FDA Officer Cornered Maharashtra
- ಎರಡು ವರ್ಷದ ಮಗು ಎಕ್ಸ್‌ಪೈರ್ಡ್ ತಿಂಡಿ ತಿಂದು ಅನಾರೋಗ್ಯಕ್ಕೆ ತುತ್ತು.
- ಅಂಗಡಿಯವರಿಂದ ಲಂಚ ಪಡೆದು ಕ್ರಮ ಕೈಗೊಳ್ಳದ FDA ಅಧಿಕಾರಿ.
- ಎಕ್ಸ್‌ಪೈರ್ಡ್ ಬಿಸ್ಕತ್ ಪ್ಯಾಕೆಟ್ ತೆಗೆದು ತಿನ್ನಲು ಸವಾಲ್ ಹಾಕಿದ ಸಾರ್ವಜನಿಕರು
ಮುಂಬೈ: ಆಹಾರ ಮತ್ತು ಔಷಧಿ ಆಡಳಿತ (FDA) ಅಧಿಕಾರಿ ಸುತ್ತ ನೆರೆದ ಜನ.. ಡೇಟ್ ಬಾರ್ ಆದ ಬಿಸ್ಕೇಟ್ ತಿನ್ನಲು ಸವಾಲ್ ಹಾಕಿ, ಪ್ಯಾಕೆಟ್ ತೆರೆದು ಅವರ ಬಾಯಿಯ ಬಳಿ ತಂದಿಟ್ಟು ತಿನ್ನಿ ಸರ್ ತಿನ್ನಿ ಎಂದು ಒತ್ತಾಯಿಸುತ್ತಿರುವ ದೃಶ್ಯಗಳು ಕಂಡುಬಂದಿದ್ದು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ.
ಹೌದು, ಅಂಗಡಿಯೊಂದರಲ್ಲಿ ಎಕ್ಸ್‌ಪೈರ್ಡ್ ಆದ ಆಹಾರ ಪದಾರ್ಥಗಳ ಮಾರಾಟ ಮಾಡುತ್ತಿದ್ದ ಬಗ್ಗೆ ಕ್ರಮ ಕೈಗೊಳ್ಳುವ ಬದಲು, ಆಹಾರ ಮತ್ತು ಔಷಧಿ ಆಡಳಿತ (FDA) ಅಧಿಕಾರಿ ಲಂಚ ಪಡೆದು ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಆರೋಪ ಕೇಳಿಬಂದ ಹಿನ್ನೆಲೆ, ಅವರನ್ನು ಸುತ್ತುವರೆದು ತರಾಟೆಗೆ ತೆಗೆದುಕೊಂಡ ದೃಶ್ಯಗಳು ಕೇಳಿಬಂದವು.
ಸ್ಥಳೀಯರ ಪ್ರಕಾರ, ಅಂಗಡಿಯೊಂದರಲ್ಲಿ ಕೊಂಡುಕೊಂಡ ತಿಂಡಿಯನ್ನು ತಿಂದ ಎರಡು ವರ್ಷದ ಮಗುವೊಂದು ಅಸ್ವಸ್ಥಗೊಂಡು ತಲೆತಿರುಗಿ ಬಿದ್ದಿತ್ತು. ಮಗುವಿನ ಆರೋಗ್ಯ ಹದಗೆಟ್ಟಿದ್ದರಿಂದ ಕುಟುಂಬದವರು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಈ ಘಟನೆಯಿಂದ ಆಕ್ರೋಶಗೊಂಡ ಮಗುವಿನ ಸಂಬಂಧಿಕರು ಮತ್ತು ಸ್ಥಳೀಯರು ಎಫ್‌ಡಿಎ ಅಧಿಕಾರಿಗಳಿಗೆ ದೂರು ನೀಡಿದ್ದರು.
ದೂರಿನ ಮೇರೆಗೆ ಅಂಗಡಿಗೆ ಬಂದ ಎಫ್‌ಡಿಎ ಅಧಿಕಾರಿ ಸ್ಥಳ ಪರಿಶೀಲನೆ ನಡೆಸಲು ಬಂದರು. ಆದರೆ ಮಗುವಿನ ಅಸ್ವಸ್ಥತೆಗೆ ಕಾರಣವಾದ ತಿಂಡಿಯ ಪ್ಯಾಕೆಟ್‌ಗಳನ್ನು ತಪಾಸಣೆಗೂ ಮುನ್ನವೇ ಅಂಗಡಿಯಿಂದ ಮಾಯ ಮಾಡಲಾಗಿದೆ. ತಪಾಸಣೆ ವೇಳೆ ಅಧಿಕಾರಿಗಳಿಗೆ ಅಂಗಡಿಯಲ್ಲಿ ಕೆಲವು ಎಕ್ಸ್‌ಪೈರ್ಡ್ ಬಿಸ್ಕತ್ ಪ್ಯಾಕೆಟ್‌ಗಳು ಸಿಕ್ಕಿದ್ದರೂ, ಅಂಗಡಿಯ ಮಾಲೀಕನ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಂಡಿರಲಿಲ್ಲ ಎನ್ನಲಾಗಿದೆ.
ಅಧಿಕಾರಿ ಲಂಚ ಪಡೆದು ವಿಷಯವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ಬಿಸ್ಕತ್‌ಗಳು ಎಕ್ಸಪೈರ್ಡ್ ಆಗಿಲ್ಲ ಎಂದರೆ ನೀವು ತಿಂದು ನೋಡಿ ಎಂದು ಸವಾಲ್ ಹಾಕಿದ್ದಾರೆ. ಕೆಲವರು ಬಿಸ್ಕತ್ ಅನ್ನು ಅಧಿಕಾರಿಯ ಬಾಯಿಗೆ ತುರುಕಲು ಯತ್ನಿಸಿದರು,
ಜನ ಈಗ ಬದಲಾಗುತ್ತಿದ್ದಾರೆ. ಮೊದಲಿನಂತೆ ಈಗ ಯಾರನ್ನು ಯಾಮಾರಿಸಲು ಸಾಧ್ಯವಿಲ್ಲ. ಇವರೆಲ್ಲ ಒಳ್ಳೆ ಕೆಲಸ ಮಾಡಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ತುಕರಾಂ ಅವರ ಟೀಂನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದಿದ್ದಾರೆ.
ಓಹ್ ಗಂಭೀರವಾದ ವಿಷಯವೇನೆಂದರೆ, ಅಧಿಕಾರಿಗೆ ಅವಧಿ ಮೀರಿದ ಬಿಸ್ಕತ್ತುಗಳನ್ನು ತಿನ್ನಿಸಲು ಒತ್ತಾಯಿಸಲಾಗಿದೆ. ಇದರ ತನಿಖೆಯಾಗಬೇಕಿತ್ತು. ನಿಜವಾಗಿಯೂ ಅವರು ಲಂಚ ಪಡೆದಿದ್ದಾರೆಯೇ ಅಥವಾ ಇಲ್ಲವೇ ಎಂಬುದರ ಕುರಿತು ತನಿಖೆ ಮಾಡಬೇಕಿತ್ತು ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ,