Shashi Tharoor  
ದೇಶ

ನೀಲಿ ಕುರ್ತಾದಲ್ಲಿ ಮಿಂಚಿದ ಶಶಿ ತರೂರ್: ರಾಷ್ಟ್ರಪಕ್ಷಿಯೊಂದಿಗೆ ‘ಟ್ವಿನ್ನಿಂಗ್’ ವಿಡಿಯೋ ವೈರಲ್..Shashi Tharoor

ಪ್ರಮುಖ ಮುಖ್ಯಾಂಶಗಳು

  • ನವಿಲಿನ ಜೊತೆಗೆ ಟ್ವಿನ್ನಿಂಗ್​ ವಿಡಿಯೋ ಹಂಚಿಕೊಂಡ ಸಂಸದ ಶಶಿ ತರೂರ್​
  • ನವಿಲಿನ ಬಣ್ಣದ ಬಗ್ಗೆ ಹಾಗೂ ಹ್ಯಾಂಡಸಮ್​ ಎಂದು ಪೋಸ್ಟ್​
  • ಲುಕ್ಕಿಂಗ್​ ಲೈಕ್​ ಆ ವಾವ್​ ಎಂದು ನೆಟ್ಟಿಗರಿಂದ ಕಾಮೆಂಟ್
ನವದೆಹಲಿ: ಮಹಿಳಾ ಮೀಸಲಾತಿ ಮಸೂದೆ(Women's Reservation Bill2026) ಅಂಗೀಕಾರಕ್ಕೆ ಸೋಲುಂಟಾದ ಬಗ್ಗೆ ಕೇಂದ್ರ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿದೆ. ಇಷ್ಟೇ ಅಲ್ಲದೆ, ಶಶಿ ತರೂರ್​ ಅವರು ಕಾಂಗ್ರೆಸ್​​​ ಮಹಿಳಾ ವಿರೋಧಿ ಎಂದು ಪರೋಕ್ಷವಾಗಿ ಹೇಳಿದ್ದರು ಎನ್ನುವುದಾಗಿ ಕೇಂದ್ರ ಸಚಿವ ಕಿರಣ್​ ರಿಜಿಜು ಅವರು ಸಂದರ್ಶನವೊಂದರಲ್ಲಿ ಮಾಹಿತಿ ಕೊಟ್ಟಿದ್ದರು. ಈ ವಿವಾದಗಳ ಮಧ್ಯೆ ಶಶಿ ತರೂರ್​ ಅವರು ಪ್ರಕೃತಿ ಸೌಂದರ್ಯದ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಶಶಿ ತರೂರ್​​ ಅವರು ಇಂಗ್ಲಿಷ್​​​ ಪದ ಬಳಕೆಗೆ ಎಷ್ಟು ಪ್ರಖ್ಯಾತಿ ಪಡೆದುಕೊಂಡಿದ್ದಾರೆಯೋ ಅಷ್ಟೇ ಅವರ ಫ್ಯಾಷನ್​ಗೂ ಸೈ ಎನಿಸಿಕೊಂಡಿದ್ದಾರೆ. ನವಿಲೊಂದು ತಮ್ಮ ಕಚೇರಿ ಬಳಿ ಕಾಣಿಸಿಕೊಂಡಿರುವ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ನವಿಲಿನ ಸೌಂದರ್ಯ ಮತ್ತು ತಮ್ಮ ಬಟ್ಟೆ ಹೇಗಿದೆ ಎಂದು ಅವರು ಪ್ರಶ್ನಿಸಿದ್ದಾರೆ. ವಿಡಿಯೋ ಅಪ್ಲೋಡ್ ಮಾಡಿದ ಕೆಲವೇ ಗಂಟೆಯಲ್ಲಿ ಒಂದು ಮಿಲಿಯನ್​ಗಿಂತಲೂ ಹೆಚ್ಚು ವ್ಯೂವ್ಸ್​ ಕಂಡಿದ್ದು, 70 ಸಾವಿರಕ್ಕೂ ಹೆಚ್ಚು ಲೈಕ್ಸ್​ ಸಿಕ್ಕಿದೆ.

ಇನ್​ಸ್ಟಾಗ್ರಾಮ್​ ಪೋಸ್ಟ್​ನಲ್ಲಿ ಏನಿದೆ?

ತರೂರ್​ ಅವರ ಗೃಹ ಕಚೇರಿಯ ಕಿಟಕಿಯ ಮೇಲೆ ನವಿಲೊಂದು ಕುಳಿತು ಇಣುಕಿ ನೋಡುತ್ತಿರುವ ವಿಡಿಯೋ ಹಂಚಿಕೊಂಡು ಅವರು ಹೇಳಿದ್ದು ಹೀಗೆ, ಅವನು ಹ್ಯಾಂಡ್ಸಮ್​ ಆಗಿದ್ದಾನೆ. ಅವನ ಗಾಢವಾದ ನೀಲಿ ಬಣ್ಣದ ಮೈ ಮತ್ತು ನನ್ನ ಧಿರಿಸು ಒಂದೇ ರೀತಿ ಇದೆ. ನವಿಲು ಮಂದಿರ ಸಮೀಪವಿದ್ದಿದ್ದರಿಂದ ಶಿವನ ಭಕ್ತನಂತೆ ಕಾಣುತ್ತಿದ್ದಾನೆ ಎಂದು ಹೇಳಿರುವುದು ವಿಡಿಯೋದಲ್ಲಿದೆ. ನಾನು ಮತ್ತು ಈ ಸುಂದರ ನವಿಲು ಟ್ವಿನಿಂಗ್ ಮಾಡುತ್ತಿದ್ದೇವೆ ಎಂದು ಶೀರ್ಷಿಕೆ ಕೊಟ್ಟುಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ತರೂರ್ ಅವರು ತೊಟ್ಟಿರುವ ಕಡು ನೀಲಿ ಬಣ್ಣದ ಹೊಳೆಯುವ ಕುರ್ತಾ. ಈ ಬಣ್ಣವು ಪಕ್ಕದಲ್ಲೇ ಇದ್ದ ನವಿಲಿನ ಕುತ್ತಿಗೆಯ ನೈಸರ್ಗಿಕ ನೀಲಿ ಬಣ್ಣಕ್ಕೆ ಅಕ್ಷರಶಃ ಸರಿಹೊಂದುತ್ತಿತ್ತು.

ನೆಟ್ಟಿಗರು ಏನಂದ್ರು?

ಈ ಪೋಸ್ಟ್ ಕಂಡ ನೆಟ್ಟಿಗರು ಕೇವಲ ಕೆಲವೇ ಹೊತ್ತಿನಲ್ಲಿ ಅದನ್ನು ವೈರಲ್ ಮಾಡಿದ್ದಾರೆ. ಒಬ್ಬರು "ಸರ್, ನವಿಲು ನಿಮ್ಮಿಂದ ಸ್ಫೂರ್ತಿ ಪಡೆದಿದೆಯೇ ಅಥವಾ ನೀವು ಅದರಿಂದಲೇ?" ಎಂದು ತಮಾಷೆಯಾಗಿ ಕೇಳಿದ್ದರೆ, ಇನ್ನು ಕೆಲವರು ಪ್ರಸ್ತುತ ವೈರಲ್ ಆಗಿರುವ "ಸೋ ಬ್ಯೂಟಿಫುಲ್, ಸೋ ಎಲಿಗಂಟ್, ಜಸ್ಟ್ ಲುಕಿಂಗ್ ಲೈಕ್ ಎ ವಾವ್" ಎಂಬ ಮೀಮ್ ಬಳಸಿ ಅಭಿನಂದಿಸಿದ್ದಾರೆ. ತರೂರ್ ಅವರ ಈ ಫೋಟೋ ಪ್ರಕೃತಿ ಮತ್ತು ಮನುಷ್ಯನ ಫ್ಯಾಷನ್ ನಡುವಿನ ಅದ್ಭುತ ಸಮನ್ವಯಕ್ಕೆ ಸಾಕ್ಷಿಯಂತಿದೆ, (ಏಜೆನ್ಸೀಸ್).