- ಮಾಜಿ ಭೂಗತ ಪಾತಕಿ ಹಾಜಿ ಮಸ್ತಾನ್ ಪುತ್ರಿ ನ್ಯಾಯ ದೊರಕಿಸುವಂತೆ ಪ್ರಧಾನಿ ಮೋದಿಯಲ್ಲಿ ನಿವೇದನೆ
- ತನ್ನ ಗಂಡನಿಂದ ನಿರಂತರ ದೌರ್ಜನ್ಯ ನಡೆದಿದೆ ಎಂದು ಆರೋಪ
- ತ್ರಿವಳಿ ತಲಾಖ್ ನಿರ್ಮೂಲನೆ ದಿಟ್ಟ ನಿರ್ಧಾರ
Naredra Modi : ಮಾಜಿ ಭೂಗತ ಪಾತಕಿ ಹಾಜಿ ಮಸ್ತಾನ್ ಅವರ ಪುತ್ರಿ ಎಂದು ಹೇಳಿಕೊಳ್ಳುವ ಹಸೀನ್ ಮಸ್ತಾನ್ ಮಿರ್ಜಾ ಅತ್ಯಾಚಾರ, ದೌರ್ಜನ್ಯ ಮತ್ತು ಆಸ್ತಿ ಕಳ್ಳತನದ ಪ್ರಕರಣದಲ್ಲಿ ನ್ಯಾಯ ಕೋರಿ ಪ್ರಧಾನಿ ನರೇಂದ್ರ ಮೋದಿ (Naredra Modi) ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ.
1996 ರಲ್ಲಿ ತನ್ನನ್ನು ತನ್ನ ತಾಯಿಯ ಚಿಕ್ಕಪ್ಪನ ಮಗನಿಗೆ ಬಲವಂತವಾಗಿ ಮದುವೆ ಮಾಡಲಾಗಿತ್ತು ಅವನು ನನ್ನ ಮೇಲೆ ಅತ್ಯಾಚಾರ, ದೌರ್ಜನ್ಯ ಎಸಗಿದ್ದಾನೆ ಮತ್ತು ನನ್ನ ಆಸ್ತಿಯನ್ನು ಕಬಳಿಸಿದ್ದಾನೆ ಎಂದು ಹಸೀನಾ ಆರೋಪಿಸಿದ್ದಾಳೆ. ಆ ವ್ಯಕ್ತಿ ತನಗಿಂತ ಮೊದಲು ಎಂಟು ಬಾರಿ ಮದುವೆಯಾಗಿದ್ದ, ಆ ಸಮಯದಲ್ಲಿ ನಾನು ಅಪ್ರಾಪ್ತ ವಯಸ್ಕಳಾಗಿದ್ದು ಮದುವೆಗೆ ಒತ್ತಡವನ್ನು ಹೇರಲಾಯಿತು. ಮದುವೆಯಾದ ನಂತರ ಆತನ ಕಿರುಕುಳದಿಂದ ಬೇಸತ್ತ ನಾನು ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸೆದ್ದೇನೆಂದು ಹೇಳಿದ್ದಾಳೆ. “ನಾನು ಅಮಿತ್ ಶಾ, ಮೋದಿ ಜೀ ಅವರಲ್ಲಿ ಕೇಳಿಕೊಳ್ಳುತ್ತೇನೆ ಪ್ರತಿದಿನ ಭಾರತದಲ್ಲಿ ಅತ್ಯಾಚಾರ, ಕೊಲೆ, ಒಂದಲ್ಲ ಒಂದು ವಿಷಯ ನಡೆಯುತ್ತಿದೆ. ನಾನು ಈ ಸಂಕಷ್ಟವನ್ನು ಎದುರಸಿದ್ದೇನೆ. ನನ್ನ ಜತೆ ಬಾಲ್ಯವಿವಾಹ, ಅತ್ಯಾಚಾರ, ಕೊಲೆಗೆ ಯತ್ನದ ಜತೆಗೆ ನನ್ನ ಆಸ್ತಿಯನ್ನು ಕಸಿದುಕೊಂಡು ನನ್ನ ಗುರುತನ್ನು ಮರೆಮಾಡಲಾಯಿತು. ದಯವಿಟ್ಟು ಕಾನೂನನ್ನು ಆದಷ್ಟು ಕಠಿಣವಾಗಿಸಿ ಅಂದರೆ ಮಾತ್ರ ಜನ ಅಪರಾಧ ಮಾಡಲು ಹೆದರುತ್ತಾರೆ ಎಂದು ಹೇಳಿದಳು.
