ಸೌರವ್ ಗಂಗೂಲಿ ಮತ್ತು ಪತ್ನಿ ಡೋನಾ ಗಂಗೂಲಿ
ಕೋಲ್ಕತ್ತಾ: ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬಗ್ಗೆ ಬರೆದ ನಿಂದನೀಯ ಮತ್ತು ಅಶ್ಲೀಲ ಬರಹಗಳ ವಿರುದ್ಧ ಖ್ಯಾತ ಒಡಿಸ್ಸಾ ನೃತ್ಯಗಾರ್ತಿ ಮತ್ತು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಪತ್ನಿ ಡೋನಾ ಗಂಗೂಲಿ(Dona Ganguly) ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಶನಿವಾರ(ನ. 29) ವರದಿಯಾಗಿದೆ.
ಡೋನಾ ಗಂಗೂಲಿ ಕೋಲ್ಕತ್ತಾ ಚಲನಚಿತ್ರೋತ್ಸದದಲ್ಲಿ ನೃತ್ಯ ಪ್ರದರ್ಶನ ನೀಡಿದ್ದು, ಅದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಈ ಬಗ್ಗೆ ಡೋನಾ ನೀಡಿರುವ ದೂರಿನನ್ವಯ ಕೋಲ್ಕತ್ತಾದ ಠಾಕೂರ್ಪುಕುರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಡೋನಾ ಗಂಗೂಲಿ ಸಾಮಾಜಿಕ ಮಾಧ್ಯಮ ಬಳಕೆದಾರರು ಬಾಡಿ ಶೇಮಿಂಗ್‌ನಲ್ಲಿ ತೊಡಗಿದ್ದು, ತಮ್ಮ ಖ್ಯಾತಿಗೆ ಧಕ್ಕೆ ತರುವ ಅವಮಾನಕರ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಶ್ಲೀಲ ಕಮೆಂಟ್ಗಳ ಫೇಸ್‌ಬುಕ್ ಪುಟದಿಂದ ಸ್ಕ್ರೀನ್‌ಶಾಟ್‌ಗಳು ಮತ್ತು ಸಂಬಂಧಿತ ಮೊಬೈಲ್ ಸಂಖ್ಯೆ ಸೇರಿದಂತೆ ಒದಗಿಸಲಾದ ಪುರಾವೆಗಳನ್ನ ನೀಡಿದ್ದಾರೆ.
ಈ ಕುರಿತು ಪಿಟಿಐ ಜೊತೆ ಮಾತನಾಡಿರುವ ಪೊಲೀಸ್ ಅಧಿಕಾರಿಯೊಬ್ಬರು, ಕೋಲ್ಕತ್ತಾ ಚಲನಚಿತ್ರೋತ್ಸವದಲ್ಲಿ ಡೋನಾ ಗಂಗೂಲಿ ಅವರು ನೀಡಿದ ನೃತ್ಯ ಪ್ರದರ್ಶನದ ಬಗ್ಗೆ ನಿಂದನೆಯನ್ನು ಮಾಡಲಾಗಿದೆ. ಅವರ ಫೇಸ್‌ಬುಕ್ ಖಾತೆಯ ಕಮೆಂಟ್, ಪೋಸ್ಟ್ಗಳ ಸ್ಕ್ರೀನ್ ಶಾಟ್ಗಳನ್ನು ತೋರಿಸಿದ್ದಾರೆ. ಅವು ನಿಂದನೆಯಿಂದ ಕೂಡಿದ್ದು, ವ್ಯಕ್ತಿತ್ವಕ್ಕೆ ಕಳಂಕ ತರುವ ಉದ್ದೇಶವನ್ನು ಹೊಂದಿವೆ. ಅಂತಹ ಕಮೆಂಟ್ ಮಾಡಿದ ವ್ಯಕ್ತಿಗಳನ್ನು ಪತ್ತೆ ಹಚ್ಚುವ ಕೆಲಸ ಮಾಡ್ತಿದ್ದೇವೆ ಎಂದು ಹೇಳಿದ್ದಾರೆ (ಏಜೆನ್ಸೀಸ್).