ತ ಭಾರತದ ಭದ್ರತಾ ಪಡೆಗಳು ಆ ವಲಯದಲ್ಲಿ ಹೈಅಲರ್ಟ್ ಘೋಷಿಸಿವೆ.

ಜಮ್ಮು- ಕಾಶ್ಮೀರ: ಪೂಂಚ್ ಜಿಲ್ಲೆಯಲ್ಲಿ ನಿಯಂತ್ರಣ ರೇಖೆಯ (LoC) ಮೂಲಕ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ನಿಷೇಧಿತ ಲಷ್ಕರ್-ಎ-ತೈಬಾ (LeT) ಸಂಘಟನೆಯ ಮುಖ್ಯ ಕಮಾಂಡರ್ ಸೇರಿದಂತೆ ನಾಲ್ವರು ಉಗ್ರರು ನೆಲಬಾಂಬ್​ ಸ್ಫೋಟದಲ್ಲಿ ಭಸ್ಮವಾಗಿದ್ದಾರೆ ಎಂದು ವರದಿಯಾಗಿದೆ.

ನಿಯಂತ್ರಣ ರೇಖೆಯ ಕೆಜಿ ಸೆಕ್ಟರ್‌ನಲ್ಲಿ ಈ ಘಟನೆ ನಡೆದಿದ್ದು, ಸುಟ್ಟು ಕರಕಲಾದ ಉಗ್ರರನ್ನು ಮುಹಮ್ಮದ್ ಇಶ್ತಿಯಾಕ್, ಮುಹಮ್ಮದ್ ವಕಾಸ್, ಮುಹಮ್ಮದ್ ಅಸಿಮ್ ಹಾಗೂ ಲಷ್ಕರ್ ಕಮಾಂಡರ್ ಮುಹಮ್ಮದ್ ಫೈಜಾನ್ ಎಂದು ಗುರುತಿಸಲಾಗಿದೆ. ಭೂಮಿ ಮೇಲಿನ ಬಾರ್ಲಿಂಗು ಸ್ಫೋಟಗೊಂಡ ಕೂಡಲೇ ಎಚ್ಚೆತ್ತ ಭಾರತದ ಭದ್ರತಾ ಪಡೆಗಳು ಆ ವಲಯದಲ್ಲಿ ಹೈಅಲರ್ಟ್ ಘೋಷಿಸಿವೆ.

ಸಂಭಾವ್ಯ ಭದ್ರತಾ ಲೋಪವನ್ನು ತಡೆಯಲು ಮತ್ತು ಪರಿಸ್ಥಿತಿಯನ್ನು ಅವಲೋಕಿಸಲು ನಿಯಂತ್ರಣ ರೇಖೆಯುದ್ದಕ್ಕೂ ಕಣ್ಗಾವಲನ್ನು ಇನ್ನಷ್ಟು ತೀವ್ರಗೊಳಿಸಲಾಗಿದೆ,(ಏಜೆನ್ಸೀಸ್).