ಬೆಂಕಿ ಅವಘಡದ ಸ್ಥಳದ ಚಿತ್ರ 
ದೇಶ

ಕಟ್ಟಡದಲ್ಲಿ ಅಗ್ನಿಅವಘಡ; ಒಂದೇ ಕುಟುಂಬದ ಐವರು ಸಜೀವ ದಹನ; ಐವರಿಗೆ ಗಾಯ| Fire

ಮುಜಫರ್‌ಪುರ : ಬಿಹಾರದ ಮುಜಫರ್​ಪುರದಲ್ಲಿ ಶುಕ್ರವಾರ(ನ. 14) ತಡರಾತ್ರಿ ಮನೆಯೊಂದರಲ್ಲಿ ಅಗ್ನಿ(Fire) ಅವಘಡ ಸಂಭವಿಸಿದ್ದು, ಒಂದೇ ಕುಟುಂಬದ ಐವರು ಸಜೀವ ದಹನವಾಗಿದ್ದಾರೆ. ಇನ್ನೂ ಐವರು ತೀವ್ರ ಸುಟ್ಟು ಗಾಯಗಳಿಂದ ಗಾಯಾಗೊಂಡಿದ್ದಾರೆ ಎಂದು ವರದಿಯಾಗಿದೆ.
ಮೋತಿಪುರ ಪ್ರದೇಶದ ವಾರ್ಡ್ 13 ರಲ್ಲಿ ಮಧ್ಯರಾತ್ರಿ ಸುಮಾರಿಗೆ ಘಟನೆ ನಡೆದಿದೆ. ಮೃತರನ್ನು ಲಾಲನ್ ಶಾ, ಅವರ ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳು ಎಂದು ಗುರುತಿಸಲಾಗಿದೆ. ಬದುಕುಳಿದ ಗಾಯಾಳುಗಳನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಈ ಕುರಿತು ಮಾತನಾಡಿರುವ ಎಸ್​ಪಿ ಸುಚಿತ್ರಾ ಕುಮಾರಿ, ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ನಡೆದಿರಬಹುದು. ಬೆಂಕಿಯು ಕಟ್ಟಡದ ಮೂರನೇ ಮಹಡಿಯನ್ನು ಆವರಿಸಿದೆ. ಈ ವೇಳೆ ನಿವಾಸಿಗಳು ಮಲಗಿದ್ದರು. ಐವರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ. ತಕ್ಷಣ ಅಗ್ನಿಶಾಮಕದಳ ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಂದಿಸಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಲಾಗಿದೆ ಎಂದು ಹೇಳಿದ್ದಾರೆ.
ಮೊದಲು ಬೆಂಕಿಯನ್ನು ಗಮನಿಸಿದ ಕುಟುಂಬಸ್ಥರು ಸಹಾಯಕ್ಕಾಗಿ ಕೂಗಿದ್ದಾರೆ. ತಕ್ಷಣ ಕೂಗು ಕೇಳಿದ ಸ್ಥಳೀಯರು ಸ್ಥಳಕ್ಕಾಗಮಿಸಿದರೂ, ಬೆಂಕಿಯ ತೀವ್ರತೆಯನ್ನು ಹಾರಿಸಲು ಸಾಧ್ಯವಾಗಿಲ್ಲ. ತಕ್ಷಣ ಪೊಲೀಸರು, ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ (ಏಜೆನ್ಸೀಸ್).