ಎಕೆ-47ನಿಂದ ಗುಂಡು ಹಾರಿಸಿ ಕಾನ್‌ಸ್ಟೆಬಲ್‌ 
ದೇಶ

AK-47ನಿಂದ 4 ಸುತ್ತು ಫೈರಿಂಗ್; ‘ಬೇರೆ ದಾರಿ ಇರಲಿಲ್ಲ’ ಎಂದ ಬಿಹಾರ ಪೊಲೀಸರು | Firing from AK-47

ಪ್ರಮುಖ ಮುಖ್ಯಾಂಶಗಳು

  • ಸಿವಾನ್‌ನ ಪ್ರತಿಭಟನೆ ವೇಳೆ AK-47ನಿಂದ ಗುಂಡು ಹಾರಿಸಿದ್ದ ಕಾನ್‌ಸ್ಟೆಬಲ್
  • ಪ್ರತಿಭಟನಾಕಾರರ ಗುಂಪಿನಲ್ಲಿ ಸಿಲುಕಿದ್ದರಿಂದ ಫೈರಿಂಗ್ ಎಂದ ಪೊಲೀಸರು
  • ಯಾರಿಗೂ ಗಾಯವಾಗಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಖಾಕಿ ಮಾಹಿತಿ
Firing from AK-47: ಪ್ರತಿಭಟನೆ ವೇಳೆ ಕಾನ್‌ಸ್ಟೆಬಲ್‌ ಒಬ್ಬ ಎಕೆ-47ನಿಂದ ನಾಲ್ಕು ಸುತ್ತು ಗುಂಡು ಹಾರಿಸಿದ್ದನು. ಈ ಘಟನೆಗೆ ಕುರಿತಂತೆ, ಪ್ರತಿಭಟನಾಕಾರರ ನಡುವೆ ಸಿಲುಕಿಕೊಂಡಿದ್ದರಿಂದ ಅನಿವಾರ್ಯವಾಗಿ AK-47ನಿಂದ ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು ಎಂದು 

ಬಿಹಾರ ಪೊಲೀಸರು 

ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ಇನ್ನು, ಜುಲೈ 25ರಂದು ಸಿವಾನ್‌ನಲ್ಲಿ ನಡೆದ ಧರಣಿ ವೇಳೆ ಜಿಲ್ಲಾ ಗುಪ್ತಚರ ಘಟಕದ (DIU) ಕಾನ್‌ಸ್ಟೆಬಲ್‌ ಎಕೆ-47ನಿಂದ ನಾಲ್ಕು ಸುತ್ತು ಗುಂಡು ಹಾರಿಸಿದ್ದ. ಈ ಘಟನೆಗೆ ಸಂಬಂಧಿಸಿದಂತೆ ಬಿಹಾರ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ, ಕಾನ್‌ಸ್ಟೆಬಲ್‌ ಪ್ರತಿಭಟಗಾರರ ಗುಂಪಿನಲ್ಲಿ ಸಿಲುಕಿದ್ದರಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದರು ಎಂದು ವಾದ ಮಂಡಿಸಿದ್ದಾರೆ.

ಪರಿಸ್ಥಿತಿ ಉದ್ವಿಗ್ನ

ಇನ್ನೊಂದೆಡೆ, ಪೊಲೀಸರ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರಿಂದ ಸಿವಾನ್‌ನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿತ್ತು. ಕಲ್ಲೆಸೆತದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ 20 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಎರಡು ಪೊಲೀಸ್ ವಾಹನಗಳಿಗೂ ಹಾನಿಯಾಗಿದೆ ಎಂದು ಆರಕ್ಷಕರು ತಿಳಿಸಿದ್ದಾರೆ.

ಪ್ರತಿಭಟನಾಕಾರರಿಗೆ ಸಣ್ಣ-ಪುಟ್ಟ ಗಾಯ

ಇದೇ ವೇಳೆ, ಅವಘಡದಲ್ಲಿ ಮೂವರು ಪ್ರತಿಭಟನಾಕಾರರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಆದರೆ ಈ ಗಾಯಗಳು ಎಕೆ-47 ಗುಂಡಿನಿಂದ ಆಗಿಲ್ಲ ಎಂದು ಖಾಕಿ ಸ್ಪಷ್ಟಪಡಿಸಿದೆ. ಗಾಯಗೊಂಡವರ ಮೇಲೆ ಬ್ಯಾಲಿಸ್ಟಿಕ್ ಪರೀಕ್ಷೆ ನಡೆಯುತ್ತಿದ್ದು, ಯಾವ ಶಸ್ತ್ರದಿಂದ ಗುಂಡು ಹಾರಿಸಲಾಗಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ.

ಕಾನ್‌ಸ್ಟೆಬಲ್‌ ಅಮಾನತು

ಎಕೆ-47 ಅನ್ನು ಕಾನೂನು ಸುವ್ಯವಸ್ಥೆ ಕಾಪಾಡುವ ಸಾಮಾನ್ಯ ಕಾರ್ಯಾಚರಣೆಯಲ್ಲಿ ಬಳಸುವಂತಿಲ್ಲ; ಇದು ವಿಶೇಷ ಕಾರ್ಯಾಚರಣೆಗಳಿಗೆ ಬಳಸುವ ಶಸ್ತ್ರಾಸ್ತ್ರ ಎಂದು ಬಿಹಾರ ಪೊಲೀಸರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. ಘಟನೆ ಬಳಿಕ ಗನ್​ ಬಳಸಿದ ಕಾನ್‌ಸ್ಟೆಬಲ್‌ನನ್ನು ವಜಾ ಮಾಡಲಾಗಿದ್ದು, ವಿಚಾರಣೆಯನ್ನೂ ಆರಂಭಿಸಿದ್ದೇವೆ ಎಂದಿದ್ದಾರೆ,(ಏಜೆನ್ಸೀಸ್​).