ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ಲೆಗ್ಸ್ಪಿನ್ನರ್ ಮತ್ತು ಕ್ರಿಕೆಟ್ ಕಾಮೆಂಟೇಟರ್ ಆಗಿದ್ದ ಲಕ್ಷ್ಮಣ್ ಶಿವರಾಮಕೃಷ್ಣನ್(Laxman Sivaramakrishnan) ಅವರು, ಇಂದು(ಮಾ. 20) ಬಿಸಿಸಿಐ ವಿರುದ್ಧ ಗಂಭೀರ ಜನಾಂಗೀಯ ತಾರತಮ್ಯ ಆರೋಪ ಮಾಡಿ, ತಮ್ಮ ಕಾಮೆಂಟೇಟರ್ ವೃತ್ತಿಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಅವರು, ನಾನು ಬಿಸಿಸಿಐ ಕಾಮೆಂಟರಿಯಿಂದ ನಿವೃತ್ತಿಯಾಗಿದ್ದೇನೆ ಎಂದು ಹೇಳಿದ್ದಾರೆ. ಮುಂದುವರೆದು ಕಳೆದ 20 ವರ್ಷಗಳಿಂದ ಪಂದ್ಯಗಳ ಸಮಯದಲ್ಲಿ ಟಾಸ್ ಮತ್ತು ಪ್ರೆಸೆಂಟೇಷನ್ಗೆ ಬಳಸಿಲ್ಲ. ಹೊಸಬರು ಬಂದವರು ಅದನ್ನು ಮಾಡುತ್ತಿದ್ದಾರೆ. ರವಿ ಶಾಸ್ತ್ರಿ ಕೋಚ್ ಆಗಿದ್ದಾಗಲೂ ನನ್ನನ್ನು ಬಳಸಿಕೊಳ್ಳಲಿಲ್ಲ. ಇದಕ್ಕೆ ಏನೂ ಕಾರಣವಿರಬಹದು. ಬಣ್ಣ, ಭಾಷೆ ಅಥವಾ ಇನ್ಯಾವುದೋ ನಿರ್ಲಕ್ಷ್ಯ ಮಾಡೋದಕ್ಕೆ ಕಾರಣವಿರಬಹುದು ಎಂದು ಆರೋಪಿಸಿದ್ದಾರೆ.
ಲಕ್ಷ್ಮಣ್ ಶಿವರಾಮಕೃಷ್ಣನ್ ಹಿನ್ನೆಲೆ
ತಮಿಳುನಾಡಿನ ಚೆನ್ನೈನಲ್ಲಿ ಜನಿಸಿರುವ ಲಕ್ಷ್ಮಣ್ ಶಿವರಾಮಕೃಷ್ಣನ್, 17ನೇ ವಯಸ್ಸಿನಲ್ಲೇ ಕ್ರಿಕೆಟ್ಗೆ ಪಾದರ್ಪಣೆ ಮಾಡಿದ್ದರು. 1983ರಿಂದ 1987ರವರೆಗೆ 9 ಟೆಸ್ಟ್ ಮತ್ತು 16 ಏಕದಿನ ಪಂದ್ಯಗಳಲ್ಲಿ ಭಾರತ ಪರ ಆಡಿದ್ದರು. ಅವರು 12 ವರ್ಷ ವಯಸ್ಸಿನವರಾಗಿದ್ದಾಗ ಎರಡು ರನ್‌ಗಳಿಗೆ ಏಳು ವಿಕೆಟ್‌ಗಳನ್ನು ಅದ್ಭುತವಾಗಿ ಕಬಳಿಸುವ ಮೂಲಕ ಗಮನ ಸೆಳೆದಿದ್ದರು ಎನ್ನಲಾಗಿದೆ.
ಟೆಸ್ಟ್ ವೃತ್ತಿಜೀವನವನ್ನು 44.03 ಸರಾಸರಿಯಲ್ಲಿ 26 ವಿಕೆಟ್‌ಗಳೊಂದಿಗೆ ಮೂರು ಐದು ವಿಕೆಟ್‌ಗಳನ್ನು ಪಡೆದರು. ಶಿವರಾಮಕೃಷ್ಣನ್ ಅವರ ಏಕದಿನ ವೃತ್ತಿಜೀವನದಲ್ಲಿ ಅವರು 35.86 ಸರಾಸರಿಯಲ್ಲಿ 15 ವಿಕೆಟ್‌ಗಳನ್ನು ಪಡೆದರು. ಅವರ ಕೊನೆಯ ವೃತ್ತಿಪರ ಪಂದ್ಯವು 1998ರ ಇರಾನಿ ಟ್ರೋಫಿ ಸಮಯದಲ್ಲಿ ಆಡಿದ್ದಾರೆ (ಏಜೆನ್ಸೀಸ್).