GOAT Lionel Messi 
ದೇಶ

ಫುಟ್ಬಾಲ್ GOAT ಲಿಯೋನೆಲ್ ಮೆಸ್ಸಿಯ ನೆಚ್ಚಿನ ಆಹಾರಗಳು! ಅಧಿಕವಾಗಿ ಏನು ತಿನ್ನಲು ಇಷ್ಟ ಗೊತ್ತೆ?

ಪ್ರಮುಖ ಮುಖ್ಯಾಂಶಗಳು

  • ಇಂಡಿಯಾ GOAT ಟೂರ್​-2025 ಭಾಗವಾಗಿ ಭಾರತಕ್ಕೆ ಬಂದಿರುವ ಮೆಸ್ಸಿ
  • ಸರಳ ಮತ್ತು ಮನೆಯ ರುಚಿಯ ಆಹಾರಗಳನ್ನು ತುಂಬಾ ಇಷ್ಟಪಡುತ್ತಾರೆ
ನವದೆಹಲಿ: ಇಂಡಿಯಾ GOAT ಟೂರ್​-2025 ಭಾಗವಾಗಿ ಇದೇ ಡಿ.13ರಂದು ಲಿಯೋನೆಲ್ ಮೆಸ್ಸಿ ಭಾರತಕ್ಕೆ ಬಂದಿಳಿದ್ದಾರೆ. ಅಲ್ಲದೆ, ಕೋಲ್ಕತ್ತಾ ಸೇರಿ ಹೈದರಾಬಾದ್​, ಮುಂಬೈ ಮತ್ತು ದೆಹಲಿ ನಗರದಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಅವರ ನೆಚ್ಚಿನ ಆಹಾರಗಳೇನು? ಎಂಬುದು ತಿಳಿಯೋಣ..
ಅರ್ಜೆಂಟೀನಾದ ದಂತಕಥೆಯ ಆಟಗಾರ ಲಿಯೋನೆಲ್ ಮೆಸ್ಸಿ ತನ್ನ ಸರಳ ಮತ್ತು ಮನೆಯ ರುಚಿಯ ಆಹಾರಗಳನ್ನು ತುಂಬಾ ಇಷ್ಟಪಡುತ್ತಾರೆ. ಅವರ ನೆಚ್ಚಿನ ಆಹಾರಗಳು ಹೆಚ್ಚಾಗಿ ಅರ್ಜೆಂಟೀನಾ ಸಾಂಪ್ರದಾಯಿಕ ಭೋಜನಗಳಿಂದ ಸ್ಫೂರ್ತಿ ಪಡೆದಿವೆ. ಅಲ್ಲದೆ, ಸಿಹಿ ತಿಂಡಿಗಳಂದ್ರೆ ಪಂಚಪ್ರಾಣ. ಹೌದು, ಲಿಯೋನೆಲ್ ಮೆಸ್ಸಿಗೆ ಸಿಹಿ ತಿಂಡಿಗಳ ಮೇಲೆ ಒಲವು ಇದೆ ಎಂದು ತಿಳಿದು ಆಶ್ಚರ್ಯಪಡಬೇಡಿ. ಇದು ಅವರು ತಮ್ಮ ಮನೆಯ ಜೀವನ ಮತ್ತು ವೈಯಕ್ತಿಕ ಅಭಿರುಚಿಗಳನ್ನು ಪ್ರತಿಬಿಂಬಿಸುವ ಸಂದರ್ಶನಗಳಲ್ಲಿ ಬಹಿರಂಗವಾಗಿ ಮಾತನಾಡಿದ್ದಾರೆ.
Goal.com ಪ್ರಕಾರ, ಮೆಸ್ಸಿ "ಚಾಕೊಲೇಟ್, ಡಲ್ಸೆ ಡಿ ಲೆಚೆ, ಐಸ್ ಕ್ರೀಮ್" ಅನ್ನು ಇಷ್ಟಪಡುತ್ತಾರೆ. ಅವರು ಅವುಗಳನ್ನು ಮಿತವಾಗಿ ಆನಂದಿಸುತ್ತಾರೆ. "ನನಗೆ ಸಿಹಿಯಾದ ಎಲ್ಲವೂ ಇಷ್ಟ, ನಾನು ಅದನ್ನು ಪ್ರೀತಿಸುತ್ತೇನೆ. ನಾನು ಸ್ವಲ್ಪ ತಿನ್ನಲು ಪ್ರಯತ್ನಿಸುತ್ತೇನೆ. ಆದರೆ, ಆಗಾಗ ನನಗೆ ಅದು ಇಷ್ಟವಾಗುತ್ತದೆ." ಎಂದು ಮೆಸ್ಸಿ ಸಂದರ್ಶನದಲ್ಲಿ ಹೇಳಿದ್ದಾರೆ.

ಪ್ರಮುಖ ನೆಚ್ಚಿನ ಆಹಾರಗಳು

1.ಮಿಲನೇಸಾ ನಪೊಲಿಟಾನಾ (Milanesa Napolitana)
ಬ್ರೆಡ್‌ಕ್ರಂಬ್‌ಗಳಲ್ಲಿ ಹಾಕಿ ಹುರಿದ ಮಾಂಸದ ಕಟ್ಲೆಟ್ (ಸಾಮಾನ್ಯವಾಗಿ ಗೋಮಾಂಸ ಅಥವಾ ಚಿಕನ್), ಮೇಲೆ ಟೊಮ್ಯಾಟೋ ಸಾಸ್, ಹ್ಯಾಮ್ ಮತ್ತು ಚೀಸ್ ಹಾಕಿ. ವಿಶೇಷವಾಗಿ ಅವರ ತಾಯಿ ಸೆಲಿಯಾ ಅವರು ಮಾಡುವ ಚಿಕನ್ ಮಿಲನೇಸಾ ಅವರ ಅತ್ಯಂತ ನೆಚ್ಚಿನದು.
2.ಅಸಾಡೋ (Asado)
ಅರ್ಜೆಂಟೀನಾದ ಸಾಂಪ್ರದಾಯಿಕ ಬಾರ್ಬಿಕ್ಯೂ – ಗ್ರಿಲ್ ಮಾಡಿದ ಮಾಂಸ (ಗೋಮಾಂಸದ ವಿವಿಧ ಭಾಗಗಳು).
3.ಪಾಸ್ತಾ, ಪಿಜ್ಜಾ ಮತ್ತು ರೋಸ್ಟೆಡ್ ಚಿಕನ್: ಸರಳ ಇಟಾಲಿಯನ್-ಪ್ರಭಾವಿತ ಭೋಜನಗಳು.
4. ಚಾಕೊಲೇಟ್, ಡಲ್ಸೆ ಡಿ ಲೆಚೆ (ಕ್ಯಾರಮೆಲ್), ಐಸ್‌ಕ್ರೀಮ್ – ಅವರಿಗೆ ಸಿಹಿ ತಿನಿಸುಗಳು ದೌರ್ಬಲ್ಯ.
5.ಯೆರ್ಬಾ ಮೇಟ್ ಹೆಸರಿನ ಪಾನೀಯ (Yerba Mate) ಕುಡಿಯಲು ಇಷ್ಟಪಡುತ್ತಾರೆ, ಅದು ಅರ್ಜೆಂಟೀನಾದಲ್ಲಿ ಜನಪ್ರಿಯ ಪಾನೀಯ,(ಏಜೆನ್ಸೀಸ್​).