ಕಳೆದ ವಾರ ಇನ್‌ಸ್ಟಾಗ್ರಾಮ್‌ನಲ್ಲಿ ನ್ಯಾಯಕ್ಕಾಗಿ ಮನವಿ
ಕಳೆದ ವಾರ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹಸೀನಾ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡುತ್ತಾ ತನಗೆ ಇಷ್ಟು ವರ್ಷಗಳಲ್ಲಿ ಇನ್ನೂ ನ್ಯಾಯ ದೊರೆತಿಲ್ಲ ಎಂದರು.
ಹಸೀನ್ ಮೋದಿ ಸರ್ಕಾರ ಜಾರಿಗೆ ತಂದ ತ್ರಿವಳಿ ತಲಾಖ್ ಕಾನೂನನ್ನು ಶ್ಲಾಘಿಸಿದರು ಆದರೆ ಇಂತಹ ಪ್ರಕರಣಗಳಲ್ಲಿ ತಕ್ಷಣ ನ್ಯಾಯ ದೊರೆಯುವಂತೆ ಮಾಡಿ ಹಾಗೆಯೇ ಧಾರ್ಮಿಕ ಕಾನೂನಿನ ದುರುಪಯೋಗವನ್ನು ತಪ್ಪಿಸಿ ಎಂದರು. ತ್ರಿವಳಿ ತಲಾಖ್ ಕಾನೂನು ತುಂಬಾ ಒಳ್ಳೆಯದು; ಅದು ಪ್ರಧಾನಿ ಮೋದಿ ಮಾಡಿದ ಉತ್ತಮ ಕಾನೂನು, ತ್ರಿವಳಿ ತಲಾಖ್ ಅನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿತ್ತು. ಮೋದಿ ಜಿ ಈ ಮಸೂದೆಯನ್ನು ಜಾರಿಗೆ ತರುವ ಮೂಲಕ ಮುಸ್ಲಿಂ ಮಹಿಳೆಯರ ಆಶೀರ್ವಾದವನ್ನು ಗಳಿಸಿದ್ದಾರೆ ಎಂದು ಹೇಳಿದರು.
ಯಾರು ಈ ಹಾಜಿ ಮಸ್ತಾನ್ ?
ಹಾಜಿ ಮಸ್ತಾನ್ ಮುಂಬೈನ ಭೂಗತ ಜಗತ್ತಿನ ಪ್ರಮುಖ ವ್ಯಕ್ತಿಯಾಗಿದ್ದು, ರಿಯಲ್ ಎಸ್ಟೇಟ್ ಮತ್ತು ಸಮುದ್ರ ಕಳ್ಳಸಾಗಣೆಯಲ್ಲಿ ಹಿಡಿತ ಹೊಂದಿದ್ದರು ಮತ್ತು ಇತರ ಭೂಗತ ಜಗತ್ತಿನ ವ್ಯಕ್ತಿಗಳು ಮತ್ತು ಬಾಲಿವುಡ್ ವ್ಯಕ್ತಿಗಳೊಂದಿಗಿನ ಅವರ ಸಂಬಂಧ ಹೊಂದಿದ್ದರು. ಹಾಜಿ ಮಸ್ತಾನ್ ಜೂನ್ 25, 1994 ರಂದು ಹೃದಯಾಘಾತದಿಂದ ನಿಧನರಾದರು.(ಏಜನ್ಸೀಸ್).