ಮಗುವನ್ನು ಯಮುನಾ ನದಿಗೆ ಎಸೆದ ಅಪ್ಪ 
ದೇಶ

ಹೆಂಡತಿ ಜೊತೆ ಕಿರಿಕ್​; 11 ತಿಂಗಳ ಮಗಳನ್ನು ಯಮುನಾ ನದಿಗೆ ಎಸೆದ ಅಪ್ಪ | Father throws child into river

ಪ್ರಮುಖ ಮುಖ್ಯಾಂಶಗಳು

  • ಹೆಂಡತಿ ಜೊತೆ ಜಗಳವಾಡಿ ಮಗಳನ್ನು ನದಿಗೆ ಎಸೆದ ತಂದೆ
  • ಮಗುವಿಗಾಗಿ ಯಮುನಾ ನದಿಯಲ್ಲಿ ಶೋಧ ಕಾರ್ಯ
  • ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದ ಆಘಾತಕಾರಿ ಘಟನೆ
ಉತ್ತರ ಪ್ರದೇಶದ: ಹೆಂಡತಿ ಜೊತೆ ಜಗಳ ಮಾಡಿಕೊಂಡ ಕೋಪದಲ್ಲಿ ವ್ಯಕ್ತಿಯೊಬ್ಬ ತನ್ನ 11 ತಿಂಗಳ ಮಗಳನ್ನು ಯಮುನಾ ನದಿಗೆ ಎಸೆದಿರುವ ಆಘಾತಕಾರಿ ಘಟನೆ ಆಗ್ರಾದಲ್ಲಿ ನಡೆದಿದೆ. ಕೃತ್ಯದ ಬಳಿಕ ಆರೋಪಿ ರಿಂಕುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದಂಪತಿ ನಡುವೆ ಕಿರಿಕ್​

ಆರೋಪಿ ರಿಂಕು ತನ್ನ ಹೆಂಡತಿ ಹಾಗೂ ಮಗಳೊಂದಿಗೆ ಬೈಕ್‌ನಲ್ಲಿ ಸೇತುವೆ ಬಳಿ ಹೋಗಿದ್ದ. ಈ ವೇಳೆ ದಂಪತಿ ನಡುವೆ ಕಿರಿಕ್​ ಶುರುವಾಗಿದೆ. ಜಗಳದ ವೇಳೆ ರಿಂಕು ಮೊದಲು ಹೆಂಡತಿಯನ್ನು ನದಿಗೆ ತಳ್ಳಲು ಯತ್ನಿಸಿದ್ದಾನೆ. ಹೆಂಡತಿ ಜೋರಾಗಿ ಕಿರುಚಿಕೊಂಡಿದ್ದರಿಂದ ಸ್ಥಳದಲ್ಲಿದ್ದವರು ಓಡಿ ಬಂದು ಆಕೆಯನ್ನು ಕಾಪಾಡಿ, ಬಳಿಕ ರಿಂಕುವನ್ನು ಹಿಡಿದು ಥಳಿಸಿದ್ದಾರೆ. ಅದಾದ ನಂತರ ರಿಂಕು ತನ್ನ 11 ತಿಂಗಳ ಮಗಳನ್ನು ಯಮುನಾ ನದಿಗೆ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೌಟುಂಬಿಕ ಕಲಹದಿಂದ ಕೃತ್ಯ

ಹೆಂಡತಿ ಮೇಲಿನ ಕೋಪಕ್ಕೆ

ಆರೋಪಿ ಹೀಗೆ ಮಾಡಿದ್ದಾನೆ, ರಿಂಕುವನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಧ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ,(ಏಜೆನ್ಸೀಸ್​).