ದಳಪತಿ ವಿಜಯ್ 
ದೇಶ

ಪಂಚರಾಜ್ಯ ಚುನಾವಣೆ ಫಲಿತಾಂಶ; ತಮಿಳುನಾಡಿನ ಕಿಂಗ್ ಆಗುವತ್ತಾ ದಳಪತಿ ವಿಜಯ್; ಸರಳ ಬಹುಮತದತ್ತ ಟಿವಿಕೆ | Thalapathy Vijay

ಚೆನ್ನೈ: 2026ರ ತಮಿಳುನಾಡು ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ಯಾರೂ ಊಹಿಸದ ಅಚ್ಚರಿ ಫಲಿತಾಂಶ ಹೊರ ಬೀಳುತ್ತಿದ್ದು, ತಮಿಳು ಸೂಪರ್ ಸ್ಟಾರ್ ವಿಜಯ್ ಅವರ ಟಿವಿಕೆ ಚೊಚ್ಚಲ ಪ್ರವೇಶದಲ್ಲೇ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಸರಳ ಬಹುಮತ ಪಡೆಯುವ ಸಾಧ್ಯತೆ ಇದೆ.
ತಮಿಳುನಾಡು ವಿಧಾನಸಭೆಯಲ್ಲಿ ಒಟ್ಟು 234 ಸ್ಥಾನಗಳಲ್ಲಿ ಮ್ಯಾಜಿಕ್ ನಂಬರ್ 118 ಆಗಿದೆ. ವಿಜಯ್ ನೇತೃತ್ವದ ಟಿವಿಕೆ ಈಗಾಗಲೇ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಪ್ರಸ್ತುತ 11.30ರ ಟ್ರೆಂಡ್ ಪ್ರಕಾರ, ಟಿವಿಕೆ 115 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ರೆ, ಆಡಳಿತಾರೂಢ ಡಿಎಂಕೆ ಮೈತ್ರಿಕೂಟ ಸುಮಾರು 50 ಸ್ಥಾನಗಳಲ್ಲಿ ಮುಂದಿದೆ. ವಿರೋಧ ಪಕ್ಷದ ಎಐಎಡಿಎಂಕೆ ಮೈತ್ರಿಕೂಟ ಸುಮಾರು 73 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ರಾಜಧಾನಿ ಚೆನ್ನೈನಲ್ಲಿ ಡಿಎಂಕೆ ಮುನ್ನಡೆ ಸಾಧಿಸಿದ್ರೆ, ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಟಿವಿಕೆ ಮುಂದಿದೆ. ಇನ್ನೂ ಸರಳ ಬಹುಮತ ಬರದಿದ್ರೂ, ಅತಂತ್ರ ವಿಧಾನಸಭೆಯಾದ್ರೂ ದೊಡ್ಡ ಪಕ್ಷವಾಗಿರುವ ಟಿವಿಕೆ ಸರ್ಕಾರ ರಚಿಸಲಿದೆ ಎನ್ನಲಾಗಿದೆ. ವಿಪಕ್ಷ ಎಐಎಡಿಎಂಕೆ ಬೆಂಬಲ ನೀಡುವ ಸಾಧ್ಯತೆ.
ಈ ಕುರಿತು ಇಂಡಿಯಾ ಟುಡೇ ಜೊತೆ ಮಾತನಾಡಿರುವ ಟಿವಿಕೆ ನಾಯಕ ಫೆಲಿಕ್ಸ್ ಜೆರಾಲ್ಡ್, ಇದು ವಿಜಯ್ ಅಲೆ ಎಂದು ಬಣ್ಣಿಸಿದ್ದು, ತಮಿಳುನಾಡಿನಲ್ಲಿ ಮತದಾರರು ರಾಜಕೀಯ ಪರ್ಯಾಯವನ್ನು ಹುಡುಕುತ್ತಿದ್ದಾರೆ. ನರು ಡಿಎಂಕೆ ಮತ್ತು ಎಐಎಡಿಎಂಕೆ ಎರಡರಿಂದಲೂ ಬೇಸತ್ತಿದ್ದಾರೆ... ಇದು ಸಾಮಾನ್ಯ ಚುನಾವಣೆಯಲ್ಲ. ಪಕ್ಷಕ್ಕೆ ಯಾವುದೇ ಪಕ್ಷದ ಬಾಹ್ಯ ಬೆಂಬಲ ಅಗತ್ಯವಿಲ್ಲ ಮತ್ತು ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಹಾದಿಯಲ್ಲಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).