Horrific Incident  
ದೇಶ

ಒಂದೇ ಕುಟುಂಬದ ನಾಲ್ವರ ಹತ್ಯೆ! ಈ ಭೀಕರ ಘಟನೆಗೆ ಕಾರಣ ಏನು? | Horrific Incident

ಜಾರ್ಖಂಡ್: ಒಂದೇ ಕುಟುಂಬದ ನಾಲ್ವರು ಸದ್ಯಸರನ್ನು ಹತ್ಯೆ ಮಾಡಲಾದ ಭೀಕರ(Horrific Incident) ಘಟನೆ ಜಾರ್ಖಂಡ್​ನ ಡುಮ್ಕಾದಲ್ಲಿ  ಭಾನುವಾರ ನಡೆದಿದೆ. 
24 ವರ್ಷದ ಆರತಿ ಕುಮಾರಿ ಮತ್ತು ಅವರ ಇಬ್ಬರು ಮಕ್ಕಳಾದ ನಾಲ್ಕು ವರ್ಷದ ರೋಹಿ ಮತ್ತು ಎರಡು ವರ್ಷದ ವಿರಾಜ್, ಮನೆಯೊಳಗೆ ಮಲಗಿದ್ದಾಗ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಆಕೆಯ ಪತಿ, 30 ವರ್ಷದ ಬೀರೇಂದ್ರ ಮಾಂಝಿ ಕೊಲೆಯಾಗಿದ್ದಾರೆ.
ಇನ್ನು ಬೀರೇಂದ್ರ ಮಾಂಝಿ ಸುಮಾರು 500 ಮೀಟರ್ ದೂರದಲ್ಲಿ ಹೊಲವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದು, ಅವರನ್ನು ಕೊಲ್ಲುವ ಮೊದಲು ಅವರನ್ನು ಬೆನ್ನಟ್ಟಿ ಅಥವಾ ಎಳೆದುಕೊಂಡು ಹೋಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. 

 ಭೀಕರ ಹತ್ಯೆ

ಸ್ಥಳಕ್ಕೆ ಧಾವಿಸಿದ ಪೊಲೀಸರು ಶ್ವಾನ ದಳ ಮತ್ತು ವಿಧಿವಿಜ್ಞಾನ ತಂಡವನ್ನು ಬಳಸಿಕೊಂಡು ಮನೆ, ಮೈದಾನ ಮತ್ತು ಎರಡು ಸ್ಥಳಗಳ ನಡುವಿನ ಮಾರ್ಗವನ್ನು ಸ್ಕ್ಯಾನ್ ಮಾಡಿದ್ದಾರೆ. ಪೊಲೀಸರು ವೈಯಕ್ತಿಕ ದ್ವೇಷದಿಂದ ಹಿಡಿದು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ಕೋನವನ್ನು ಪರಿಶೀಲಿಸಿ ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ (ಏಜೆನ್ಸೀಸ್​).